ಕುಡುಕರು ಎದೆ ಝಲ್ ಎನ್ನುವ ಸುದ್ದಿ, ಎಣ್ಣೆ ಅಂಗಡಿ ಕೊಡುತ್ತಿದೆ ದೊಡ್ಡ ಶಾ.ಕ್
ಬೆಲೆ ಏರಿಕೆ ಮಧ್ಯೆ ಎಣ್ಣೆ ಪ್ರಿಯರಿಗೆ ಶಾಕಿಂಗ್ ಸುದ್ದಿ ಲಭಿಸಿದೆ. ಅಬಕಾರಿ ಸುಂಕ ಏರಿಕೆಯಾಗಿದ್ದು, ಮದ್ಯದ ದರ ಹೆಚ್ಚಳವಾಗಿದೆ. ಹಾಗಾದ್ರೆ ಎಣ್ಣೆ ರೇಟ್ ಎಷ್ಟು ಹೆಚ್ಚಳವಾಗಿದೆ?ಎಣ್ಣೆ ಪ್ರೀಯರಿಗೆ ಬರೆ ಬಿದ್ದಿದ್ದೇಕೆ ಬನ್ನಿ ನೋಡೋಣ.
ಇಂದಿನಿಂದ ಮದ್ಯ ಪ್ರಿಯರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಅಬಕಾರಿ ಸುಂಕ ಹೆಚ್ಚಳ ಹಿನ್ನೆಲೆ ಇಂದಿನಿಂದ ಮದ್ಯ ದುಬಾರಿಯಾಗಲಿದೆ. ಮಾತ್ರವಲ್ಲ ಮದ್ಯ ವ್ಯಾಪಾರಿಗಳು ಒಂದಕ್ಕೆ ಎರಡರಂತೆ ಹಣ ಪೀಕುತ್ತಿದ್ದಾರೆ. ರಾಜ್ಯದ್ಯಾಂತ ನಿನ್ನೆ ಮಧ್ಯರಾತ್ರಿಯಿಂದ ಹೊಸ ದರ ಜಾರಿಯಾಗಿದೆ.
ಸದ್ಯ ಇದೀಗ ಬಿಯರ್ ಬೆಲೆ 10% ಏರಿಕೆಯಾಗಿದ್ದು, ಇತರ ಮದ್ಯಗಳ ಬೆಲೆ 20%ನಷ್ಟು ಏರಿಕೆಯಾಗಿದೆ. ಹಿಂದೆ ಮದ್ಯ ಮಾರಾಟದಿಂದ ಒಂದು ದಿನಕ್ಕೆ 80 ಕೋಟಿ ಆದಾಯ ಸಂಗ್ರಹವಾಗುತ್ತಿತ್ತು. ಈಗ ದರ ಏರಿಕೆಯಿಂದ ದಿನಕ್ಕೆ 100 ಕೋಟಿ ಆದಾಯ ಸಂಗ್ರಹದ ನಿರೀಕ್ಷೆ ಮಾಡಲಾಗಿದೆ. ಒಟ್ಟಿನಲ್ಲಿ ಗ್ಯಾರಂಟಿ ಬಾಗ್ಯಗಳಿಗಾಗಿ ಎಣ್ಣೆ ರೇಟು ಹೆಚ್ಚಾಗಿದೆ.
ತೆರಿಗೆ ಹೆಚ್ಚಾಗಿದೆ ಮದ್ಯ ಮಾರಾಟಮಾಡುವ ವ್ಯಾಪಾರಿಗಳು ಒಂದಕ್ಕೆ ಎರಡರಂತೆ ಸುಲಿಗೆ ಮಾಡುತ್ತಿದ್ದಾರೆ ಇವೆಲ್ಲವುಗಳಿಂದ ಎಣ್ಣೆ ಕುಡಿಯ ಬಯಸುವ ಜನ ಮಾತ್ರ ಕಂಗಾಲಾಗಿ ಸಿದ್ದರಾಮಯ್ಯ ಸರ್ಕಾರಕ್ಕೆ ಹಿಡಿ ಶಾಪ ಹಾಕ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.