ಮಂಗಳೂರಿನ ಅಜ್ಜಿ ರೈಲು ನಿಲ್ಲಿಸಿದ ಆ ರೋಚಕ ದೃಶ್ಯ ಮೊಬೈಲ್ ನಲ್ಲಿ ಸೆರೆ, ಮೆಚ್ಚಿಕೊಂಡ ಕನ್ನಡಿಗರು

 

ಮಹಿಳೆಯೊಬ್ಬರ  ಸಮಯಪ್ರಜ್ಞೆಯಿಂದ ಭಾರೀ ಅನಾಹುತವೊಂದು  ತಪ್ಪಿದೆ.  ಹೌದು ರೈಲು ಹಳಿಗೆ ಮರವೊಂದು ಬಿದ್ದಿತ್ತು ಎನ್ನಲಾಗಿದೆ. ಇದನ್ನು ಗಮನಿಸಿದ 70ರ ಹರೆಯದ ಮಹಿಳೆ ಮುಂದಾಗುವ ಅವಾಂತರವನ್ನು ‌ಮನದಟ್ಟು ಮಾಡಿಕೊಂಡು ಅವಘಡ ಸಂಭವಿಸುವ ಮುನ್ನವೇ ರೈಲನ್ನು ನಿಲ್ಲಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಪಡೀಲ್‌ – ಜೋಕಟ್ಟೆ ಮಧ್ಯೆಯ ಪಚ್ಚನಾಡಿ ಸಮೀಪ ಮಂದಾರದಲ್ಲಿ ಈ ಘಟನೆ ನಡೆದಿದ್ದು, ಕುಡುಪು ಆಯರ ಮನೆ ಚಂದ್ರಾವತಿ ಅವರು ಈ ಅವಘಡ ಸಂಭವಿಸುವುದನ್ನು ಗಮನಿಸಿ ಕೂಡಲೇ ಎಚ್ಚೆತ್ತುಕೊಂಡು ಸಮಯಪ್ರಜ್ಞೆಯಿಂದ ಕೆಂಪು ಬಟ್ಟೆಯನ್ನು ಕೈಯಲ್ಲಿ ಪ್ರದರ್ಶಿಸಿ ರೈಲು ನಿಲ್ಲಿಸುವ ಮೂಲಕ ಸಂಭಾವ್ಯ ರೈಲು ಅಪಘಾತವನ್ನು ತಡೆದ ಅಪರೂಪದ ಘಟನೆ ಜರುಗಿದೆ. ಚಂದ್ರಾವತಿ ಅವರು ಊಟ ಮಾಡಿ ಮನೆಯ ಅಂಗಳದಲ್ಲಿ ನಿಂತಿದ್ದ ಸಂದರ್ಭ ಮನೆ ಎದುರಿನ ರೈಲು ಹಳಿಗೆ ಏನೋ ಬಿದ್ದ ಶಬ್ದ ಕೇಳಿ ಬಂದಿದೆ. ಹಾಗಾಗಿ, ಅದೇನು ಎಂದು ಗಮನಿಸಲು ಹೋದಾಗ ದೊಡ್ಡ ಮರ ಹಳಿಯಲ್ಲಿತ್ತು ಎನ್ನಲಾಗಿದೆ. 

ಮಾರ್ಚ್ 21ರಂದು ಮಧ್ಯಾಹ್ನ ಸುಮಾರು 2.10ರ ಸುಮಾರಿಗೆ ರೈಲು ಹಳಿಗೆ ಮರವೊಂದು ಬಿದ್ದಿದೆ ಎನ್ನಲಾಗಿದೆ. ಅದೇ ಸಮಯಕ್ಕೆ ಮಂಗಳೂರಿನಿಂದ ಮುಂಬಯಿಗೆ ಮತ್ಸ್ಯಗಂಧ ರೈಲು ಸಂಚರಿಸುವುದರಲ್ಲಿತ್ತು. ಆಯರಮನೆ ಸಮೀಪ ರೈಲ್ವೇ ಹಳಿಗೆ ಮರ ಬಿದ್ದಿದ್ದನ್ನು ಗಮನಿಸಿದ 70 ರ ಹರೆಯದ ಇದೇ ಸಮಯಕ್ಕೆ ರೈಲು ಬರುವುದನ್ನು ಅರಿತಿದ್ದ ಚಂದ್ರಾವತಿ ಯಾರಿಗಾದರೂ ಕರೆ ಮಾಡಿ ತಿಳಿಸುವ ಎಂದು ಮನೆಗೆ ಬಂದಿದ್ದರಂತೆ. ಅಷ್ಟರಲ್ಲಿ ರೈಲಿನ ಹಾರ್ನ್ ಕೇಳಿತು ಎನ್ನಲಾಗಿದೆ.

ಕಡಿಮೆ ಅವಧಿಯಲ್ಲಿ ಏನು ಮಾಡಬೇಕೆಂದು ತೋಚದೇ ಅಲ್ಲೇ ಕೆಂಪು ಬಟ್ಟೆ ಕಂಡಿದ್ದು, ಕೂಡಲೇ 70 ವರ್ಷ ಪ್ರಾಯದ ಚಂದ್ರಾವತಿ ಅವರು ಕೆಂಪು ಬಟ್ಟೆ ಹಿಡಿದು ಇನ್ನೊಂದು ಹಳಿಯಲ್ಲಿ ನಿಂತು ರೈಲು ನಿಲ್ಲಿಸಲು ಸೂಚನೆ ನೀಡಿದ್ದಾರೆ. ರೈಲು ಬರುವ ಸಮಯಕ್ಕೆ ಪ್ರದರ್ಶಿಸಿದಾಗ ಲೋಕೋಪೈಲೆಟ್‌ ಅಪಾಯವಿದೆ ಎಂದೆನಿಸಿ ಲೋಕೋಪೈಲೆಟ್‌ ರೈಲಿನ ವೇಗವನ್ನು ಕಡಿಮೆ ಮಾಡಿ ರೈಲನ್ನು ನಿಲ್ಲಿಸುವ ಮೂಲಕ ಸಂಭಾವ್ಯ ಅನಾಹುತವನ್ನ ತಡೆದಿದ್ದಾರೆ. 

ಆ ಬಳಿಕ, ಅರ್ಧ ತಾಸು ರೈಲು ನಿಲುಗಡೆಯಾಗಿ, ಸ್ಥಳೀಯರು ಹಾಗೂ ರೈಲ್ವೇ ಇಲಾಖೆಯ ಕೆಲವರು ಸೇರಿ ಮರ ತೆರವು ಮಾಡಿದ್ದಾರೆ ಎಂದು ತಿಳಿದು ಬಂದಿದೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.