25 ಲಕ್ಷ ಡೀಲ್ ಬಳಿಕ ರೆಸಾರ್ಟ್ಗೆ ಬಂದಿದ್ದ ತ್ರಿಶಾ; ಸಿನಿಮಾದಲ್ಲಿ ಅವಕಾಶಕ್ಕಾಗಿ ಈಗೂ ಆಗು ತ್ತಾ
Aug 18, 2024, 18:52 IST
ನಟಿಅ ತ್ರಿಶಾ ಯಾರಿಗೆ ತಾನೇ ಗೊತ್ತಿಲ್ಲಾ ಹೇಳಿ. ಕನ್ನಡ, ತಮಿಳು ತೆಲುಗು, ಮಲಯಾಳಂ ಹೀಗೆ ಹಲವರು ಭಾಷೆಯಲ್ಲಿ ಮಿಂಚಿದ ಬೆಡಗಿ 40 ವರ್ಷ ದಾಟಿದರೂ 18ರ ಯುವತಿಯಂತೆ ಕಂಗೊಳಿಸುತ್ತಲೆ ಇದ್ದಾರೆ. ಇನ್ನು ಇತ್ತೀಚೆಗೆ ನಟ ಮನ್ಸೂರ್ ಅಲಿಖಾನ್, ತಮಿಳು ನಟಿ ತ್ರಿಶಾ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು ಗೊತ್ತೇ ಇದೆ. ಅದು ಮಾಸುವ ಮುನ್ನವೇ ತಮಿಳುನಾಡು ಎಐಎಡಿಎಂಕೆ ಪಕ್ಷದ ಮಾಜಿ ನಾಯಕರೊಬ್ಬರು ತ್ರಿಶಾ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾರೆ. ಬಹಳ ಕೆಟ್ಟದಾಗಿ ಮಾತನಾಡಿ ಕಾಲಿವುಡ್ ಮಂದಿ ಆಕ್ರೋಶಕ್ಕೆ ಕಾರಣವಾಗಿದ್ದಾರೆ.
ಸೇಲಂ ಪಶ್ಚಿಮ ಕ್ಷೇತ್ರದ ಶಾಸಕ ವೆಂಕಟಾಚಲಂ ಅವರನ್ನು ಟೀಕಿಸಿರುವ ಎಐಎಡಿಎಂಕೆ ಮಾಜಿ ನಾಯಕ ಎವಿ ರಾಜು ಈ ವೇಳೆ ನಟಿ ತ್ರಿಶಾ ಹೆಸರು ಎಳೆದು ತಂದಿದ್ದಾರೆ. ಶಾಸಕರೊಬ್ಬರು ನಟಿ ತ್ರಿಶಾ ಮೇಲೆ ಮೋಹಗೊಂಡು 25 ಲಕ್ಷ ರೂ. ಕೊಟ್ಟು ರೆಸಾರ್ಟ್‌ಗೆ ಕರೆಸಿಕೊಂಡಿದ್ದರು ಎಂದು ಹೇಳಿದ್ದಾರೆ.ನಟಿಯ ಬಗ್ಗೆ ಅಸಭ್ಯವಾಗಿ ಮಾತನಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸದ್ಯ ಎವಿ ರಾಜು ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದೆ.
ರಾಜಕೀಯ ಮುಖಂಡನ ಹೇಳಿಕೆಗೆ ಕಾಲಿವುಡ್ ಮಂದಿ ಕೂಡ ಭಾರೀ ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ರಾಜಕೀಯ ನಾಯಕರಿಗೆ ಸಿನಿಮಾ ನಟಿಯರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವುದು ಅಭ್ಯಾಸವಾಗಿ ಬಿಟ್ಟಿದೆಯಂತೆ. ಕೂಡಲೇ ಆತನಗೆ ತ್ರಿಶಾ ಲೀಗಲ್ ನೋಟಿಸ್ ನೀಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
<a href=https://youtube.com/embed/YR43cJ9hfbI?autoplay=1&mute=1><img src=https://img.youtube.com/vi/YR43cJ9hfbI/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ರಾಜಕೀಯ ನಾಯಕರೊಬ್ಬರನ್ನು ಟೀಕಿಸಲು ನಟಿಯ ಹೆಸರನ್ನು ಬಳಸಿ ಕೀಳುಮಟ್ಟದ ಕಾಮೆಂಟ್ ಮಾಡುವುದು ಸರಿಯಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಈ ಬಗ್ಗೆ ನಟಿ ತ್ರಿಶಾ ಟ್ವೀಟ್ ಮಾಡಿ ಸ್ಪಂದಿಸಿದ್ದಾರೆ. ಮಾಧ್ಯಮಗಳ ಗಮನ ಸೆಳೆಯಲು ನೀಚ ಜನರು ಯಾವುದೇ ಮಟ್ಟಕ್ಕೆ ಇಳಿಯುವುದನ್ನು ಪದೇ ಪದೆ ನೋಡುವುದು ಅಸಹ್ಯಕರವಾಗಿದೆ. ಈ ಕಾಮೆಂಟ್‌ಗಳನ್ನು ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಮುಂದೆ ಏನು ಹೇಳಬೇಕು ಹಾಗೂ ಏನು ಮಾಡಬೇಕೆಂದು ನನ್ನ ಲೀಗ್ ಟೀಂ ನೋಡಿಕೊಳ್ಳುತ್ತದೆ ಎಂದು ಬರೆದುಕೊಂಡಿದ್ದರು.
ರಾಜಕೀಯ ಪಕ್ಷವೊಂದಕ್ಕೆ ಸೇರಿದ ಕೀಳು ಬುದ್ಧಿಯ ಮೂರ್ಖನೊಬ್ಬ ಚಿತ್ರರಂಗದ ವ್ಯಕ್ತಿಯೊಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದನ್ನು ನಾನು ಕೇಳಿದೆ. ನೀನು ಇದನ್ನೆಲ್ಲಾ ಪ್ರಚಾರಕ್ಕಾಗಿ ಮಾಡುತ್ತಿದ್ದೀಯಾ ಎಂದು ನನಗೆ ಗೊತ್ತು. ಆದರೆ ನಾನು ನಿಮ್ಮ ಹೆಸರನ್ನು ಅಥವಾ ನೀವು ಯಾರನ್ನು ಗುರಿಯಾಗಿಸಿಕೊಂಡಿದ್ದೀರಿ ಅವರ ಹೆಸರನ್ನು ಉಲ್ಲೇಖಿಸಲು ಬಯಸುವುದಿಲ್ಲ. ನನ್ನ ಪ್ರಕಾರ ನೀವು ಮಾಡಿದ ಕೆಲಸ ಉಲ್ಲೇಖಿಸಲು ಸಹ ಯೋಗ್ಯವಾಗಿಲ್ಲ. ಅಂತಹ ಜನರನ್ನು ಖಂಡಿಸುವುದು ನನ್ನ ಉದ್ದೇಶವಲ್ಲ. ನಿನ್ನಂತಹ ರಾಕ್ಷಸರು ನರಕದಲ್ಲಿ ಕೊಳೆಯಲಿ ಎಂದು ಹಾರೈಸುತ್ತೇನೆ ಎಂದು ವಿಶಾಲ್ ಮಾಡಿರುವ ಟ್ವೀಟ್ ವೈರಲ್ ಆಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.