ಹಳೆ ಪತ್ನಿಗೆ ಕೈಕೊಟ್ಟು ತನಿಷಾ ಹಿಂದೆ ಬಿದ್ದ ವರ್ತೂರು, ' I LOVE YOU ತನಿಷಾ'

 

ಬಿಗ್‌ಬಾಸ್‌ ಕನ್ನಡದ ಮನೆಯಲ್ಲಿ ಕಳೆದ ಹಲವು ವಾರ ಹೊಡೆದಾಟ ಬಡಿದಾಟ ಜಗಳ ವೀಕ್ಷಿಸುತ್ತಿದ್ದ ಪ್ರೇಕ್ಷಕರಿಗೆ ಈ ವಾರ ಹೊಸ ರೀತಿಯ ಮನರಂಜನೆ ದೊರಕಲಿದೆ. ಮನೆಯೇ ಮೊದಲ ಪಾಠಶಾಲೆ ಎಂಬ ಮಾತು ಬಿಗ್‌ಬಾಸ್ ಮನೆಯಲ್ಲಿ ಅಕ್ಷರಶಃ ಸತ್ಯವಾಗುತ್ತಿದೆ. ಬಿಗ್‌ಬಾಸ್‌ ಮನೆಯಲ್ಲಿ ಪ್ರಾಥಮಿಕ ಶಾಲೆ ಪ್ರಾರಂಭವಾಗಿದೆ.

ಕಳೆದ ವಾರ ರಕ್ಕಸರ ಹಾಗೆ ಕಿತ್ತಾಡಿದ್ದವರೇ ಈ ವಾರ ಪುಟ್ಟ ಮಕ್ಕಳಾಗಿ ಶಾಲೆಗೆ ಸೇರಿಕೊಂಡಿದ್ದಾರೆ. ಒಬ್ಬರ ಕೈಗೆ ಇನ್ನೊಬ್ಬರು ಕಚ್ಚುತ್ತ, ಒಬ್ಬರ ಬಗ್ಗೆ ಇನ್ನೊಬ್ಬರು ದೂರು ಹೇಳುತ್ತ, ಎಲ್ಲರ ಸೇರಿ ಒಟ್ಟಿಗೆ ಪ್ರಾರ್ಥನೆ ಮಾಡುತ್ತ ಕೋಲಾಹಲವೆದ್ದಿದ್ದ ಮನೆಯಲ್ಲಿ ಕಲರವ ಉಂಟುಮಾಡುತ್ತಿದ್ದಾರೆ. ಕ್ರೌರ್ಯ ಮೆರೆದಾಡಿದ್ದ ಜಾಗದಲ್ಲಿ  ಮುಗ್ಧತೆ ಅರಳುತ್ತಿದೆ. 

ಈ ವಾರದ ಟಾಸ್ಕ್‌ನಲ್ಲಿ ಬಿಗ್‌ಬಾಸ್ ಮನೆಯ ಎಲ್ಲ ಸದಸ್ಯರನ್ನು ಬಾಲ್ಯಕ್ಕೆ ಕರೆದೊಯ್ಯುತ್ತಿದ್ದಾರೆ. ಎಲ್ಲ ಸ್ಪರ್ಧಿಗಳೂ ಪ್ರಾಥಮಿಕ ಶಾಲೆಯ ಸಮವಸ್ತ್ರ ತೊಟ್ಟು ಅಕ್ಷರಶಃ ಮಕ್ಕಳೇ ಆಗಿಬಿಟ್ಟಿದ್ದಾರೆ. ಒಬ್ಬೊಬ್ಬರೂ ಇನ್ನೊಬ್ಬರ ಚೇಷ್ಟೆಗಳನ್ನು ನೋಡಿ ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ. ಈ ವಾರವಿಡೀ ಮಕ್ಕಳಾಟದ ಮನರಂಜನೆ ಭರಪೂರ ಸಿಗಲಿದೆ. <a href=https://youtube.com/embed/yFQ2HR13D7Q?autoplay=1&mute=1><img src=https://img.youtube.com/vi/yFQ2HR13D7Q/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಪ್ರಾಥಮಿಕ ಶಾಲೆಯಲ್ಲಿ ಮಕ್ಕಳೇನೂ ಭರ್ತಿಯಾಗಿಯಾಯ್ತು. ಹಾಗಾದ್ರೆ ಅವರಿಗೆ ಪಾಠ ಮಾಡುವ ಗುರುಗಳು ಯಾರು? ಮೊದಲ ತರಗತಿಯಲ್ಲಿ ವ್ಯಕ್ತಿತ್ವ ವಿಕಸನದ ಬಗ್ಗೆ ಪಾಠ ಮಾಡಲು ಬಂದವರು, ತನಿಷಾ ಟೀಚರ್! ಅಷ್ಟು ಸುಂದರ ಟೀಚರ್ ಪಾಠ ಮಾಡಲು ಬಂದರೆ ಹಾಜರಿಗೇನು ಕಮ್ಮಿ? ಅದರಲ್ಲಿಯೂ ಲಾಸ್ಟ್‌ ಬೆಂಚ್‌ ಹುಡುಗ ವರ್ತೂರು ಸಂತೋಷ್‌ ಅಂತೂ, ನೀವ್ ಚೆನ್ನಾಗ್ ಕಾಣಿಸ್ತಾ ಇದೀರಾ ಮಿಸ್‌ ಎಂದು ನಿಂತಲ್ಲೇ ಕೈ ಬೀಸಿದ್ದಾರೆ. 

ಅದಕ್ಕೆ ತನಿಷಾ ಮಿಸ್ ನಾಚಿಕೊಂಡಿದ್ದಂತೂ ನೋಡಿ ಕಲಿಯಬೇಕು ಎನ್ನುವ ಹಾಗೇ ಇತ್ತು. ಆದರೆ ನಾಚಿಕೆಯನ್ನು ಮುಚ್ಚಿಟ್ಟುಕೊಂಡ ಮಿಸ್‌, ವರ್ತೂರ್‌ ಸಂತೋಷ್‌ಗೆ ಬೆಂಚ್‌ ಮೇಲೆ ನಿಂತುಕೊಳ್ಳುವ ಶಿಕ್ಷೆ ಕೊಟ್ಟಿದ್ದಾರೆ. ಅಲ್ಲದೇ ಸ್ಲೇಟಿನ ಮೇಲೆ, ಐ ಲವ್ ಯೂ ಎಂದು ಬರೆದು ಓದುವಂತೆ ಕೇಳುತ್ತಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ವರ್ತೂರ್ ಸಂತೋಷ್ ಅವರಿಗೆ ತನಿಷ ಮೇಲೆ ಮನಸಾದಂತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.