ಕೋಟ್ಯಾಂತರ ರೂಪಾಯಿ ಆಸ್ತಿಯ ಒಡತಿ ಮದುವೆಯಾಗಿದ್ದು ಮಾತ್ರ ಕಡು ಬಡವನನ್ನು, ಯಾ ಕೆ ಗೊ.ತ್ತಾ
ರಾಜಸ್ಥಾನದ ಉಪ ಮುಖ್ಯಮಂತ್ರಿಯಾಗಿ ಆಯ್ಕೆಯಾದ ದಿಯಾ ಕುಮಾರಿ ಅವರು ರಾಜಮನೆತನದವರು! ಹೌದು, ವಸುಂಧರಾ ರಾಜೆ ಅವರ ನಂತರ ರಾಜ ಮನೆತನದ ಇನ್ನೊಂದು ಕುಡಿ ಪ್ರಜಾಪ್ರಭುತ್ವದ ಮಹತ್ವದ ಸ್ಥಾನಕ್ಕೇರಿದ್ದಾರೆ. ದಿಯಾ ಕುಮಾರಿ ಅವರ ಪ್ರೇಮ ವಿವಾಹದ ಕಥೆಯಂತೂ ಭಾರೀ ಸ್ವಾರಸ್ಯಕರವಾಗಿದೆ.
ದಿಯಾ ಕುಮಾರಿ ಜೈಪುರದ ಮಾಜಿ ಮಹಾರಾಜ ಸವಾಯಿ ಭವಾನಿ ಸಿಂಗ್ ಮತ್ತು ಪದ್ಮಿನಿ ದೇವಿಯ ಏಕೈಕ ಮಗಳು. ಜೈಪುರ, ದೆಹಲಿ ಮತ್ತು ಲಂಡನ್‌ನಲ್ಲಿ ಅಧ್ಯಯನ ಮಾಡಿರುವ ಅವರು ಮನೆಯವರ ವಿರೋಧದ ನಡುವೆಯೂ ಜನಸಾಮಾನ್ಯ ವ್ಯಕ್ತಿಯನ್ನು ಮದುವೆಯಾಗಿದ್ದಾರೆ. ಹಾಗಾಗಿ ಇವರನ್ನು ಜನರ ರಾಜಕುಮಾರಿ ಎಂದೇ ಕರೆಯುತ್ತಾರೆ.
ರಾಜಕುಮಾರಿ ದಿಯಾ ಜೈಪುರದ ಮಾಜಿ ಮಹಾರಾಜ ಸವಾಯಿ ಭವಾನಿ ಸಿಂಗ್ ಮತ್ತು ರಾಣಿ ಪದ್ಮಿನಿ ದೇವಿಯ ಏಕೈಕ ಮಗು. ಅವರು ತಮ್ಮ ಶಾಲಾ ಶಿಕ್ಷಣವನ್ನು ನವ ದೆಹಲಿಯ ಮಾಡರ್ನ್ ಸ್ಕೂಲ್ ಮತ್ತು ಮಹಾರಾಣಿ ಗಾಯತ್ರಿ ದೇವಿ ಗರ್ಲ್ಸ್ ಪಬ್ಲಿಕ್ ಸ್ಕೂಲ್, ಜೈಪುರದಲ್ಲಿ ಮಾಡಿದರು. ರಾಜಕುಮಾರಿ ದಿಯಾ ಕುಮಾರಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಲಂಡನ್‌ಗೆ ತೆರಳಿದ್ದರು.
ಇದಾದ ನಂತರ, ರಾಜಕುಮಾರಿ ದಿಯಾ ಅರಮನೆಯ ಉಸ್ತುವಾರಿಯ ಜವಾಬ್ದಾರಿ ನಿಭಾಯಿಸುತ್ತಿದ್ದ ನರೇಂದ್ರ ಸಿಂಗ್ ಅವರನ್ನು ಭೇಟಿಯಾದರು. ಪ್ರೀತಿ ಮಾಯೆ ಎನ್ನುವಂತೆ ರಾಜಕುಮಾರಿ ದಿಯಾ ಜನಸಾಮಾನ್ಯ ನರೇಂದ್ರ ಸಿಂಗ್ ಅವರನ್ನು ಮನೆಯವರ ಒಪ್ಪಿಗೆ ಇಲ್ಲದೇ 1997ರ ಆಗಸ್ಟ್‌ನಲ್ಲಿ ರಹಸ್ಯವಾಗಿ ವಿವಾಹವಾದರು. 2 ವರ್ಷಗಳ ನಂತರ ದಿಯಾ ಕುಮಾರಿ ತಮ್ಮ ಮದುವೆಯ ಬಗ್ಗೆ ತಾಯಿ ಪದ್ಮಿನಿ ದೇವಿಗೆ ತಿಳಿಸಿದರು.
ನಾವು ಮೊದಲ ಬಾರಿಗೆ ಅರಮನೆಯಲ್ಲಿ ಭೇಟಿಯಾದೆವು. ಅವರ ಸರಳತೆ ಮತ್ತು ಪ್ರಾಮಾಣಿಕತೆಯಿಂದ ನಾನು ತುಂಬಾ ಪ್ರಭಾವಿತನಾಗಿದ್ದೆ. ಆದರೆ ಮೊದಲ ನೋಟದಲ್ಲೇ ನಾನು ಅವರನ್ನು ಪ್ರೀತಿಸಿರಲಿಲ್ಲ. ನನ್ನ ಅಮ್ಮನಿಗೆ ನಮ್ಮ ಪ್ರೀತಿಯ ವಿಷಯ ತಿಳಿಸಿದಾಗ ಅವರು ಆಘಾತಕ್ಕೆ ಒಳಗಾದರು ಎಂದು ಉಪ ಮುಖ್ಯಮಂತ್ರಿ ದಿಯಾ ಕುಮಾರಿ ಬರೆದುಕೊಂಡಿದ್ದಾರೆ. ಆದರೆ ಹಲವು ವರ್ಷಗಳ ದಾಂಪತ್ಯ ಜೀವನದ ನಂತರ ಇಬ್ಬರೂ ಜೈಪುರದ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.
2019 ರ ಆರಂಭದಲ್ಲಿ ನ್ಯಾಯಾಲಯವು ಇಬ್ಬರ ಒಪ್ಪಿಗೆಯೊಂದಿಗೆ ವಿಚ್ಛೇದನ ನೀಡಿತು. ದಿಯಾ ಕುಮಾರಿ ಮತ್ತು ನರೇಂದ್ರ ಸಿಂಗ್ ಅವರಿಗೆ ಪದ್ಮನಾಭ್ ಸಿಂಗ್, ಲಕ್ಷ್ಯರಾಜ್ ಸಿಂಗ್ ಮತ್ತು ಪುತ್ರಿ ಗೌರವಿ ಎಂಬ ಇಬ್ಬರು ಪುತ್ರರಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.