ಒಮ್ಮೆಲೇ ರೊಚ್ಚಿಗೆದ್ದ ವಿನಯ್, ಸಂಗೀತ ಮುಖಕ್ಕೆ ಸಗಣಿ ನೀರು

 

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ 10 ಕಾರ್ಯಕ್ರಮದಲ್ಲಿ 2ನೇ ವಾರವೇ ಸ್ಪರ್ಧಿಗಳಿಗೆ ಕಠಿಣವಾಗಿ ಪರಿಣಮಿಸಿದೆ. ಬಿಗ್ ಬಾಸ್‌ ಸ್ಪರ್ಧಿಗಳನ್ನು ಎರಡು ತಂಡಗಳಾಗಿ ವಿಭಜಿಸಲಾಗಿದೆ. ಮೊದಲ ಟಾಸ್ಕ್‌ನಲ್ಲಿ ಕಾರ್ತಿಕ್ ಮಹೇಶ್ ನೇತೃತ್ವದ ಮಾಣಿಕ್ಯ ತಂಡ ಸೋಲು ಅನುಭವಿಸಿತು. 

ಪರಿಣಾಮ, ಒಬ್ಬರು ಶಿಕ್ಷೆ ಅನುಭವಿಸಬೇಕಿತ್ತು. ಶಿಕ್ಷೆಯಾಗಿ ಸಂಗೀತಾ ಶೃಂಗೇರಿ ಸಗಣಿ ಸ್ನಾನ ಮಾಡಬೇಕಿತ್ತು. ತಪ್ಪು ಮಾಡದೇ ಇದ್ದರೂ, ಶಿಕ್ಷೆ ಪಡೆದ ಕಾರಣಕ್ಕೆ ಸಂಗೀತಾ ಶೃಂಗೇರಿ ಬೇಸರಗೊಂಡರು. ಇದು ಅನ್‌ಫೇರ್‌. ಇಲ್ಲಿರೋಕೆ ನನಗೆ ಇಷ್ಟವಾಗುತ್ತಿಲ್ಲ ಎಂದು ತಮ್ಮಲ್ಲಿನ ಅಸಮಾಧಾನವನ್ನ ಸಂಗೀತಾ ಶೃಂಗೇರಿ ಹೊರಹಾಕಿದರು.ಈ ವಾರದ ಟಾಸ್ಕ್‌ಗಳಿಗೆ ತಲಾ 8 ಸದಸ್ಯರಿರುವ ಎರಡು ತಂಡಗಳ ಅಗತ್ಯವಿತ್ತು. 

ಅದಕ್ಕೂ ಮುನ್ನ, ಎಲ್ಲರೂ ಈ ತಂಡಗಳಿಗೆ ನಾಯಕರನ್ನು ಒಮ್ಮತದಿಂದ ಆರಿಸಬೇಕಿತ್ತು. ಎಲ್ಲರೂ ವಿನಯ್ ಗೌಡ ಹಾಗೂ ಕಾರ್ತಿಕ್ ಮಹೇಶ್ ಹೆಸರುಗಳನ್ನ ಹೇಳಿದರು. ನಾಮಿನೇಷನ್‌ನಿಂದ ಸೇವ್‌ ಆಗಲು ನಾಮಿನೇಟ್‌ ಆದವರ ಪರ, ಇತರರು ಟಾಸ್ಕ್‌ ಎದುರಿಸುವ ಚಾಲೆಂಜನ್ನು ಬಿಗ್‌ ಬಾಸ್‌ ನೀಡಿದ್ದರು. ಈ ವೇಳೆ ತುಕಾಲಿ ಸಂತೋಷ್‌ ಪರ ಆಡಿದ್ದ ರಕ್ಷಕ್‌ ಆಡಿದ್ದರು. 

