ದುಬೈನ ಆಕಾಶದಲ್ಲಿ ಹಾರಾಡಿದ ಕನ್ನಡದ ಹಿರಿಯ ನಟಿ ಶ್ರುತಿ
Nov 13, 2024, 07:45 IST
ಎದೆ ಗಟ್ಟಿ ಇದ್ದವರಿಗೆ ಮಾತ್ರ ನಡೆಯುವ ಕ್ರೀಡೆ ಎನ್ನಿಸಿಕೊಂಡಿರುವ ಕೆಲವು ಕ್ರೀಡೆಗಳಲ್ಲಿ ಒಂದು ಸ್ಕೈ ಡೈವಿಂಗ್. ಕನ್ನಡದಲ್ಲಿ ಇದನ್ನು ಧುಮುಕುಕೊಡೆ ಎಂದೂ ಹೇಳಲಾಗುತ್ತದೆಯಾದರೂ, ಹಾಗೆ ಹೇಳಿದರೆ ಯಾರಿಗೂ ಅರ್ಥವಾಗದೇ ಹೋದೀತು. ಸ್ಕೈ ಡೈವಿಂಗ್ ಅನ್ನು ಹೆಚ್ಚಾಗಿ ಬಂಗೀ ಜಂಪಿಂಗ್ ಮತ್ತು ಪ್ಯಾರಾ-ಗ್ಲೈಡಿಂಗ್‌ನಂತಹ ಕ್ರೀಡೆಗಳೊಂದಿಗೆ ಹೋಲಿಕೆ ಮಾಡಲಾಗುತ್ತದೆ.
ಇವುಗಳನ್ನು ಸಾಮಾನ್ಯವಾಗಿ ವೈಮಾನಿಕ ವಿಪರೀತ ಕ್ರೀಡೆಗಳೆಂದು ವಿವರಿಸಲಾಗುತ್ತದೆ. ಈ ಕ್ರೀಡೆಯನ್ನು ನುರಿತರ ಜೊತೆಯೇ ಆಡಬೇಕು. ಸ್ವಲ್ಪ ಎಡವಟ್ಟಾದರೂ ಅಷ್ಟೇ. ಸೀದಾ ಮೇಲೆ ಹೋಗುವುದೇ. ಇದೇ ಕಾರಣಕ್ಕೆ ಧೈರ್ಯ ಇದ್ದವರು ಮಾತ್ರ ಇದನ್ನು ಆಡಬೇಕು. ಇದೀಗ ನಟಿ ಶ್ರುತಿ ಕೃಷ್ಣಾ ಅವರು ಈ ಸಾಹಸಮಯ ರೋಮಾಂಚಕ ಕ್ರೀಡೆಯನ್ನು ಆಡಿದ್ದು, ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
<a href=https://youtube.com/embed/_EeVrbwfHA4?autoplay=1&mute=1><img src=https://img.youtube.com/vi/_EeVrbwfHA4/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಹೌದು. ಹುಟ್ಟುಹಬ್ಬದ ತಿಂಗಳಿನಲ್ಲಿಯೇ ನಾನು ಇಂಥ ಒಂದು ರೋಮಾಂಚನಕಾರಿಯಾಗಿ ಆಟ ಆಡಿರುವುದಕ್ಕೆ ಖುಷಿಯಾಗುತ್ತದೆ ಎಂದು ನಟಿ ಹೇಳಿಕೊಂಡಿದ್ದಾರೆ. ಅಂದಹಾಗೆ ಶ್ರುತಿ ಅವರು ಈ ಸೆಪ್ಟೆಂಬರ್ 18ರಂದು 49 ವರ್ಷಗಳನ್ನು ಪೂರೈಸಿದ್ದಾರೆ. ಈ ಸಂದರ್ಭದಲ್ಲಿ, ಸಾಹಸಮಯ ಕ್ರೀಡೆಯಲ್ಲಿ ಪಾಲ್ಗೊಂಡು ಅದರ ರೋಮಾಂಚಕಾರಿ ಅನುಭವದ ಬುತ್ತಿಯನ್ನು ತೆರೆದಿಟ್ಟಿದ್ದಾರೆ. ಈ ವಿಡಿಯೋದಲ್ಲಿ ಕ್ರೀಡೆಯ ಸಂಪೂರ್ಣ ಆನಂದವನ್ನು ನಾವು ಸವಿಯಬಹುದಾಗಿದೆ.
ಅಂದಹಾಗೆ, ಶ್ರುತಿ, ನಟಿ ಹಾಗೂ ರಾಜಕಾರಣಿ ಮಾತ್ರವಲ್ಲದೇ ಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಒಂದಾದ ಮೇಲೊಂದರಂತೆ ಅಳುವ ದೃಶ್ಯಗಳಲ್ಲಿಯೇ ನಟಿಸುತ್ತಾ, ಎಲ್ಲರನ್ನೂ ಅಳಿಸುತ್ತಿದ್ದ ಶ್ರುತಿ ಅವರು ಕನ್ನಡ ಚಿತ್ರರಂಗ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳ ಚಿತ್ರರಂಗದಲ್ಲಿಯೂ ಸಕತ್ ಫೇಮಸ್ ಆದವರು.1990 ರ ದಶಕದಲ್ಲಿ ಕನ್ನಡ ಚಿತ್ರರಂಗದ ಪ್ರಮುಖ ನಟಿಯರಲ್ಲಿ ಒಬ್ಬರಾಗಿದ್ದ ಶ್ರುತಿ ಇಂದಿಗೂ ನಟನೆಯನ್ನು ಮುಂದುವರೆಸಿದ್ದಾರೆ.
ತಮ್ಮ 25 ವರ್ಷಗಳ ವೃತ್ತಿಜೀವನದಲ್ಲಿ ಮೂರು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದ ನಟಿ, ಲಾಕ್ ಡೌನ್ ಸಮಯದಲ್ಲಿ ಶೂಟಿಂಗ್ ಎಲ್ಲವೂ ಸ್ಟಾಪ್ ಆಗಿದ್ದ ಸಂದರ್ಭದಲ್ಲಿ ತಮ್ಮ ಮಗಳ ಜೊತೆ ಮೈಸೂರಿನ ಹತ್ತಿರ ಇರುವ ತಮ್ಮ 25 ಎಕರೆ ತೋಟದಲ್ಲಿ ವಾಸವಾಗಿದ್ದರು.
ತಮ್ಮ ತೋಟದಲ್ಲಿ ಪರಿಸರ ಸ್ನೇಹಿ ಮನೆಯನ್ನು ಸಿಮೆಂಟ್ ಬಳಸದೆ, ಕೇವಲ ಕಲ್ಲು ಮಣ್ಣಿನಿಂದ ಸುಂದರವಾದ ಕಟ್ಟಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.