ಹಣದ ಆಸೆಗೆ ಮುದ್ದಾದ ಮಗಳನ್ನು ಆಂಕಲ್.ಗೆ ಕೊಟ್ಟ ತಂದೆ, ಮೊದಲ ರಾತ್ರಿ ನಂತರ ಏ ನಾಯಿತು ಗೊ.ತ್ತಾ
ಕಾಪಾಡಬೇಕಾದ ತಂದೆ ತನ್ನ ಸೋದರ ಸಂಬಂಧಿಯೊಬ್ಬರನ್ನು ಪ್ರೀತಿಸಿ ಮದುವೆಯಾಗ್ತೀನಿ ಎಂದಿದ್ದ ಅಪ್ರಾಪ್ತ ಮಗಳಿಗೆ ಬುದ್ದಿ ಹೇಳಿದ್ದ. ಬುದ್ದಿ ಕೇಳದೆ ಹೋದಾಗ ಬೇರೆ ಯುವಕನಿಗೆ ಕೊಟ್ಟು ಮದುವೆ ಮಾಡಿದ್ದ. ಆಗಲೂ ಮಾತು ಕೇಳದೆ ಹೋದಾಗ ಆ ತಂದೆ ಮರ್ಯಾದಗಂಜಿ ತನ್ನ ಮಗಳನ್ನೇ ಹೊಡೆದು ಕೊಂದಿದ್ದಾನೆ. ಅಷ್ಟಕ್ಕೂ ಆತ ಕೊಂದ ಮಗಳ ಮರ್ಡರ್ ಮಿಸ್ಟರಿ ಬಯಲಾಗಲು 8 ತಿಂಗಳೇ ಬೇಕಾಗಿದೆ.
ಅಷ್ಟಕ್ಕೂ ಆಗಿದ್ದೇನು ಅಂತಾ ನೋಡುವುದಾದರೆ ಮುಸ್ಟೂರು ಗ್ರಾಮಕ್ಕೆ ಹೊಂದಿಕೊಂಡಿರುವ ಮರವೆಮನೆ ಅನ್ನೋ ಕಾಲೋನಿಯಲ್ಲಿ ವಾಸವಿರುವ ರವಿ ಎಂಬುವನಿಗೆ 4 ಜನ ಮಕ್ಕಳು. ಈ ಪೈಕಿ ಒಬ್ಬಳು ಮಗಳಿಗೆ ಮದುವೆಯಾಗಿತ್ತು. 2ನೇ ಮಗಳು ಅರ್ಚಿತಾ ಇನ್ನು ಅಪ್ರಾಪ್ತೆಯಾಗಿದ್ದು, ದ್ವಿತೀಯ ಪಿಯುಸಿ ಓದುತ್ತಿದ್ದಳು. ಹೀಗಿರುವಾಗಲೇ ಮಗಳು ಅರ್ಚಿತಾ ತನ್ನ ಸೋದರ ಸಂಬಂಧಿ ಯುವಕನನ್ನು ಪ್ರೀತಿಸುತ್ತಿರುತ್ತಾಳೆ.
ಈ ವೇಳೆ ತಂದೆ ರವಿ ಮಗಳಿಗೆ ಬುದ್ದಿಮಾತು ಹೇಳಿದ್ದ. ಆದರೆ ಆಕೆ ಕೇಳದೆ ಹೋದಾಗ ಕೋಲಾರ ತಾಲೂಕಿನ ಜೋಡಿಕೃಷ್ಣಾಪುರ ಗ್ರಾಮದ 40 ವರ್ಷದ ವ್ಯಕ್ತಿ ಗೆ ಕೊಟ್ಟು 2023ರ ಏಪ್ರಿಲ್ ತಿಂಗಳಲ್ಲಿ 13 ಲಕ್ಷದಷ್ಟು ವರದಕ್ಷಿಣೆ ಪಡೆದು ಮದುವೆ ಮಾಡಿ ಮುಗಿಸಿದ್ದ. ಮದುವೆಯಾದರೂ ಸಹ ಮಗಳು ಮಾತು ಕೇಳದೆ, ತನ್ನ ಪ್ರಿಯಕರನ ಜೊತೆಗೆ ಫೋನ್‍ನಲ್ಲಿ ಮಾತನಾಡುವುದು, ಗಂಡನೊಂದಿಗೆ ಸೇರದೆ ಹಟ ಮಾಡುವುದು ಮಾಡಿದ್ದಳಂತೆ.
