ಹು ಚ್ಚರು ಹು ಚ್ಚರಿಗಾಗಿ ಮಾಡಿರೋ ಶೋ, ಬಿಗ್ ಬಾಸ್ ಗೆ ಸರಿಯಾಗಿ ಉಗಿದ ವಿಜಯಲಕ್ಷ್ಮಿ

 
 ಬಿಗ್‌ ಬ್ರದರ್‌' ಶೋನಿಂದ ಪ್ರೇರಣೆಗೊಂಡು ಶುರುವಾದ 'ಬಿಗ್‌ಬಾಸ್' ಶೋ ಭಾರತದಲ್ಲಿ ಸಕ್ಸಸ್ ಕಂಡಿದೆ. ಮೊದಲಿಗೆ ಹಿಂದಿಯಲ್ಲಿ ಆರಂಭವಾದ ಶೋ ಮುಂದೆ ವಿವಿಧ ಭಾಷೆಗಳಲ್ಲಿ ವೀಕ್ಷಕರನ್ನು ರಂಜಿಸುತ್ತಾ ಬರ್ತಿದೆ. ನಿಜ ಹೇಳಬೇಕು ಅಂದರೆ ಬಿಗ್‌ಬಾಸ್ ಶೋ ನಡೆಸುವ ರೀತಿ, ಎಲಿಮಿನೇಷ್, ನಾಮಿನೇಷನ್, ಸ್ಪರ್ಧಿಗಳ ಆಯ್ಕೆ, ವಿಜೇತರನ್ನು ಘೋಷಿಸುವುದು ಎಲ್ಲವೂ ಸ್ಟ್ರಿಪ್ಟೆಡ್ ಎನ್ನುವ ವಾದ ಕೆಲವರದ್ದು.
ಈ ಹಿಂದೆ ಕೂಡ ಕೆಲವರು ಬಿಗ್‌ಬಾಸ್' ಶೋ ಬಗ್ಗೆ ಟೀಕೆ ಮಾಡಿದ್ದಾರೆ. ಈ ಶೋನಿಂದ ಸಮಾಜಕ್ಕೆ ಏನು ಸಂದೇಶ ಇದೆ ಎನ್ನುವ ಬಗ್ಗೆಯೂ ಚರ್ಚೆಗಳು ನಡೆದಿದೆ. ಕೆಲ ಸೆಲೆಬ್ರೆಟಿಗಳು ಬಿಗ್‌ಬಾಸ್ ಮನೆ ಒಳಕ್ಕೆ ಹೋಗಲು ಹಿಂದೇಟು ಹಾಕುವುದು ಇದೆ. ಇದು ಹುಚ್ಚರ ಕಾರ್ಯಕ್ರಮ ಎಂದು ಕೆಲವರು ಹೇಳುತ್ತಾರೆ. ಬಿಗ್‌ಬಾಸ್ ಶೋ ಬಗೆಗಿನ ಆರೋಪಗಳೆಲ್ಲಾ ನಿಜ ಎಂದು ಮಾಜಿ ಬಿಗ್‌ಬಾಸ್ ಸ್ಪರ್ಧಿ ಹೇಳಿದ್ದಾರೆ. <a href=https://youtube.com/embed/ZAsttB8HuvA?autoplay=1&mute=1><img src=https://img.youtube.com/vi/ZAsttB8HuvA/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ವಾಸ್ತವವಾಗಿ ಬಿಗ್ ಬಾಸ್‌ಗೆ ಹೋಗುವವರ ಜೊತೆ ಮೊದಲೇ ಒಪ್ಪಂದ ಆಗಿರುತ್ತದೆ. ಮನೆಯೊಳಗೆ ಅಹಿತಕರ ಘಟನೆ ನಡೆಯದಂತೆ ವರ್ತಿಸಬೇಕು ಎಂದು ಹೇಳಿರುತ್ತಾರೆ. ಹಾಗಾಗಿ ಕೆಲವರು ಶೋನಿಂದ ಹೊರ ಬಂದಮೇಲೂ ಅಲ್ಲಿನ ಅರಾಜಕತೆ ಬಗ್ಗೆ ಮಾತನಾಡಲ್ಲ. ಹಾಗಾಗಿ ಹಲವಾರು ಜನ ಈ ಶೋ ಅನ್ನು ತೆಗಳಿದ್ದಾರೆ. ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರು ಕೂಡ ಇದು ಹುಚ್ಚರ ಶೋ ಎಂದು ಹೇಳಿದ್ದಾರೆ.
ಜನ ಈ ಬಿಗ್‌ಬಾಸ್‌ಗೆ ಸರಿಯಾಗಿ ಕ್ಲಾಸ್ ತಗೊಳ್ತಿದ್ದಾರೆ. ಇದೊಂಥರ ಹುಚ್ಚರ ಸಂತೆ ಅಂತ ಒಬ್ಬ ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡಿದರೆ, ಮತ್ತೊಬ್ರು ಬಿಗ್‌ಬಾಸ್‌ನಲ್ಲಿ ಒಳ್ಳೆಯವರಿಗೆ ಅವಕಾಶ ಕಡಿಮೆ ಅನ್ಸುತ್ತೆ. ಒಬ್ಬ ಹೆಂಡತಿ ಒಬ್ಬ ಗಂಡ ಇರುವಂಥವರೇ ಇಲ್ವಾ ಬಿಗ್‌ ಬಾಸ್‌ನಲ್ಲಿ? ಅಂತ ಕೇಳಿದ್ದಾರೆ. ಇಂಥಾ ಮನೆಹಾಳು ಜನರನ್ನಿಟ್ಟು ಬಿಗ್‌ಬಾಸ್‌ ಶೋ ಮಾಡ್ತೀರಲ್ವಾ, ಸಮಾಜಕ್ಕೆ ಇವರಿಂದ ಏನು ಸಂದೇಶ ರವಾನೆಯಾಗುತ್ತೆ? ಅಂತ ಮಗದೊಬ್ಬರು ತರಾಟೆಗೆ ತೆಗೆದುಕೊಂಡಿದ್ದಾರೆ.
 ಒಬ್ಬೊಬ್ಬರದು ಒಂದೊಂದು ದಂತಕಥೆ, ಕೇಳಿ ಕಿವಿ ಪಾವನವಾಯ್ತು ಎಂದು ವೀಕ್ಷಕರೊಬ್ಬರು ವ್ಯಂಗ್ಯವಾಗಿ ಕಮೆಂಟ್‌ ಮಾಡಿದ್ದಾರೆ. ಮೂರೂ ಬಿಟ್ಟೋರು, ಬಿಗ್‌ಬಾಸ್‌ಗೆ ದೊಡ್ಡೋರು,ಒಬ್ಬೊಬ್ಬರೂ ಒಂದೊಂದು ಮುತ್ತುಗಳು ಅನ್ನೋ ವ್ಯಂಗ್ಯದ ಚಾಟಿಯನ್ನೂ ವೀಕ್ಷಕರು ಬೀಸಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.