ತನ್ನ ಪರ ಆಡುವಂತೆ ವಿನಯ್‌ ಅವರಿಗೆ ಭಾಗ್ಯಾ ಕೇಳಿದಾಗ ಆತ ನಿರಾಕರಿಸುತ್ತಾರೆ. ನಂತರ ಭಾಗ್ಯಾ ಪರ ಆಡಲು ಸಿರಿ ಒಪ್ಪುತ್ತಾರೆ. ರಕ್ಷಕ್‌ ಚಾಲೆಂಜ್‌ ಹಾಳು ಮಾಡಲು ಪ್ರಯತ್ನಿಸಿದ ಇಶಾನಿ ಹಾಗೂ ತುಕಾಲಿ ಸಂತೋಷ್‌ ನಡುವೆ ದೊಡ್ಡ ಯುದ್ಧವೇ ನಡೆದಿತ್ತು.
 ಮತ್ತೊಂದೆಡೆ, ತನಗಾಗಿ ಆಡಿದ್ದ ಕಾರ್ತಿಕ್‌ಗೆ ಸಂಗೀತಾ ಎಣ್ಣೆ ಮಸಾಜ್‌ ಮಾಡಿದ್ದರು. ದಿನ ಕಳೆಯುತ್ತಿದ್ದಂತೆ ಸ್ಪರ್ಧಿಗಳ ನಡುವೆ ಸಣ್ಣ ಸಣ್ಣ ವಿಚಾರಕ್ಕೂ ಜಗಳ ನಡೆಯುತ್ತಿದೆ. 
 
ತಮ್ಮನ್ನು ನಾಮಿನೇಶನ್‌ ಮಾಡಿದ್ದಕ್ಕೂ ಕೆಲವರು ಸಹ ಸ್ಪರ್ಧಿಗಳ ನಡುವೆ ಮುನಿಸು ಉಂಟಾಗಿದೆ.
ಇದೀಗ ವಾಹಿನಿಯು ಮತ್ತೊಂದು ಪ್ರೋಮೋ ಹಂಚಿಕೊಂಡಿದ್ದು ಇದರಲ್ಲಿ ಇತರ ಸ್ಪರ್ಧಿಗಳು ಸಂಗೀತಾಗೆ ಸಗಣಿ ನೀರು ಸುರಿಯುವ ದೃಶ್ಯವಿದೆ. ಜೊತೆಗೆ ಸ್ಪರ್ಧಿಗಳು ಜಗಳ ಮಾಡುತ್ತಿರುವುದನ್ನು ಗಮನಿಸಬಹುದು. ದೊಡ್ಮನೆ ಎರಡು ಹೋಳಾಗಿದೆ. ಸ್ವಿಮ್ಮಿಂಗ್‌ ಪೂಲ್‌ ಬಳಿ ಸ್ಪರ್ಧಿಗಳು ಸಹ ಸ್ಪರ್ಧಿಗಳ ಬಟ್ಟೆಗಳನ್ನು ನೀರಿನಲ್ಲಿ ಎಸೆದಿದ್ದಾರೆ. <a href=https://youtube.com/embed/N-m3RShlZUY?autoplay=1&mute=1><img src=https://img.youtube.com/vi/N-m3RShlZUY/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

 ವಿನಯ್‌ ಹಾಗೂ ಪ್ರತಾಪ್‌ ನಡುವೆ ಮತ್ತೆ ಜಗಳ ಶುರು ಆಗಿದೆ. ಪ್ರತಾಪ್‌ ಪರ ಸಂಗೀತಾ ನಿಂತಿದ್ದಾರೆ. ಪ್ರತಾಪ್‌ ಅವರನ್ನು ಎದುರಿಸುತ್ತಿದ್ದೀರ? ನಮ್ಮನ್ನು ಎದುರಿಸಿ ನೋಡೋಣ ಎಂದು ಸಂಗೀತಾ ವಿನಯ್‌ಗೆ ಆವಾಜ್‌ ಹಾಕುತ್ತಾರೆ. ಹಾಗೇ ಕಾರ್ತಿಕ್‌, ರಕ್ಷಕ್‌ ನಡುವೆ ಕೂಡಾ ಮಾತಿನ ಚಕಮಕಿ ನಡೆಯುತ್ತಿದೆ. ಈಗಾಗಲೇ ವಿನಯ್ ಗೌಡ ಮತ್ತು ಡ್ರೋನ್ ಪ್ರತಾಪ್ ನಡುವೆ ಜಗಳ ನಡೆದಿತ್ತು ಆದರೆ ಇದೀಗ ವಿನಯ್ ಸಂಗೀತಾ ನಡುವೆಯೂ ಕೂಡ ವೈ ಮನಸ್ಸು ಮೂಡಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.