ಈ ನ ಟಿ ಕೂಡ ಗಂಡನಿಂದ ಡಿ ವೋರ್ಸ್ ಪಡೆಯುತ್ತಾಳೆ; ವೇಣು ಸ್ವಾಮಿಯಿಂದ ಭವಿಷ್ಯ ವಾಣಿ

 

ಟಾಲಿವುಡ್ ಬ್ಯೂಟಿ ರಕುಲ್ ಪ್ರೀತ್ ಸಿಂಗ್ ಮಾಡರ್ನ್ ಲೇಡಿಯಾಗಿ ಬದಲಾಗಿದ್ದಾರೆ.  ಮದುವೆಯಾದ​ ಬಳಿಕ ರಕುಲ್ ಪ್ರೀತ್ ಸಿಂಗ್ ಸಿಕ್ಕಾಪಟ್ಟೆ ಬೋಲ್ಡ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹಾಟ್, ಹಾಟ್ ಫೋಟೋಗಳನ್ನು ಹಂಚಿಕೊಳ್ತಿದ್ದಾರೆ. ರಕುಲ್‌ ಪ್ರೀತ್‌ ಸಿಂಗ್‌ ಫೆಬ್ರವರಿಯಲ್ಲಿ ಬಾಲಿವುಡ್ ನಟ ಹಾಗೂ ನಿರ್ಮಾಪಕರಾದ ಜಾಕಿ ಭಗ್ನಾನಿ ಅವರನ್ನು ಗೋವಾ ಬೀಚ್‌ ಸಮೀಪದಲ್ಲಿ ಅದ್ದೂರಿಯಾಗಿ ಸಿಂಧಿ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. 

ಕನ್ನಡದ 'ಗಿಲ್ಲಿ' ಚಿತ್ರದ ಮೂಲಕ ಚಲನಚಿತ್ರ ರಂಗಕ್ಕೆ ಪ್ರವೇಶಿಸಿದ ರಕುಲ್ ಪ್ರೀತ್ ಸಿಂಗ್ ಮುಂದೆ ತೆಲುಗು ಚಿತ್ರರಂಗದಲ್ಲಿ ನೆಲೆ ಕಂಡುಕೊಂಡು ಟಾಪ್ ನಟಿಯಾಗಿ ಮಿಂಚಿದಳು. ತೆಲುಗಿನ ಎಲ್ಲಾ ಸೂಪರ್ ಸ್ಟಾರ್‌ಗಳ ಜೊತೆಯಲ್ಲಿ ಅಭಿನಯಿಸಿದ ರಕುಲ್ ತಮಿಳು ಮತ್ತು ಹಿಂದಿಯಲ್ಲಿ ಕೂಡ ಅಭಿನಯಿಸಿದ್ದಾಳೆ. ಅಲ್ಲದೆ ಕೆಲವು ದಿನಗಳ ಹಿಂದೆ ಟಾಲಿವುಡ್ ಡ್ರಗ್ಸ್ ಕೇಸಿನ ವಿಚಾರದಲ್ಲಿ ಹೈದರಾಬಾದಿನಲ್ಲಿ NCB ಅಧಿಕಾರಿಗಳಿಂದ ವಿಚಾರಣೆಯನ್ನು ಕೂಡ ಎದುರಿಸಿದ್ದರು. 

ವಯಸ್ಸು 31 ಆಯಿತು, ಕೈಯಲ್ಲಿ ಹೆಚ್ಚಿನ ಸಿನಿಮಾಗಳಿಲ್ಲ. ಹೀಗಾಗಿಯೇ ಮದುವೆಯಾಗಲು ಇದೇ ಸರಿಯಾದ ಸಮಯವೆಂದು ನಿರ್ಧರಿಸಿದ ರಕುಲ್ ತಮ್ಮ 31ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಮದುವೆ ವಿಚಾರವನ್ನು ಸೋಶಿಯಲ್ ಮೀಡಿಯಾದ ಮೂಲಕ ಬಹಿರಂಗ ಪಡಿಸಿದ್ದರು. ಇನ್ನು ವಾಸು ಭಗ್ನಾನಿ ಬಾಲಿವುಡ್‌ನ ಪ್ರಮುಖ ನಿರ್ಮಾಪಕರಲ್ಲಿ ಒಬ್ಬರು. 'ಕೂಲಿ ನಂಬರ್ ಒನ್', 'ಹೀರೋ ನಂಬರ್ ಒನ್,'ಬಡೇ ಮಿಯಾ ಚೋಟೆ ಮಿಯಾ', 'ರೆಹನಾ ಹೈ ತೇರೆ ದಿಲ್ಮೆ' ಅಂತಹ ಸೂಪರ್ ಹಿಟ್ ಚಿತ್ರಗಳ ನಿರ್ಮಾಪಕರು ಹೌದು. 

ಇವರ ಮಗ ಜಾಕಿ ಭಗ್ನಾನಿ, 2009ರಲ್ಲಿ ಬಿಡುಗಡೆಯಾದ 'ಕಲ್ ಕಿಸ್ನೆ ದೇಖ' ಚಿತ್ರದ ಮೂಲಕ ನಾಯಕನಟನಾಗಿ ಬಾಲಿವುಡ್ ಚಿತ್ರರಂಗವನ್ನು ಪ್ರವೇಶಿಸಿದರು. ಇನ್ನು ಮಾಂತ್ರಿಕ ವಿದ್ಯೆಗಳ ಪರಿಣಿತ ಜ್ಯೋತಿಷ್ಯಗಳಾದ ವೇಣು ಸ್ವಾಮಿಯ ಆಸಕ್ತಿದಾಯಕ ಸಂಗತಿಯನ್ನು ಈ ವಿವಾಹದ ಬಗ್ಗೆ ಹೊರಹಾಕಿದ್ದಾರೆ ಅವರ ಪ್ರಕಾರ 'ರಕುಲ್ ಪ್ರೀತ್ ಸಿಂಗ್ ವಿವಾಹ ಜಾಕಿ ಭಗ್ನಾನಿ ಜೊತೆ ನಡೆಯುವ ಸಾಧ್ಯತೆಗಳಿಲ್ಲ. 

ಹೆಚ್ಚೆಂದರೆ ಅವರಿಬ್ಬರು ಎಂಗೇಜ್ಮೆಂಟ್ ಮಾಡ್ಕೋಬಹುದು ಆದರೆ ಅದು ಮದುವೆ ಹತ್ತಿರಕ್ಕೆ ಬಂದು ನಿಂತು ಬಿಡುತ್ತದೆ. ಒಂದು ವೇಳೆ ಅವರಿಬ್ಬರ ವಿವಾಹವಾದರೆ, ರಕುಲ್ ಪ್ರೀತ್ ಸಿಂಗ್ ಅವರು ಜೈಲಿಗೆ ಹೋಗುವುದು ಖಚಿತ ಎಂದಿದ್ದರು. ಆದರೆ ಇವರ ಮಾತು ಕೇಳದೆ ಈ ಜೋಡಿ ಮದುವೆ ಆಗಿದೆ.ಅದು ನಿಜವಾಗುತ್ತದಾ ಕಾದು ನೋಡಬೇಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.