ವೀರೇಂದ್ರ ಹೆಗ್ಗಡೆ ನಿಜವಾಗಿಯೂ ದೇವ ಮಾನವರ, ಇವರ ಹಿನ್ನೆಲೆ ಕೇಳಿ ತಲೆಕೆಡಿಸಿಕೊಂಡ ಕರುನಾಡು

 

ಕರ್ನಾಟಕ ರಾಜ್ಯದ ಸುಪ್ರಸಿದ್ಧ ಧಾರ್ಮಿಕ ಸ್ಥಳಗಳಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಮುಂಚೂಣಿಯಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಧರ್ಮಸ್ಥಳ ಹಿಂದೂ, ಜೈನ ಧರ್ಮ ಹಾಗೂ ಶೈವ ಪರಂಪರೆಯ ತ್ರಿವೇಣಿ ಸಂಗಮದ ಕ್ಷೇತ್ರ. ಇಲ್ಲಿನ ಮಂಜುನಾಥ ಸ್ವಾಮಿ ತನ್ನ ಪವಾಡಗಳಿಂದಲೇ ಪ್ರಖ್ಯಾತ. ಈ ಕ್ಷೇತ್ರದ ಧರ್ಮಾಧಿಕಾರಿ ಅಥವಾ ಖಾವಂದರ್ ಆಗಿ ಆಡಳಿತ ನಡೆಸುತ್ತಿರುವವರೇ ಶ್ರೀ ಡಾ. ವೀರೇಂದ್ರ ಹೆಗ್ಗಡೆ. 

ಧಾರ್ಮಿಕತೆ, ಶಿಕ್ಷಣ, ಆರೋಗ್ಯ, ಸಮಾಜಸೇವೆ, ಸ್ವ ಉದ್ಯೋಗ, ಮಹಿಳಾ ಸಬಲೀಕರಣ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ವೀರೇಂದ್ರ ಹೆಗ್ಗಡೆ ಅವರು ದೇಶದೆಲ್ಲೆಡೆ ಚಿರಪರಿಚಿತರು. ಇದೀಗ ಅವರ ಸಾಧನೆಯನ್ನು ಗುರುತಿಸಿ ಅವರನ್ನು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಕೇಂದ್ರ ಸರ್ಕಾರವೇ ನೇರವಾಗಿ ನೇಮಕ ಮಾಡಿದೆ. ಹಾಗಿದ್ರೆ ವೀರೇಂದ್ರ ಹೆಗ್ಗಡೆಯವರ ಜೀವನ ಹೇಗಿತ್ತು? ಅವರ ಸಾಧನೆಗಳೇನು? ತಿಳ್ಕೊಂಡ್ ಬರೋಣ ಬನ್ನಿ.

ಧರ್ಮಾಧಿಕಾರಿ ರತ್ನವರ್ಮ ಹೆಗ್ಗಡೆ ಮತ್ತು ರತ್ನಮ್ಮ ಹೆಗ್ಗಡೆ ದಂಪತಿಯ ಹಿರಿಯ ಪುತ್ರ ವೀರೇಂದ್ರ ಅವರು ನವೆಂಬರ್ 23, 1948 ರಂದು ಜನಿಸಿದರು. ಅವರು ತುಳು ಪರಂಪರೆಯ ಪೆರ್ಗಡೆ ರಾಜವಂಶದಿಂದ ಬಂದವರು. ಧರ್ಮಾಧಿಕಾರಿ ಪದ್ಮಭೂಷಣ ಡಾ. ವೀರೇಂದ್ರ ಹೆಗ್ಗಡೆ ಎಂದರೆ ನಾಡಿನ ಜನತೆಗೆ ಅಪಾರ ಗೌರವ. ಲಕ್ಷಾಂತರ ಭಕ್ತರ ಮನೆಗಳಲ್ಲಿ ಶ್ರೀ ಮಂಜುನಾಥ ಸ್ವಾಮಿ ಫೋಟೋ ಜೊತೆಗೆ, ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆ ಅವರ ಫೋಟೋ ಕೂಡಾ ಇರುತ್ತದೆ. ಭಕ್ತರು ಶ್ರದ್ಧೆಯಿಂದ ವಿರೇಂದ್ರ ಹೆಗ್ಗಡೆ ಅವರ ಫೋಟೋಗು ಪೂಜೆ ಮಾಡುತ್ತಾರೆ. ಅಷ್ಟರಮಟ್ಟಿಗೆ ಅವರ ಕಾರ್ಯದಿಂದ ಭಕ್ತರ ಮನಸ್ಸಿನಲ್ಲಿ ಸ್ಥಾನ ಪಡೆದಿದ್ದಾರೆ.

