ಹೋಟೆಲ್ ನಲ್ಲಿ ಪಾತ್ರೆಗಳನ್ನು ತೊಳೆಯುತಿದ್ದ ಈ ಯುವಕ, ಇವತ್ತು ಯೂಟ್ಯೂಬ್ ಜಗತ್ತಿನಲ್ಲಿ ಲಕ್ಷ ಲಕ್ಷ ಹಣ ಸಂಪಾದನೆ ಮಾಡುತ್ತಿದ್ದಾನೆ

 

ತಂದೆ ರಾಜಕೀಯ ನಾಯಕನಾಗಿದ್ದರೆ ಮಕ್ಕಳು ಕೂಡ ರಾಜಕೀಯ ರಂಗಕ್ಕೆ ಇಳಿಯುವುದು ಸಾಮಾನ್ಯ ಆದರೆ ಅದನ್ನೆಲ್ಲ ಹೊರತುಪಡಿಸಿ ಮಂಡ್ಯ ಕ್ಷೇತ್ರದಲ್ಲಿ ಜನಪ್ರಿಯ ಯುಟ್ಯೂಬರ್ ಒಬ್ಬರು ಕಣಕ್ಕಿಳಿದ್ದಾರೆ ಅಷ್ಟಕ್ಕೂ ಅವರ್ಯಾರೂ ಎಂದು ತಿಳ್ಕೊಳ್ಳೋಣ. ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮೇಲ್ನೋಟಕ್ಕೆ ಪ್ರಮುಖ ಮೂರು ಪಕ್ಷಗಳ ಪ್ರಚಾರ ಕಣ್ಣಿಗೆ ಕಾಣುತ್ತಿದ್ದರೂ, ಪಕ್ಷೇತರವಾಗಿ ಅನೇಕ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ದುಮುಖುತ್ತಿದ್ದಾರೆ. ಈ ಅಭ್ಯರ್ಥಿಗಳು ಈಗಾಗಲೆ ಪ್ರಚಾರದ ಕಾರ್ಯ ಶುರು ಮಾಡಿಕೊಂಡಿದ್ದು, ಮತದಾರನ್ನು ತಮ್ಮತ್ತ ಸೆಳೆದುಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. 

ಅದರಂತೆ ಮಂಡ್ಯದಲ್ಲಿ ಚುನಾವಣೆಯ ರಂಗು ಜೋರಾಗಿಯೇ ಇದೆ. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ರಾಜಕೀಯವು ಹಣಬಲ ಮತ್ತು ಜಾತಿ ಸಮೀಕರಣದತ್ತ ವಾಲುತ್ತಿದೆ. ಇದರ ಮಧ್ಯೆಯೇ ಇಬ್ಬರು ಯುವಕರು ಈ ಬಾರಿ ತಮ್ಮ ಜನಕೇಂದ್ರಿತ ರಾಜಕಾರಣದ ಮೂಲಕ ಚುನಾವಣೆಯ ಸ್ವರೂಪವನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ. 27 ವರ್ಷದ ಚಂದನ್​ ಗೌಡ ಕೆ, ಒಬ್ಬ ಯೂಟ್ಯೂಬರ್​ ಆಗಿದ್ದು, ಪಕ್ಷೇತರವಾಗಿ ಕೆ ಆರ್​ ಪೇಟೆ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ. 

ಈ ನಿಟ್ಟಿನಲ್ಲಿ ತಮ್ಮ ಸ್ವಂತ ಚುನಾವಣಾ ತಂತ್ರಗಳನ್ನು ರೂಪಿಸಿದ್ದಾರೆ. ಚಂದನ್​​ ಗೌಡ ಕಳೆದ ವರ್ಷ 2022ರಲ್ಲಿ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಇವರು ಕೆಆರ್​ ಪೇಟೆ ತಾಲೂಕಿನ ಊಚನಹಳ್ಳಿ ನಿವಾಸಿಯಾಗಿದ್ದು, ಇವರ ತಂದೆ ದಿನಗೂಲಿ ಕೆಲಸ ಮಾಡುತ್ತಿದ್ದು, ತಾಯಿ ಗೃಹಿಣಿ.
ಇವರು ಚುನಾವಣೆ ಸಂಬಂಧ 2022ರ ಅಕ್ಟೋಬರ್​ನಿಂದ ಪ್ರಚಾರ ಕಾರ್ಯ ಆರಂಭಿಸಿದ್ದು, ಬೆಳಿಗ್ಗೆ 6:30ಕ್ಕೆ ಪ್ರಚಾರದ ಕಾರ್ಯವನ್ನು ಆರಂಭಿಸಿದರೇ ಮಧ್ಯಾಹ್ನ ತನಕ ಪ್ರಚಾರದಲ್ಲಿ ತೊಡಗುತ್ತಾರೆ. 

