ವಾರಗಿತ್ತಿಯರೆಂದರೆ ಹೀಗೆಯೇ ಇರಬೇಕು; ದೀಪಿಕಾ ಪೂಣೀಮಾ ಸ್ಟೆಪ್ಸ್ ಗೆ ಫ್ಯಾನ್ಸ್ ಫಿದಾ

 

ಕಿರುತೆರೆಯಲ್ಲಿ ಸದಾ ಕಿತ್ತಾಡುತ್ತಿರುವ ವಾರಗಿತ್ತಿಯರಲ್ಲಿ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯ ಪೂರ್ಣಿಮಾ ಹಾಗೂ ದೀಪಿಕಾ ಕೂಡ ಸದಾ ಮುಂದು. ಪೂರ್ಣಿಮಾ ಅನಾಥೆ ಎನ್ನುವ ಕಾರಣಕ್ಕೆ ದೀಪಿಕಾ ಆಕೆಯನ್ನು ಹಂಗಿಸಿ ಮಾತನಾಡುತ್ತಲೇ ಇರುತ್ತಾಳೆ. ಆಕೆಗೆ ತಾನೇ ಪೂರ್ಣಿಮಾಗಿಂತ ಹೆಚ್ಚು. ಪೂರ್ಣಿಮಾ ಈ ಮನೆಗೆ ಏನು ಇಲ್ಲದೆ ಬಂದಿದ್ದಾಳೆ. ಅವಳನ್ನು ಈ ಮನೆಯಿಂದ ಓಡಿಸಿದರೆ ಮತ್ತೆ ನನ್ನ ಕೆಲಸ ಸುಲಭ.

 ಇಲ್ಲವಾದರೆ ಈ ಆಸ್ತಿ ಇಬ್ಬಾಗವಾಗಬೇಕು. ಹಾಗಾದರೆ ಮಾತ್ರ ಈ ಮನೆಯ ಖುಷಿ ಹಾಳಾಗುತ್ತದೆ. ಪೂರ್ಣಿಮಾ ಹೆಸರು ಕೂಡ ಹಾಳಾಗುತ್ತದೆ ಎನ್ನುವುದು ದೀಪಿಕಾಳಲ್ಲಿರುವ ಕೆಟ್ಟ ಆಸೆ.ಆದರೆ ದೀಪಿಕಾಳ ಆಸೆಗೆ ಯಾರೂ ಕುಮ್ಮಕ್ಕು ನೀಡುತ್ತಿಲ್ಲ. ಶಾರ್ವರಿ ಕೂಡ ದೀಪಿಕಾಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆಕೆಯ ಜೊತೆ ನಯವಾಗಿ ಮಾತನಾಡಿ ಮನೆಯವರ ಎದುರು ಆಕೆಯನ್ನು ಎತ್ತಿ ಕಟ್ಟುತ್ತಿದ್ದಾರೆ. ಮೊದಲೆಲ್ಲ ಅಭಿ ನನ್ನವನು ಆಗಬೇಕು ಎನ್ನುವ ಆಸೆ ದೀಪಿಕಾಗೆ ಇತ್ತು. 

https://www.instagram.com/reel/C-HcE-Gh6tm/?igsh=bmxobXhqaG9tNHl6

ಆದರೆ, ಇದೀಗ ಅಭಿ ಮನದೊಡತಿ ನಾನೇ ಆಗಿರುವಾಗ ನನ್ನ ತಂದೆಗೆ ಅವಮಾನ ಮಾಡಿದ ಮನೆಗೆ ನನಗೂ ಬೇಡ ಎಂದು ದೀಪಿಕಾ ಮನಸ್ಸಿನಲ್ಲಿ ಮೂಡಿದೆ.ಇನ್ನೂ ಪೂರ್ಣಿಮಾಗೆ ಎಲ್ಲರೂ ಒಂದಾಗಿ ಇರಬೇಕು. ಈ ಮನೆಯಲ್ಲಿ ಸಂತಸ ಯಾವತ್ತೂ ನೆಲೆಯೂರಬೇಕು, ಯಾರು ಹೆಚ್ಚು ಅಲ್ಲ ಯಾರು ಕಡಿಮೆಯೂ ಅಲ್ಲ. ಕೆಟ್ಟತನಕ್ಕೆ ತಲೆಬಾಗದೆ ಒಳ್ಳೆಯತನಕ್ಕೆ ಮಾತ್ರ ತಲೆಬಾಗಬೇಕು ಎನ್ನುವುದು ಆಕೆಯ ಪಾಲಿಸಿ. ಇನ್ನೂ ಆದರೆ ಸೀರಿಯಲ್‌ನಲ್ಲಿ ಈ ಇಬ್ಬರು ನಟಿಯರಿಗೆ ಮನಸ್ತಾಪ ಇದ್ದರೂ, ನಿಜ ಜೀವನ ಎಂದು ಬಂದಾಗ ಇಬ್ಬರೂ ಬಹಳ ಉತ್ತಮ ಗೆಳೆಯರು. 

ಆಗಾಗ ರೀಲ್ ಮಾಡುತ್ತಾ ಎಲ್ಲರ ಜೊತೆ ಖುಷಿಯಾಗಿ ಇದ್ದಾರೆ ಎಂದು ಹೇಳಿದರೆ ತಪ್ಪಾಗದು.ಇನ್ನೂ ಪೂರ್ಣಿಮ ರಿಯಲ್​ಹೆಸರು ಲಾವಣ್ಯ. ಹಾಗೇ ದೀಪಿಕಾ ನಿಜವಾದ ಹೆಸರು ದರ್ಶಿನಿ ಡೆಲ್ಟಾ. ಇವರಿಬ್ಬರೂ ಆಗಾಗ ಹೊಸ ಹೊಸ ರೀಲ್ ಮಾಡುತ್ತಿರುತ್ತಾರೆ. ಹಾಗೆಯೇ ದರ್ಶಿನಿ ನಟಿಯಾಗೋ ಮೊದಲು ಮಾಡೆಲ್ ಜೊತೆಗೆ ಕೊರಿಯೋಗ್ರಫರ್ ಆಗಿ ಗುರುತಿಸಿಕೊಂಡಿದ್ದಾರೆ. ನಟ ಪ್ರಭುದೇವ, ಜಾನಿ ಮಾಸ್ಟರ್ ಮೊದಲಾದ ಜನಪ್ರಿಯ ಕೊರಿಯೋಗ್ರಫರ್ ಜೊತೆ ಅಸಿಸ್ಟಂಟ್ ಕೊರಿಯೋಗ್ರಫರ್ ಆಗಿ ಇವರು ಕೆಲಸ ಕೂಡ ಮಾಡಿದ್ದಾರೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.