ಬಿಗ್ ಬಾಸ್ ಮನೆಯಿಂದ ಹೊರಬಂದ ಮರುದಿನವೇ ಲೈವ್ ಬಂದ ತ್ರಿವಿಕ್ರಮ್
Dec 23, 2024, 19:22 IST
ಬಿಗ್ ಬಾಸ್ ಮನೆಯಲ್ಲಿ ಇಷ್ಟು ದಿನ ವೀಕ್ಷಕರನ್ನು ಮನರಂಜನೆ ಮಾಡಿ ಇದೀಗ ಎಲಿಮಿನೇಷನ್ ಆಗಿ ಹೊರಬಂದಿರುವ ತ್ರಿವಿಕ್ರಮ್ ಅವರು ಅಭಿಮಾನಿಗಳ ಕುತೂಹಲಕ್ಕೆ ಸ್ಪಷ್ಟತೆ ಕೊಟ್ಟಿದ್ದಾರೆ. ಹೌದು, ಬಿಗ್ ಬಾಸ್ ಮನೆಯಲ್ಲಿ ಭವ್ಯ ಜೊತೆ ಇದ್ದ ಒಡನಾಟ ಹಾಗೂ ಪ್ರತಿಸ್ಪರ್ಧಿಗಳ ಜೊತೆ ಇದ್ದಂತಹ ಬೆಳವಣಿಗೆಯನ್ನು ಅಭಿಮಾನಿಗಳ ಮುಂದೆ ತ್ರಿವಿಕ್ರಮ್ ಹೇಳಿಕೊಂಡಿದ್ದಾರೆ.
<a href=https://youtube.com/embed/VQ9Y8h-WH44?autoplay=1&mute=1><img src=https://img.youtube.com/vi/VQ9Y8h-WH44/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಹೌದು, ತ್ರಿವಿಕ್ರಮ್ ಅವರು ಏಕಾಏಕಿ ಮನೆಯಿಂದ ಔಟ್ ಆದ ಬಳಿಕ ಅವರ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲ ಇತ್ತು. ಆದರೆ ಇದೀಗ ಈ ಎಲ್ಲಾ ಕುತೂಹಲಕ್ಕೂ ಉತ್ತರ ಸಿಕ್ಕಿದೆ. ತ್ರಿವಿಕ್ರಮ್ ಅವರು ಸೀಕ್ರೇಟ್ ರೂಮ್ ಅಲ್ಲಿ ಇಲ್ಲ ಎಂಬುವುದು ಸ್ಪಷ್ಟತೆ ಸಿಕ್ಕಿದೆ.
ತ್ರಿವಿಕ್ರಮ್ ಅವರ ಎಲಿಮಿನೇಷನ್ ವೀಕ್ಷಕರಲ್ಲಿ ಬಾರಿ ನಿರಾಶೆ ಉಂಟಾಗಿದೆ. ಇಷ್ಟು ಚೆನ್ನಾಗಿ ಆಟವಾಡಿ ಎಲಿಮಿನೇಷನ್ ಆಗಿದ್ದು ವೀಕ್ಷಕರಲ್ಲಿ ದುಃಖ ತಂದಿದೆ. ಆದರೆ ಕೆಲ ವೀಕ್ಷಕರು ಇದು ಸೀಕ್ರೇಟ್ ರೂಮ್ ವಿಚಾ ಇರಬಹುದು ಅಂತ ಅಂದುಕೊಂಡಿದ್ದರು. ಆದರೆ ಇದೀಗ ತ್ರಿವಿಕ್ರಮ್ ಲೈವ್ ಬಂದಿರುವ ಹಿನ್ನೆಲೆ ಈ ಎಲ್ಲಾ ಕುತೂಹಲಕ್ಕೆ ತೆರೆ ಬಿದ್ದಿದೆ.