ಮೊಟ್ಟಮೊದಲ ಬಾರಿಗೆ ಈ ರೀತಿ ಡ್ಯಾನ್ಸ್ ಮಾಡಿದ ವೈಷ್ಣವಿಗೌಡ
ಸೀತಾ ರಾಮ ಧಾರಾವಾಹಿಯ ಮೂಲಕ ಎಲ್ಲರ ಮನಗೆದ್ದವರು ನಟಿ ವೈಷ್ಣವಿ ಗೌಡ. ಸೀತಾಳ ಪಾತ್ರ ಇದರಲ್ಲಿ ಬಹಳ ಮುದ್ದು ಮುದ್ದಾದ ಪಾತ್ರ. ಸಿಹಿಯ ಪ್ರೀತಿಯ ಅಮ್ಮ. ಹಾಗೆಯೇ ರಾಮನ ಪ್ರೀತಿಯ ಮಡದಿ. ಎಲ್ಲರ ಮನಗೆದ್ದಿರುವ ಈ ಧಾರಾವಾಹಿಯ ಹಾಗೆಯೇ ಒಂದು ಕಾಲದಲ್ಲಿ ಅಗ್ನಿ ಸಾಕ್ಷಿ ಧಾರಾವಾಹಿ ಕೂಡ ಎಲ್ಲರ ಅಚ್ಚುಮೆಚ್ಚಿನ ಧಾರವಾಹಿ ಆಗಿತ್ತು.
ಈ ಎರಡು ಧಾರಾವಾಹಿಗಳಲ್ಲಿ ವೈಷ್ಣವಿ ಗೌಡ ಅವರೇ ಪ್ರಮುಖ ಪಾತ್ರಧಾರಿ.ಇಂಥಾ ವೈಷ್ಣವಿ ಗೌಡ ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ನಟಿ. ಆಗಾಗ ಫೋಟೋ ಶೂಟ್ ಮಾಡಿಸಿಕೊಂಡು ಹಾಗೆಯೇ ರೀಲ್ಸ್ ಮಾಡಿಕೊಂಡು ಎಲ್ಲರ ಮನಸನ್ನು ಗೆದ್ದಿರುವ ವೈಷ್ಣವಿ ಗೌಡ ಸದ್ಯಕ್ಕೆ ತಮಿಳಿನ ರಾಯನ್ ಚಿತ್ರದ ಹಾಡೊಂದಕ್ಕೆ ಭರ್ಜರಿ ಹೆಜ್ಜೆ ಹಾಕಿದ್ದಾರೆ.
ಈ ಮೂಲಕ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ. ವೈಷ್ಣವಿ ಅವರ ಈ ಡ್ಯಾನ್ಸ್ ಮತ್ತು ಮುಖದಲ್ಲಿನ ಭಾವನೆಗಳನ್ನು ನೋಡಿದ ಇವರ ಅಭಿಮಾನಿಗಳು ನೀವೇ ನಮ್ಮ ರೌಡಿ ಬೇಬಿ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ.ಇನ್ನೂ ಹಾಲು ಗೆನ್ನೆಯ ಚೆಲುವೆಯ ನೋಟಕ್ಕೆ ಮನಸೋಲದವರೇ ಇಲ್ಲ. ಈಕೆ ಮಾಡಿದ ರೀಲ್ಸ್ ಗಳು ಬಹಳ ಫೇಮಸ್ ಆಗುತ್ತಿದ್ದ ಹಾಗೆಯೇ ಆಕೆಗೆ ಇನ್ನಷ್ಟು ಅವಕಾಶಗಳು ಅರಸಿ ಬರುತ್ತಿವೆ.
ಇನ್ನೂ ಈ ಚೆಲುವೆ ಕನ್ನಡ , ಹಾಗೆಯೇ ಇತರ ಭಾಷೆಗಳಲ್ಲೂ ತನ್ನದೇ ಆದ ಛಾಪನ್ನು ಮೂಡಿಸುತ್ತಿದ್ದಾರೆ. ಕಿರುತೆರೆಯಲ್ಲಿ ಸಖತ್ ಮಾಸ್ ಆಗಿ ನಟಿಸುವ ಈ ಬ್ಯೂಟಿ ಎಲ್ಲರ ಮನಸ್ಸಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತಿರುವುದು ಮಾತ್ರ ಅಷ್ಟೇ ಸತ್ಯ. ಇನ್ನೂ ಇತ್ತೀಚಿನ ದಿನಗಳಲ್ಲಿ ವೈಷ್ಣವಿ ಗೌಡ ಹಲವಾರು ಬಾರಿ ಸೀತಾ ರಾಮ ಟೀಂ ಜೊತೆಗೆ ಹಾಗೆಯೇ ಮಗಳು ಸಿಹಿ ಜೊತೆಗೆ ಭರ್ಜರಿ ಸ್ಟೆಪ್ ಹಾಕುತ್ತಾರೆ .
ಹಾಗೆಯೇ ಇದೀಗ ತೆಲುಗು ಹಾಡಿಗೆ ಬಹಳ ಅದ್ಭುತವಾಗಿ ಡ್ಯಾನ್ಸ್ ಮಾಡಿ ಎಲ್ಲರ ಮನಸ್ಸನ್ನೂ ಗೆದ್ದಿದ್ದಾರೆ ವೈಷ್ಣವಿ ಗೌಡ. ಈ ವಿಡಿಯೋ ನೋಡಿದ ಅನೇಕ ಜನರು ನಿಮಗೆ ಬಹಳ ಟ್ಯಾಲೆಂಟ್ ಇದೆ. ನಿಮ್ಮ ಟ್ಯಾಲೆಂಟ್ ಅನ್ನು ಕಿರುತೆರೆಗೆ ಮೀಸಲು ಮಾಡಿಕೊಳ್ಳಬೇಡಿ ಎಂದು ಹೇಳಿದ್ದಾರೆ. ಇನ್ನೂ ಕೆಲವರು ತೆಲುಗಿನಲ್ಲಿ ಕೂಡ ನೀವು ಸೀತಾ ರಾಮ ರೀಮೇಕ್ ಮಾಡಿ ಎಂದು ಹೇಳುತ್ತಾರೆ.
ಇದೆಲ್ಲವನ್ನೂ ಕೇಳಿದ ವೈಷ್ಣವಿ ಗೌಡ ಮತ್ತಷ್ಟು ಖುಷಿ ಆಗಿರುವುದಂತು ಸತ್ಯ. ಜೀ ಕನ್ನಡದ ದೇವಿ' ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿರೋ ವೈಷ್ಣವಿ, ಪುನರ್‌ವಿವಾಹದಲ್ಲಿ ನಟಿಸಿದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.