ದುಬಾರಿ ಕಾರು ಖರೀದಿಸಿದ ವಸಿಷ್ಠ ಸಿಂಹ ಹರಿಪ್ರಿಯಾ ಜೋಡಿ, ಬೆಲೆ ಕೇಳಿದ್ರೆ ತಲೆ ತಿರುಗೋದು ಪಕ್ಕಾ

 

ದುಬಾರಿ ಕಾರು ಹಲವರ ಇಷ್ಟದ ಕನಸು ಸ್ಯಾಂಡಲ್ವುಡ್ ಚಿಟ್ಟೆ ವಸಿಷ್ಠ ಸಿಂಹ ಹಾಗೂ ಖ್ಯಾತ ನಟಿ ಹರಿಪ್ರಿಯಾ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಹೀಗಾಗಿ ಮುದ್ದಾದ ಜೋಡಿಯ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಹೌದು,ಒಂದಲ್ಲಾ ಒಂದು ವಿಚಾರಕ್ಕೆ ಈ ಲವ್ ಬರ್ಡ್ಸ್ ಸುದ್ದಿಯಲ್ಲಿ ಇರುತ್ತಾರೆ. 

 ಇದೀಗ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಅವರು ಹೊಸ ಕಾರು ಖರೀದಿ ಮಾಡಿದ್ದಾರೆ.ಹೊಸ ಕಾರು ಖರೀದಿ ಮಾಡಿದ ವಿಡಿಯೋವನ್ನು ವಸಿಷ್ಠ ಸಿಂಹ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಈ ಸ್ಟಾರ್ ಜೋಡಿಯೂ ಕಾರು ಶೋ ರೂಮ್ಗೆ ಖಡಕ್ ಆಗಿ ಎಂಟ್ರಿ ಕೊಟ್ಟಿದ್ದಾರೆ.

 ಬಳಿಕ ಹೊಸ ದುಬಾರಿ ಕಾರಿನ ವಿತರಣೆಯನ್ನು ಪಡೆದುಕೊಂಡಿದ್ದಾರೆ.ಇನ್ನು, ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ GLE ಸೂಪರ್ ಲಕ್ಷುರಿ ಕಾರನ್ನು ಖರೀದಿ ಮಾಡಿದ್ದಾರೆ. GLE ಸೂಪರ್ ಲಕ್ಷುರಿ ಕಾರಿನ ಬೆಲೆ ಬರೋಬ್ಬರಿ 96.40 ಲಕ್ಷದಿಂದ 1.15 ಕೋಟಿಯವರೆಗೂ ಇದೆ ಎಂದು ಹೇಳಲಾಗುತ್ತಿದೆ. 


ಸದ್ಯ ಹೊಸ ಕಾರು ಖರೀದಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.ಈ ವಿಡಿಯೋ ನೋಡಿದ ಅಭಿಮಾನಿಗಳು ಇನ್ಸ್ಟಾಗ್ರಾಮ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಶುಭ ಕೋರುತ್ತಿದ್ದಾರೆ. ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ 2023 ಜನವರಿ 26ರಂದು ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ .

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.