RCB ಕಪ್ಪ್ ಗೆದ್ದರು ವಿರಾಟ್ ಕೊಹ್ಲಿ ಗೆ ನಿಮ್ಮದಿ ಇಲ್ಲ, ಬೆಂಗಳೂರಿನ ಅವಸ್ಥೆ ನೋಡಿ ಬಿಕ್ಕಿಬಿಕ್ಕಿ ಅತ್ತ ಕಿಂಗ್ ಕೊಹ್ಲಿ

 
ಕಗಗ೭
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದಲ್ಲಿ ಹಲವು ಜನರು ಮೃತಪಟ್ಟು ಅನೇಕರು ಗಾಯಗೊಂಡಿದ್ದಾರೆ. ಈ ದುರಂತದ ಬಗ್ಗೆ ಆರ್‌ಸಿಬಿ ತಂಡ ಸಂತಾಪ ಸೂಚಿಸಿದ್ದು, ವಿರಾಟ್ ಕೊಹ್ಲಿ ಆರ್‌ಸಿಬಿಯ ಸಂತಾಪ ಸಂದೇಶವನ್ನು ಮರುಹಂಚಿಕೊಂಡಿದ್ದಾರೆ. ಕೆಲವರು ಕೊಹ್ಲಿ ಅವರ ಪ್ರತಿಕ್ರಿಯೆಗೆ ಅಸಮಾಧಾನ ವ್ಯಕ್ತಪಡಿಸಿದರೆ, ಇನ್ನು ಕೆಲವರು ಅವರ ಕೆಲಸವನ್ನು ಸಮರ್ಥಿಸಿದ್ದಾರೆ.
ಹೌದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ  ಹೊರಭಾಗದಲ್ಲಿ ನಡೆದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟು 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬರೋದನ್ನು ನೋಡಲು 2-3 ಲಕ್ಷ ಅಭಿಮಾನಿಗಳು ಸೇರಿದ್ದು ದುರಂತಕ್ಕೆ ಕಾರಣ ಎಂದು ಹೇಳಲಾಗಿದೆ. ಊಹೆಗೂ ಮೀರಿದ ಜನರು ಬಂದಿದ್ದರಿಂದ ಸಾಕಷ್ಟು ಹಾನಿ ಉಂಟಾಯಿತು. <a href=https://youtube.com/embed/2tmbHFCmyg0?autoplay=1&mute=1><img src=https://img.youtube.com/vi/2tmbHFCmyg0/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
 ಘಟನೆ ನಡೆಯುವ ವೇಳೆ ವಿರಾಟ್ ಕೊಹ್ಲಿ ಕೂಡ ಇದ್ದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯವನ್ನು ಅವರು ಹಂಚಿಕೊಂಡಿದ್ದಾರೆ.ಜೂನ್ 3ರಂದು ಅಹಮದಾಬಾದ್​ನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಆರ್​ಸಿಬಿ ಕಪ್ ಎತ್ತಿತು. 18 ವರ್ಷಗಳಲ್ಲಿ ಚೊಚ್ಚಲ ಬಾರಿ ಕಪ್ ಎತ್ತಿದ ಸಾಧನೆ ತಂಡ ಮಾಡಿದೆ. ಜೂನ್ 4ರಂದು ಬೆಳಿಗ್ಗೆ ಅಹಮದಾಬಾದ್​ನಿಂದ ಹೊರಟ ತಂಡ ಬೆಂಗಳೂರಿಗೆ ಆಗಮಿಸಿತು. ಮೊದಲು ಹೋಟೆಲ್​ಗೆ ತೆರಳಿ ಆ ಬಳಿಕ ವಿಧಾನಸೌಧಕ್ಕೆ  ತಂಡ ಬಂತು. 
ಅಲ್ಲಿ ಆಗಲೇ ಜನ ಸೇರಿದ್ದರು. ಆ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್​ಸಿಬಿ ತಂಡ ಬರುತ್ತದೆ ಎಂಬ ಮಾಹಿತಿ ತಿಳಿದ ಜನರು ತಳ್ಳಾಡಿಕೊಂಡರು. ಸ್ಟೇಡಿಯಂ ಒಳಗೆ ಹೋಗುವ ಭರದಲ್ಲಿ ಕಾಲ್ತುಳಿತ ಉಂಟಾಯಿತು.ಇಂದು ಮಧ್ಯಾಹ್ನ ತಂಡದ ಆಗಮನದ ನೀರಿಕ್ಷೆಯಲ್ಲಿ ಬೆಂಗಳೂರಿನವರು ಇದ್ದರು. ಆದರೆ, ಈ ವೇಳೆ ಸಂಭವಿಸಿದ ದುರದೃಷ್ಟಕರ ಘಟನೆಯಿಂದ ನಾವು ದುಃಖಿತರಾಗಿದ್ದೇವೆ. ಎಲ್ಲರ ಸುರಕ್ಷತೆ ನಮಗೆ ಅತ್ಯಂತ ಮುಖ್ಯ ವಿಷಯ ಆಗಿದೆ. ದುರಂತದಿಂದ ಆದ ಜೀವ ಹಾನಿಗೆ ಆರ್​ಸಿಬಿ ಶೋಕ ವ್ಯಕ್ತಪಡಿಸುತ್ತಿದೆ. ಸಂತ್ರಸ್ತ ಕುಟುಂಬಕ್ಕೆ ನಮ್ಮ ಸಂತಾಪ ಎಂದು ಪೋಸ್ಟ್​ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.