ಅವಕಾಶ್ ಇದೆ ಅಂತ ನಿರ್ಮಾಪಕರು ಕರಿತಾರೆ ರೂಮ್ ಬಾಗಿಲು ಹಾಕ್ತಾರೆ; ಭಾವನಾ
Nov 24, 2024, 17:01 IST
ನಟಿ ಭಾವನಾ ರಾಮಣ್ಣ ʼಚಂದ್ರಮುಖಿ ಪ್ರಾಣಸಖಿʼ ಸಿನಿಮಾ ಮೂಲಕ ಮನೆಮಾತಾದ ನಟಿ. ಈಗ ಸಿನಿಮಾ ಜೊತೆಗೆ ರಾಜಕೀಯ ಕ್ಷೇತ್ರದಲ್ಲೂ ಸಂಪೂರ್ಣವಾಗಿ ಬ್ಯುಸಿಯಾಗಿದ್ದಾರೆ. ಈ ಬಾರಿ ಕಾಂಗ್ರೆಸ್ ನಿಂದ ಯಶವಂತಪುರ ಕ್ಷೇತ್ರದಿಂದ ಕಣಕ್ಕಿಳಿಯಲು ಸಕಲ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಟಿಕೆಟ್ ಕೂಡ ಆಲ್ಮೋಸ್ಟ್ ಫೈನಲ್ ಆಗಿದೆ ಅನ್ನೋ ಮಾತುಗಳು ಕೂಡ ಕೇಳಿ ಬಂದಿತ್ತು. ಆದರೆ ಕೊನೆ ಗಳಿಗೆಯಲ್ಲಿ ಎಲ್ಲ ಬದಲಾಗಿದೆ. ಭಾವನಾ ರಾಮಣ್ಣ ಸಿನಿಜರ್ನಿಗೆ 20ಕ್ಕೂ ಹೆಚ್ಚು ವರ್ಷಗಳು ಕಳೆದಿವೆ. ಹಲವಾರು ಹಿಟ್ ಸಿನಿಮಾಗಳಲ್ಲಿ ಭಾವನಾ ರಾಮಣ್ಣ ಕೂಡ ಬಹುಮುಖ್ಯ ಪಾತ್ರ ಮಾಡಿದ್ದಾರೆ.
<a href=https://youtube.com/embed/5K-XcwkuS20?autoplay=1&mute=1><img src=https://img.youtube.com/vi/5K-XcwkuS20/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇಷ್ಟೂ ವರ್ಷಗಳು ಕಳೆದರೂ ಭಾವನಾ ಯಾಕೆ ಒಂಟಿಯಾಗಿ ಇರಲು ಬಯಸುತ್ತಾರೆ ಅನನ್ನೋದು ನಿಮಗೆ ಗೊತ್ತಾ..? ಯೆಸ್ ನಾನು ಸ್ವಲ್ಪ ಮುಂಗೋಪಿ ನಂಗೆ ಎಲ್ಲವೂ ಪರ್ಫೆಕ್ಟ್ ಆಗಿರಬೇಕು, ಮದುವೆ ಆದರೆ ಸಿಗುವವರು ನನ್ನ ಸಹಿಸಿಕೊಳ್ಳೋದು ಸ್ವಲ್ಪ ಕಷ್ಟ. ಅದಕ್ಕಾಗಿ ನನಗೆ ಮದುವೆ ಆಗಲು ಇಷ್ಟವಿಲ್ಲ. ನಾನು ತುಂಬಾ ನೆಮ್ಮದಿಯಾಗಿ ಇದ್ದೀನಿ. ಹೀಗೆ ಜೀವನ ಕಳೆದುಬಿಡುತ್ತೀನಿ ಎಂದಿದ್ದಾರೆ.
ಇನ್ನು ಮಲಯಾಳಂ ಚಿತ್ರರಂಗದ ರೀತಿಯಲ್ಲಿ ಕನ್ನಡ ಚಿತ್ರರಂಗದಲ್ಲಿ ಕೂಡ ಲೈಂಗಿಕ ಕಿರುಕುಳದ ಅನುಭವ ಉಂಟಾಗಿದೆ. ಅದೊಂದು ಸಲ ನಿರ್ಮಾಪಕರು ರೂಮಿಗೆ ಬಂದು ಬಾಗಿಲು ಹಾಕಿದ್ರು ಇಂತಹ ಕೆಟ್ಟ ಘಟನೆ ನನ್ನ ಬದುಕಲ್ಲಿ ಕೂಡ ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಚಂದ್ರಮುಖಿ ಪ್ರಾಣಸಖಿ, ದೇವೀರಿ, ದೀಪಾವಳಿ, ಎಲ್ಲರ ಮನೆ ದೋಸೆನೂ,
ಕುರಿಗಳು ಸಾರ್ ಕುರಿಗಳು, ಪರ್ವ, ನಿನಗಾಗಿ, ಚೆಲ್ವಿ, ರಾಂಗ್ ನಂಬರ್, ಪ್ರೀತಿ ಪ್ರೇಮ ಪ್ರಣಯ, ಶಾಂತಿ, ಫ್ಯಾಮಿಲಿ, ಇಂತಿ ನಿನ್ನ ಪ್ರೀತಿಯ, ಆಪ್ತರಕ್ಷಕ, ಚಿಂಗಾರಿ, ಭಾಗೀರಥಿ, ಕ್ರೇಜಿ ಸ್ಟಾರ್, ನಿರುತ್ತರ ಸಿನಿಮಾಗಳಲ್ಲಿ ಭಾವನಾ ನಟಿಸಿದ್ದಾರೆ. ಇದೀಗ ಚಿತ್ರರಂಗದಿಂದ ಹೊರಗುಳಿದಿದ್ದಾರೆ.