ಕಾನೂನು ಓದಬೇಕೆಂದಿದ್ದ ಅವರಿಗೆ ಅದು ಸಾಧ್ಯವಾಗಲಿಲ್ಲ. ಏಕೆಂದರೆ ಧರ್ಮಾಧಿಕಾರಿ ರತ್ನವರ್ಮ ಹೆಗ್ಗಡೆ ಅವರು ಅನಾರೋಗ್ಯದಿಂದ ನಿಧನ ಹೊಂದಿದರು. ನಂತರ ವಿರೇಂದ್ರ ಹೆಗ್ಗಡೆಯವರು ಅಕ್ಟೋಬರ್ 24 ರಂದು ತಮ್ಮ 20ನೇ ವಯಸ್ಸಿನಲ್ಲಿಯೇ ಧರ್ಮಸ್ಥಳದ 21ನೇ ಧರ್ಮಾಧಿಕಾರಿಯಾಗಿ ಪಟ್ಟಾಭಿಷಿಕ್ತರಾದರು. ಡಾ ವೀರೇಂದ್ರ ಹೆಗ್ಗಡೆಯವರು ಕರ್ನಾಟಕದ ಕರಾವಳಿ ಪ್ರದೇಶದಲ್ಲಿ 600 ಹಳ್ಳಿಗಳು ಮತ್ತು ಆರು ಪಟ್ಟಣಗಳನ್ನು ಒಳಗೊಂಡ ಗ್ರಾಮೀಣಾಭಿವೃದ್ಧಿ ಯೋಜನೆಯನ್ನು ಪರಿಚಯಿಸಿದರು.  <a href=https://youtube.com/embed/EK4PfE1EQqk?autoplay=1&mute=1><img src=https://img.youtube.com/vi/EK4PfE1EQqk/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಈಗ ಐದು ದಶಕಗಳಿಂದ, ಅವರು ಗ್ರಾಮೀಣ ಅಭಿವೃದ್ಧಿ ಮತ್ತು ಸ್ವಯಂ ಉದ್ಯೋಗದ ಉತ್ತೇಜನಕ್ಕಾಗಿ ವಿವಿಧ ಪರಿವರ್ತನಾ ಯೋಜನೆಗಳನ್ನು ಹೆಗ್ಗಡೆಯವರು ಮುನ್ನಡೆಸಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವದ್ಧಿ ಯೋಜನೆ ಇದು ಕರ್ನಾಟಕ ರಾಜ್ಯದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಸ್ವಯಂ ಉದ್ಯೋಗಕ್ಕಾಗಿ ಒಂದು ಉಪಕ್ರಮವಾಗಿದೆ. ಈ ಯೋಜನೆಯು ಈಗ 49 ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡಿದೆ.

ಅವರು 1972 ರಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತಿ ವರ್ಷ ಉಚಿತ ಸಾಮೂಹಿಕ ವಿವಾಹವನ್ನು ಸಹ ನಡೆಸುತ್ತಾರೆ. ಏಪ್ರಿಲ್ 2004 ರಿಂದ, ಈ ಯೋಜನೆಯಡಿಯಲ್ಲಿ ಸುಮಾರು 10,000 ಜೋಡಿಗಳು ಮದುವೆಯಾಗಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಅಲ್ಲಿನ ಜನ ಇವರನ್ನು ನಡೆದಾಡುವ ದೇವರು ಎಂದೇ ನಂಬಿದ್ದಾರೆ ಎಂದು ಅವರ ಮಗಳು ಆಗಾಗ ಹೇಳುತ್ತಿರುತ್ತಾಳೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.