ಈ ಕಾರಣಕ್ಕೆ ‘ನಿನ್ನ ಮಗಳನ್ನು ಕರೆದುಕೊಂಡು ಹೋಗು’ ಎಂದು ಅಳಿಯ ಒತ್ತಾಯಿಸಿದ್ದಾನೆ. ಅದರಂತೆ ಮೇ 21ರಂದು ತನ್ನ ಮಗಳನ್ನು ಮನೆಗೆ ಕರೆತರಲು ತಂದೆ ಹೋಗುತ್ತಾನೆ. ವಾಪಸ್ ಕರೆತಂದ ಬಳಿಕ ತಂದೆ, ಮಗಳಿಂದ ತನ್ನ ಮರ್ಯಾದೆ ಹೋಗುತ್ತದೆ ಅಂತಾ ಭಾವಿಸಿ ಆಕೆಯನ್ನು ತೋಟದ ಮನೆಯಲ್ಲಿ ಹೊಡೆದು ಕೊಂದು ಹಾಕಿದ್ದಾನೆ. ನಂತರ ಅಂದು ರಾತ್ರಿಯೇ ಅಕೆಯ ಶವವನ್ನು ಸುಟ್ಟು ಹಾಕಿದ್ದಾನೆ. ನಂತರ ಮಗಳು ಕಾಣಿಯಾಗಿದ್ದಾಳೆ ಅಂತಾ ತಾನೇ ದೂರು ಕೊಟ್ಟು ಸುಮ್ಮನಾಗಿದ್ದ.
ಬಳಿಕ ಕೋಲಾರ ಎಸ್ಪಿ ಕಚೇರಿಗೆ ಗ್ರಾಮದ ಯಾರೋ ಕೆಲವರು ದೂರು ನೀಡಿದ್ದಾರೆ. ತಂದೆಯೇ ಮಗಳನ್ನು ಕೊಂದು ಹಾಕಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ತನಿಖೆ ನಡೆಸುವಂತೆ ಹೇಳಿದ್ದಾರೆ. ಅದರಂತೆ ತನಿಖೆ ನಡೆಸಿದ ಪೊಲೀಸರಿಗೆ ತಂದೆಯೇ ಮಗಳನ್ನು ಕೊಂದು ಸುಟ್ಟು ಹಾಕಿರುವುದು 8 ತಿಂಗಳ ನಂತರ ತಿಳಿದುಬಂದಿದೆ.
ಪ್ರಕರಣ ಸಂಬಂಧ ಪೊಲೀಸರು ಮಗಳನ್ನು ಕೊಂದ ತಂದೆ ರವಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
ಈ ಹಿನ್ನೆಲೆ ನಂಗಲಿ ಪೊಲೀಸರು ಮತ್ತು ಎಫ್ಎಸ್ಎಲ್ ತಂಡ ತಹಶೀಲ್ದಾರ್ ಸಮ್ಮುಖದಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದು, ಅರ್ಚಿತಾಳನ್ನು ಕೊಂದು ಸುಟ್ಟುಹಾಕಿರುವ ಸ್ಥಳದಲ್ಲಿ ಶವದ ಅವಶೇಷಗಳನ್ನು ಸಂಗ್ರಹಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ನಾರಾಯಣ್ ಸೇರಿದಂತೆ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.