ಪ್ರೀತಿಯ ಪತ್ನಿ ಫೋಟೋ ಶೇರ್ ಮಾಡಿ ಸವಿನೆನಪು ಹಂಚಿಕೊಂಡ ವಿಜಯ ರಾಘವೇಂದ್ರ, ನೆಟ್ಟಿಗರಿಂದ ಕಂಬನಿ

 

ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಯೊಬ್ಬರು ನಾನು ನೋಡಿದ ಜೋಡಿಗಳಲ್ಲಿ ಇವರದು ತುಂಬಾ ಅದ್ಭುತವಾದ ಪ್ರೀತಿಯ ಹೊಂದಾಣಿಕೆಯ ಸೂಪರ್ ಜೋಡಿ. ಆದರೆ ಆ ದೇವರಿಗೂ ಸಹಿಸಲಿಕ್ಕೆ ಆಗಲಿಲ್ಲವೇನು? ಆದರೆ ಪ್ರೀತಿಗೆ ಸಾವಿಲ್ಲ. ಎಂದು ಕಾಮೆಂಟ್ ಹಾಕಿದ್ದಾರೆ.

ನಟ ವಿಜಯರಾಘವೇಂದ್ರ 20 ಏಪ್ರಿಲ್ 2024ರಂದು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ತಮ್ಮ ಹಾಗೂ ಸ್ಪಂದನಾರ  ಎಂಗೇಜ್‌ಮೆಂಟ್ ಸವಿನೆನಪನ್ನು ಹಂಚಿಕೊಂಡಿದ್ದಾರೆ. ಬದುಕು ನಿಶ್ಚಯಿಸಿದ ನಿಶ್ಚಿತಾರ್ಥ ಎಂಬ ಟ್ಯಾಗ್‌ಲೈನ್ ಕೊಟ್ಟು ಸ್ಪಂದನಾ ಜೊತೆಯಿದ್ದ, ತಮ್ಮ 2007ರ ಎಂಗೇಜ್‌ಮೆಂಟ್ ಫೋಟೋವನ್ನು ಶೇರ್ ಮಾಡಿದ್ದಾರೆ. ಅದಕ್ಕೆ ಸಹಜವಾಗಿಯೇ ಬಹಳಷ್ಟು ಕಾಮೆಂಟ್‌ಗಳು ಹರಿದುಬಂದಿವೆ. 


ಸ್ಯಾಂಡಲ್‌ವುಡ್ ನಟ ವಿಜಯರಾಘವೇಂದ್ರರ ಪತ್ನಿ ಸ್ಪಂದನಾ ವಿಜಯರಾಘವೇಂದ್ರ ಅವರು ಕಳೆದ ವರ್ಷ ಆಗಷ್ಟ್ 7 ರಂದು ಥೈಲ್ಯಾಂಡ್‌ನ ಬ್ಯಾಂಕಾಕ್‌ ನಲ್ಲಿ ಹೃದಯ ಸ್ಥಂಬನದಿಂದ ನಿಧನರಾದರು. ಸ್ಯಾಂಡಲ್‌ವುಡ್ ಸೇರಿದಂತೆ, ಇಡೀ ಕನ್ನಡನಾಡು ಅವರ ಸಾವಿಗೆ ಶೋಕತಪ್ತವಾಗಿ ಮರುಗಿತು. ಸ್ಪಂದನಾರ ಪತಿ, ನಟ ವಿಜಯರಾಘವೇಂದ್ರ ಅವರಂತೂ ಅಕ್ಷರಶಃ ಕುಸಿದುಬಿದ್ದಿದ್ದರು. 


ಈಗಲೂ ಅವರು ತಮ್ಮ ಪ್ರೀತಿಯ ಪತ್ನಿಯ ಸಾವಿಗಾಗಿ ಕೊರಗುತ್ತಲೇ ಇದ್ದಾರೆ ಎನ್ನಲಾಗುತ್ತಿದೆ.ಇಂದು, 17 ವರ್ಷಗಳ ಹಿಂದಿನ, ಇದೇ ದಿನದಂದು ನಡೆದಿದ್ದ ತಮ್ಮಿಬ್ಬರ ಎಂಗೇಜ್‌ಮೆಂಟ್ ಫೋಟೋವನ್ನು ಶೇರ್ ಮಾಡಿಕೊಂಡು ಸವಿನೆನಪು ಹಂಚಿಕೊಂಡಿದ್ದಾರೆ. ಅದನ್ನು ನೋಡಿ ಹಲವರು ಕಣ್ಣೀರಾಗಿದ್ದಾರೆ. 

ಬಹಳಷ್ಟು ಜನರು ಅವರ ಕುಟುಂಬದ ದುಃಖದಲ್ಲಿ ತಾವೂ ಭಾಗಿಯಾಗುವುದಾಗಿ ಹೇಳಿಕೊಂಡಿದ್ದಾರೆ. ಕೆಲವರು, ದೇವರು ತಮಗೆ ದುಃಖ ಭರಿಸುವ ಶಕ್ತಿ ದಯಪಾಲಿಸಲಿ ಎಂದು ಬೇಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿಭಿನ್ನ ಕಾಮೆಂಟ್‌ಗಳು ಹರಿದುಬಂದಿವೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.