ತಾ ಯಿಯ ವಿರುದ್ಧ ತಿರುಗಿಬಿದ್ದ ವೈಷ್ಣವ್; ಇವತ್ತಿನ ಸಂಚಿಕೆ ಈ ಕೂಡಲೇ ನೋ ಡಿ

 

ಲಕ್ಷ್ಮೀ ಬಾರಮ್ಮಾ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಯಾಗಿದ್ದು. ಇದು ಟ್ರೈಯಾಂಗಲ್​ ಲವ್​ ಸ್ಟೋರಿಯನ್ನು ಆಧರಿಸಿದ ಕಥೆಯಾಗಿದೆ. ಕೀರ್ತಿ ಹಾಗೂ ವೈಷ್ಣವ್ ಮೊದಲು ಪ್ರೀತಿಸುತ್ತಾ ಇರುತ್ತಾರೆ. ಆದರೆ ಇದೀಗ ಅವನಿಗೆ ಲಕ್ಷ್ಮೀ ಜೊತೆ ಮದುವೆ ಆಗಿದೆ. ಆದರೆ ಕೀರ್ತಿಗೆ ಅವನ ಮೇಲಿರುವ ಪ್ರೀತಿ ಮಾತ್ರ ಕಮ್ಮಿಯಾಗಿಲ್ಲಾ. ಇದು ಧಾರಾವಾಹಿಯ ಮುಖ್ಯ ಕಥೆಯಾಗಿದೆ.

ಕಾವೇರಿ ಆಸ್ಪತ್ರೆಯಿಂದ ಸೀದಾ ವೈಷ್ಣವ್ ಇದ್ದ ದೇವಸ್ಥಾನಕ್ಕೆ ಬಂದಿದ್ದಾಳೆ. ಬಂದು ಪುಟ್ಟು ಇತ್ತೀಚೆಗೆ ಯಾವ ಮಾತನ್ನೂ ಕೇಳ್ತಾ ಇಲ್ಲ. ಚಿಕ್ಕ ಮಕ್ಕಳ ರೀತಿ ಆಡ್ತಾ ಇದ್ದಾನೆ. ಅವನಿಗೆ ತಾನು ಮಾಡಿದ್ದೆ ಸರಿ ಎನ್ನುವ ಮನೋಭಾವ ಬಂದಿದೆ ಎಂದು ಹೇಳುತ್ತಾಳೆ. ಇಷ್ಟು ದಿನ ನನ್ನ ಮಾತನ್ನು ಕೇಳ್ತಾ ಇದ್ದ ಆದ್ರೆ ಈಗ ಇನ್ಯಾರದ್ದೂ ಮಾತು ಕೇಳಿ ಇದನ್ನೆಲ್ಲ ಮಾಡ್ತ ಇದ್ದಾನೆ.

ಈಗಲೇ ಹೋಗಿ ಅವನು ಯಾರಿಗೋಸ್ಕರನೋ ಮಾಡ್ತಾ ಇರೋ ಈ ಸೇವೆನಾ ನಾನೇ ತಡಿತೀನಿ ಎಂದು ಹೇಳುತ್ತಾಳೆ. ನಂತರ ಕಾರ್ ಡೋರ್ ಹಾಕಿ ಮೆಟ್ಟಿಲು ಇಳಿದುಕೊಂಡು ಬರುತ್ತಾಳೆ. ಬಂದ ತಕ್ಷಣ ಅಲ್ಲೇ ಕಲ್ಯಾಣಿ ಹತ್ತಿರ ವೈಷ್ಣವ್ ಪೂಜೆ ಮಾಡ್ತ ಇರೋದು ಕಾಣಿಸುತ್ತದೆ. ಅವನನ್ನು ನೋಡಿ ಇವಳಿಗೆ ಶಾಕ್ ಆಗುತ್ತದೆ. <a href=https://youtube.com/embed/mKTdoeNjrpU?autoplay=1&mute=1><img src=https://img.youtube.com/vi/mKTdoeNjrpU/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಇದೇನಿದು ಪುಟ್ಟ ಆಗ್ಲೇ ಪೂಜೆ ಆರಂಭ ಮಾಡಿದಾನೆ ಅಂತ ಅವಳು ಮನಸಿನಲ್ಲೇ ಅಂದುಕೊಳ್ಳುತ್ತಾಳೆ. ನಂತರ ಅವಳು ತಡ ಮಾಡೋದು ಬೇಡ. ಅವನಿದ್ದಲ್ಲಿಗೆ ಹೋಗಿ ಬಿಡ್ತೀನಿ ಎಂದು ಅಂದುಕೊಂಡು. ತಾನು ಅವನನ್ನು ಎಷ್ಟು ಜೋಪಾನವಾಗಿ ನೋಡಿಕೊಂಡಿದ್ದೆ ಎನ್ನುವುದನ್ನು ನೆನಪಿಸಿಕೊಳ್ಳುತ್ತಾಳೆ.

ನಾನಾದರೆ ಅವನಿಗೆ ಶೀತ ಆಗುತ್ತದೆ ಎಂದು ತಣ್ಣೀರನ್ನು ಸಹ ಕುಡಿಸಿಲ್ಲ. ಇಂದು ನೋಡಿದ್ರೆ ಇವನು ಒದ್ದೆ ಬಟ್ಟೆಯಲ್ಲಿ ತಣ್ಣೀರಿನಲ್ಲಿ ನಿಂತುಕೊಂಡಿದ್ದಾನೆ. ಛೆ ಎಂದು ಅಂದುಕೊಳ್ಳುತ್ತಾಳೆ. ಅವನಿಗೆ ಒಂದು ಚೂರು ನೋವಾಗಬಾರದು ಎಂದು ಒಂದು ಗಾಯ, ಗೀರು ಆಗದ ಹಾಗೆ ನಾನು ನೋಡಿಕೊಂಡಿದ್ದೆ ಎಂದು ಹೇಳುತ್ತಾಳೆ.

ಈಗಲೇ ಹೋಗಿ ತಡಿತೀನಿ ಅವನನ್ನು ಎಂದು ಹೇಳುತ್ತಾಳೆ. ಆದರೆ ತಡೆಯಲು ಹೋಗುವ ಮುನ್ನ ಗೊಂಬೆ ಆಡಿಸುವವನು ಬಂದು. ನೀವು ಈಗ ತಡಿತೀನಿ ಎಂದರೆ ಆಗೋದಿಲ್ಲ. ಎಲ್ಲವೂ ಆ ದೇವರು ಅಂದುಕೊಂಡ ಹಾಗೇ ಮತ್ತು ಅವನು ಸಂಕಲ್ಪ ಮಾಡಿದ ಹಾಗೇ ನಡೆಯುತ್ತದೆ ಎಂದು ಹೇಳುತ್ತಾನೆ. ಆಗ ಇವಳಿಗೆ ಕೋಪ ಬರುತ್ತದೆ. ತನ್ನ ಪ್ಲಾನ್ ಉಲ್ಟಾ ಆಗಿದೆ ಎಂದು ಬೇಸರ ಪಡುತ್ತಾಳೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.