ಚಂದ್ರಯಾನ ಉಡಾವಣೆ ಹಿಂದೆ ತಿರುಪತಿ ತಿಮ್ಮಪ್ಪನ ಶಕ್ತಿ ಗೋಚರ, ಪ್ರಧಾನಿ ಕೂಡ ಶಾಕ್

 

ಚಂದ್ರಯಾನ-3 ಉಡಾವಣೆಗೆ ಇಡೀ ಜಗತ್ತು ಕಾತರದಿಂದ ಕಾಯುತ್ತಿತ್ತು. ಇಸ್ರೋದ ಚಂದ್ರಯಾನ-3 ನೌಕೆ ಜುಲೈ 14 ಮಧ್ಯಾಹ್ನ ನಭಕ್ಕೆ ಚಿಮ್ಮಲಿದ್ದು, ಇದನ್ನು ಕಣ್ತುಂಬಿಕೊಳ್ಳಲು ಜನ ಕಾದಿದ್ದರು. ಅಲ್ಲದೇ ಚಂದ್ರಯಾನದಲ್ಲಿ ಯಾವುದೇ ವಿಘ್ನಗಳು ಬರದಂತೆ ದೇಶದ ಮೂಲೆ-ಮೂಲೆ ಪ್ರಾರ್ಥನೆ, ಪೂಜೆ-ಪುನಸ್ಕಾರಗಳು ನಡೆದಿತ್ತು. 

ಇನ್ನು ಈ ಮಧ್ಯೆ ಚಂದ್ರಯಾನ-3 ಉಪಗ್ರಹ ನೌಕೆಯ ಮಾದರಿ ಜೊತೆ ಇಸ್ರೋ ವಿಜ್ಞಾನಿಗಳು ಹಾಗೂ ಸಿಬ್ಬಂದಿಗಳ ತಂಡ ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದರು. ಆದ್ರೆ, ಇದನ್ನು ಬುದ್ದಿ ಜೀವಿಗಳು ಖಂಡಿಸಿದ್ದಾರೆ. ಹೌದು.. ತಿರುಪತಿಯಲ್ಲಿ ಪೂಜೆ ನೆರವೇರಿಸಿದ ನಿಲುವನ್ನು ಬುದ್ಧಿಜೀವಿಗಳು ಆಕ್ಷೇಪಿಸಿದ್ದು, ಖಂಡನಾ ಹೇಳಿಕೆಯಲ್ಲಿ ಎಡವಟ್ಟು ಮಾಡಿಕೊಂಡುಕೊಂಡು ಟ್ರೋಲ್​ಗಳಿಗೆ ಆಹಾರವಾಗಿದ್ದಾರೆ.

ಇಸ್ರೋ ವಿಜ್ಞಾನಿಗಳ ಕೆಲಸ ಸಾಮಾನ್ಯ ಜನರ ದಿಕ್ಕು ತಪ್ಪಿಸುವಂತಿದೆ. ಸಂವಿಧಾನದ ಪರಿಚ್ಚೇದ 51aರ ಅನ್ವಯ ವೈಜ್ಙಾನಿಕ ಮನೋಭಾವ ಬೆಳೆಸುವುದು ಕರ್ತವ್ಯವಾಗಿದೆ. ಇಸ್ರೋ ವಿಜ್ಞಾನಿಗಳ ಕೆಲಸ ತಮ್ಮ ಬಗ್ಗೆ ತಮಗೇ ನಂಬಿಕೆ ಇಲ್ಲವೆಂದು ಸಾಬೀತುಪಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಚಂದ್ರಯಾನ ಎಂದು ಹೇಳುವ ಬದಲು ಮಂಗಳಯಾನ ಎಂದು ಖಂಡನಾ ಹೇಳಿಕೆಯಲ್ಲಿ ಬುದ್ದಿಜೀವಿಗಳು ಹೇಳಿದ್ದು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ. ಕೆಲವರು ಬುದ್ಧಿಜೀವಿಗಳನ್ನು ಟ್ರೋಲ್​ ಮಾಡುವ ಮೂಲಕ ವ್ಯಂಗ್ಯ ಮಾಡಿತ್ತಿದ್ದಾರೆ.

ಆದರೆ ನಿನ್ನೆ ಯಾರೆಷ್ಟೇ ವ್ಯಂಗ್ಯ ಮಾಡಿದರೂ ಕೂಡ ಚಂದ್ರಯಾನ -3 ಯಶಸ್ವಿಯಾಗಿದೆ.ಅಲ್ಲದೆ ಈ ಯೋಜನೆಯ ಮೂಲಕ ಚಂದ್ರನಲ್ಲಿ ನೀರು ಇರುವ ಸ್ಥಳವನ್ನು ಪತ್ತೆ ಮಾಡಲು, ನೀರಿನ ಪ್ರಮಾಣ ತಿಳಿಯಲು, ಚಂದ್ರನ ಕತ್ತಲಿನ ಭಾಗದ ಅನ್ವೇಕ್ಷಣೆ, ಖನಿಜಗಳ ಅಧ್ಯಯನ ಸೇರಿದಂತೆ ಚಂದ್ರನ ವೈಜ್ಞಾನಿಕ ಅಧ್ಯಯನ ನಡೆಸಲು ಭಾರತೀಯ ವಿಜ್ಞಾನಿಗಳಿಗೆ ಸಾಧ್ಯವಾಗಲಿದೆ. <a href=https://youtube.com/embed/h5au8AZXh6M?autoplay=1&mute=1><img src=https://img.youtube.com/vi/h5au8AZXh6M/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಇದುವರೆಗೂ ಅಮೆರಿಕ, ರಷ್ಯಾ, ಚೀನಾ ಮಾತ್ರ ಚಂದ್ರನಲ್ಲಿ ಯಶಸ್ವಿಯಾಗಿ ತಮ್ಮ ನೌಕೆಗಳನ್ನು ಇಳಿಸಿವೆ. ಚಂದ್ರಯಾನ-3 ಯಶಸ್ವಿಯಾದರೆ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಲಿದೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.