ವೇದಿಕೆ ಮೇಲೆ ದರ್ಶನ್ ಅವರಿಗೆ ಕ್ಷಮೆ ಕೇಳಿದ ಉಮಾಪತಿ ಗೌಡ, 'ನಾನು ಇನ್ನು ಚಿಕ್ಕವನು ಕ್ಷಮಿಸಿ ಡಿ‌ ಬಾಸ್'

 

ನಟ ದರ್ಶನ್ ತೂಗುದೀಪ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ ನಡುವೆ ಕಿರಿಕ್ ಇರುವುದು ಎಲ್ಲರಿಗೂ ಗೊತ್ತೆ ಇದೆ. ಇಬ್ಬರ ನಡುವೆ ಬೂದಿ ಮುಚ್ಚಿದ ಕೆಂಡದಂತಿದ್ದ ಜಗಳಕ್ಕೆ ಮತ್ತಷ್ಟು ತುಪ್ಪ ಸುರಿದಿದ್ದು, ಕಾಟೇರ ಟೈಟಲ್ ವಿವಾದ. ಸಂದರ್ಶನವೊಂದರಲ್ಲಿ ಕಾಟೇರ ಟೈಟಲ್ ಕೊಟ್ಟಿದ್ದೇ ನಾನು ಎಂದಿದ್ದರು ಉಮಾಪತಿ.

ಕಾಟೇರ ಸಿನಿಮಾ 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನಲೆಯಲ್ಲಿ ನಡೆದ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ತಗಡು ಎಂಬ ಪದ ಬಳಸಿ ಪರೋಕ್ಷವಾಗಿ ದಾಳಿ ನಡೆಸಿದ್ದರು. ಏ ತಗಡೇ, ಗುಮ್ಮಿಸ್ಕೋತಿಯಾ ಎಂಬ ಪದಗಳನ್ನು ಬಳಸಿ ಸಾರ್ವಜನಿಕವಾಗಿ ಅವಹೇಳನ ಮಾಡಿದ್ದರು. ಇದಕ್ಕೆ ಒಕ್ಕಲಿಗರ ಸಂಘ, ಕರ್ನಾಟಕ ಪ್ರಜಾಪರ ವೇದಿಕೆಯಿಂದ ತೀವ್ರ ವಿರೋಧ ಕೂಡ ಬಂದಿದೆ.  <a href=https://youtube.com/embed/I19iTs7PRmk?autoplay=1&mute=1><img src=https://img.youtube.com/vi/I19iTs7PRmk/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಇದಲ್ಲದೆ ಉಮಾಪತಿ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವರನಟ ಡಾ.ರಾಜ್‌ಕುಮಾರ್ ಅವರ ಹಳೆಯ ವಿಡಿಯೋವೊಂದನ್ನು ಹಂಚಿಕೊಂಡು ದರ್ಶನ್‌ಗೆ ಟಕ್ಕರ್ ಕೊಟ್ಟಿದ್ದಾರೆ. ಈಗಾಗಲೇ ಹಲವು ಕಡೆ ನೇರವಾಗಿಯೇ ದರ್ಶನ್ ವಿರುದ್ಧ ಅಸಮಾಧಾನ ಹೊರಹಾಕಿರುವ ನಿರ್ಮಾಪಕ ಉಮಾಪತಿ ಶ್ರೀನಿವಾಸ್, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಣ್ಣಾವ್ರ ಸಂದರ್ಶನದ ತುಣುಕೊಂದನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ನಿರ್ಮಾಪಕರನ್ನು ಹಿರಿಯ ನಟರು ಹೇಗೆ ಗೌರವಿಸುತ್ತಿದ್ದರು ಎಂಬುದನ್ನು ಸೂಚ್ಯವಾಗಿ ದಾಸನಿಗೆ ತಿಳಿಸಿದ್ದಾರೆ.

ಕ್ಷಮೆ ಕೇಳಬಹುದಿತ್ತು ಆದರೆ ಅದರ ಬೆಲೆ ಗೊತ್ತಿಲ್ಲದ ಮನುಷ್ಯ ಕೇಳಿ ಪ್ರಯೋಜನ ಇಲ್ಲ ಎಂದು ಮಾತು ತೇಲಿಸಿದ್ದಾರೆ. ಅಣ್ಣಾವ್ರ ಸಂದರ್ಶನದ ತುಣುಕು ಹಂಚಿಕೊಂಡಿರುವ ನಿರ್ಮಾಪಕ ಉಮಾಪತಿ, ನೀವು ನಿರ್ಮಾಪಕರಿಗೆ ಕೊಟ್ಟಿರುವ ಗೌರವ ಹಾಗು ಅನ್ನದಾತರು ಏನ್ನುವ ಬಿರುದ್ದಿಗೆ ನಾವುಗಳು ನಿರ್ಮಾಪಕರಾಗಿ ನಮ್ಮ ಜೀವನ ಸಾರ್ಥಕವಾಹಿತು ಡಾ. ರಾಜಕುಮಾರ್ ಸಾರ್ ಎಂದು ಶೀರ್ಷಿಕೆ ನೀಡಿದ್ದು, ಕೈ ಮುಗಿದ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.