ಎಂಗೇಜ್ಮೆಂಟ್ ಆದ ಮೇಲೆ ನೆಮ್ಮದಿನೇ ಇಲ್ಲ; ರೀಲ್ಸ್ ರಾಣಿ ಮಧು ಕಣ್ಣೀ ರು
ಇತ್ತೀಚಿನ ದಿನಗಳಲ್ಲಿ ಯುಟ್ಯೂಬ್ ಇನ್ಫ್ಲೈಯನ್ಸರ್ ಜಾಸ್ತಿ ಆಗಿದ್ದಾರೆ. ಹೌದು ತಾವು ತಿಂದಿದ್ದು. ಕೊಂಡು ತಂದದ್ದು ಎಲ್ಲವನ್ನೂ ವೀಡಿಯೋ ಮಾಡಿ ಹರಿ ಬಿಡುತ್ತಾರೆ. ಯುಟ್ಯೂಬ್ ಮತ್ತು ಇನ್‌ಸ್ಟಾಗ್ರಾಂ ಓಪನ್ ಮಾಡಿದಾಗ ಮೊದಲು ಕಾಣಿಸುವುದು ಮಧು ಗೌಡ, ನಿಶಾ ರವೀಂದ್ರ ಮತ್ತು ನಿಖಿಲ್ ರವೀಂದ್ರ ವಿಡಿಯೋಗಳು.
ಇತ್ತೀಚಿಗೆ ನಿಖಿಲ್ ಮತ್ತು ಮಧು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರು. ಮದುವೆಗೆ ಕೆಲವೇ ತಿಂಗಳು ಉಳಿದಿದೆ. ಈ ನಡುವೆ ಬರುತ್ತಿರುವ ನೆಗೆಟಿವ್ ಕಾಮೆಂಟ್ಸ್ ನೋಡಿ ಮಧು ಬೇಸರ ಮಾಡಿಕೊಂಡಿದ್ದಾರೆ.
ಹೌದು! ಮಧು ಗೌಡ ಯುಟ್ಯೂಬ್ ಚಾನೆಲ್ ಹೊಂದಿದ್ದಾರೆ ಹಾಗೂ ನಿಖಿಲ್ -ನಿಶಾ ಕೂಡ ಯುಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ. ಮಧು ಗೌಡ ಚಾಲೆನ್‌ನಲ್ಲಿ ಯಾವುದೇ ನೆಗೆಟಿವ್ ಕಾಮೆಂಟ್ ಬರುತ್ತಿಲ್ಲ ಆದರೆ ನಿಶಾ ಚಾನೆಲ್‌ನಲ್ಲಿ ಬರುತ್ತಿರುವ ಕಾರಣ ಬೇಸರ ಮಾಡಿಕೊಂಡಿದ್ದಾರೆ. ನಿಶಾ ನಿಖಿಲ್ ವ್ಲಾಗ್‌ನಲ್ಲಿ ಮಾತನಾಡುವುದಕ್ಕೆ ಭಯ ಶುರುವಾಗಿದೆ. ದಿನ ವ್ಲಾಗ್ ಮಾಡುವುದಕ್ಕೆ ಮನಸ್ಸು ಇಲ್ಲ ಅಷ್ಟು ಬೇಜಾರ್ ಆಗಿದೆ. ಪರ್ಸನಲ್ ವಿಚಾರದ ಬಗ್ಗೆ ಕಾಮೆಂಟ್ ಮಾಡುತ್ತೀರಾ ಇದರಿಂದ ಎಮೋಷನಲ್ ಆಗಿ ಎಷ್ಟು ಕಷ್ಟ ಆಗುತ್ತಿದೆ ಎಂದು ಯಾರಿಗೂ ಅರ್ಥವಾಗುವುದಿಲ್ಲ.
ಆಫ್ ದಿ ಕ್ಯಾಮೆರಾ ನಾವು ಎಷ್ಟು ಚೆನ್ನಾಗಿದ್ದೀವಿ ಅನ್ನೋದು ನಮಗೆ ಗೊತ್ತಿದೆ ಅದನ್ನು ತೋರಿಸಿಕೊಳ್ಳಬೇಕು ಅನ್ನೋದು ಇಲ್ಲ. ಕೇವಲ 10 % ಮಾತ್ರ ನಮ್ಮ ಜೀವನದ ಬಗ್ಗೆ ನೀವು ವಿಡಿಯೋದಲ್ಲಿ ನೋಡುವುದು. ನನ್ನ ಯುಟ್ಯೂಬ್‌ನಲ್ಲಿ ಕಾಮೆಂಟ್ ಬರಲ್ಲ ಆದರೆ ನಿಶಾ ಯುಟ್ಯೂಬ್‌ನಲ್ಲಿ ಬರೀ ನೆಗೆಟಿವ್ ಕಾಮೆಂಟ್ಸ್ ಶುರುವಾಗಿದೆ. ನನಗೆ ನಾಟಕ ಮಾಡಲು ಬರುವುದಿಲ್ಲ ನಾನು ಹೇಗಿದ್ದೀನಿ ಹಾಗೆ ಇರಬೇಕು ಎಂದು ಮಧು ಕಣ್ಣೀರಿಟ್ಟಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.