ನಂತರ ಸಾಯಂಕಾಲ  ಪ್ರಚಾರ ಪ್ರಾರಂಭಿಸಿದರೇ ರಾತ್ರಿ 10 ಗಂಟೆಗೆ ಮುಗಿಸುತ್ತಾರೆ. ಹೀಗೆ ಇವರು ತಾಲೂಕಿನ 200 ಹಳ್ಳಿಗಳಿಗೆ ತೆರಳಿ ಪ್ರಚಾರ ಮಾಡುವ ಗುರಿಯನ್ನು ಹೊಂದಿದ್ದು, ಸದ್ಯ 85 ಹಳ್ಳಿಗಳನ್ನು ತಲುಪಿದ್ದಾರೆ.
ನಮ್ಮ ಕ್ಷೇತ್ರ ಎಲ್ಲ ರೀತಿಯ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಹಲವು ಗ್ರಾಮಗಳಲ್ಲಿ ಕಳೆದ 30 ವರ್ಷಗಳಿಂದ ರಸ್ತೆ ಅಭಿವೃದ್ಧಿ ಕಂಡಿಲ್ಲ. ಭ್ರಷ್ಟಾಚಾರ ಜನರ ಮುಂದಿರುವ ದೊಡ್ಡ ಸವಾಲು. ಬದಲಾವಣೆಯನ್ನು ತರಲು ನಾನು ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ ಎಂದು ಚಂದನ್​ ಗೌಡ ಹೇಳಿದ್ದಾರೆ.

ನಾನು ಯೂಟ್ಯೂಬ್ ಮೂಲಕ ಗಳಿಸುವುದು ನನ್ನ ಪ್ರಚಾರಕ್ಕೆ ಸಾಕು. ಚಿಕ್ಕಮಗಳೂರಿನ ಡಾ.ರವಿಕುಮಾರ್ ಪ್ರಚಾರಕ್ಕಾಗಿ ಸ್ಪೀಕರ್ ಕೊಡುಗೆ ನೀಡಿದ್ದಾರೆ. ನನ್ನ ಅಭಿಯಾನವನ್ನು ನೋಡಿದ ಗ್ರಾಮಸ್ಥರೊಬ್ಬರು ವಾಹನವನ್ನು ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಹಲವು ಹಳ್ಳಿಗಳಲ್ಲಿ, ನಾನು ಪ್ರತಿರೋಧವನ್ನು ಎದುರಿಸುತ್ತೇನೆ. ನನ್ನ ಬೆಂಬಲಕ್ಕೆ ಯಾವಾಗಲೂ ಮಹಿಳೆಯರು ಬರುತ್ತಾರೆ. ಪ್ರಚಾರವನ್ನು ಪ್ರಾರಂಭಿಸಿದ ನಂತರ, ಅದರ ಕುರಿತಾದ ವೀಡಿಯೊಗಳು ಸರಾಸರಿ ವೀಕ್ಷಣೆ ಸಮಯ ಹೆಚ್ಚಾಗಿದೆ ಎಂದರು.

ಮಹಿಳೆಯರು, ಯುವಕರು, ಗ್ರಾಮಸ್ಥರು ಅದರಲ್ಲೂ ರೈತರ ಬೆಂಬಲವನ್ನು ಚಂದನ್ ಗೆಲ್ಲುತ್ತಿದ್ದಾರೆ ಎಂದು ಕೆಆರ್ ಪೇಟೆ ನಿವಾಸಿ, ಸಾಫ್ಟ್ ವೇರ್ ಎಂಜಿನಿಯರ್ ದರ್ಶನ್ ಜಿ.ಬಿ ಎಂಬುವರು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಹೆಚ್ಚಿನ ಸಂಖ್ಯೆಯ ಜನರು ಅವರನ್ನು ಅನುಸರಿಸುತ್ತಿದ್ದಾರೆ. ನೀರಿನ ಸಮಸ್ಯೆ ಮತ್ತು ಬಸ್ ಸೇವೆಗಳ ಕೊರತೆಯಂತಹ ನಾಗರಿಕ ಸಮಸ್ಯೆಗಳಿಗೆ ಚಂದನ್ ಪರಿಹಾರಗಳನ್ನು ಸೂಚಿಸುತ್ತಾರೆ, ಇದು ಮತದಾರರನ್ನು ತನ್ನತ್ತ ಆಕರ್ಷಿಸುತ್ತದೆ ಎಂದು ಸ್ಥಳೀಯರೊಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.