ಸಾಹಸ ಸಿಂಹ ವಿಷ್ಣುವರ್ಧನ್ ಆತ್ಮೀಯ ಗೆಳೆಯ ವಿಧಿ ವಶ, ಇಡೀ ಚಿತ್ರರಂಗವೇ ದುಃಖದಲ್ಲಿ

 

ಸಾವು ಯಾವಾಗ ಯಾರ ಮನೆ ಬಾಗಿಲಿಗೆ ಬರುತ್ತದೆ ಎಂದು ಯಾರೂ ಕೂಡ ತಿಳಿದವರಿಲ್ಲ. ಹೌದು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ನಿರ್ದೇಶಕ, ಸಂಭಾಷಣಕಾರ, ಗೀತ ಸಾಹಿತಿ ವಿ.ಆರ್​. ಭಾಸ್ಕರ ಅವರು ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣದಿಂದ ಅವರು ಮೈಸೂರಿನಲ್ಲಿ ವಿಧಿವಶರಾಗಿದ್ದಾರೆ. ಚಿತ್ರರಂಗದಲ್ಲಿ ಹಲವು ವರ್ಷಗಳ ಅನುಭವ ಹೊಂದಿದ್ದ ಭಾಸ್ಕರ್​ ಅವರು ಡಾ. ವಿಷ್ಣುವರ್ಧನ್​ ಅವರ ಜೊತೆ ಒಡನಾಟ ಹೊಂದಿದ್ದರು. 

ನಟನಾಗಿಯೂ ಅವರು ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ವಿ.ಆರ್​. ಭಾಸ್ಕರ್​ ಅವರ ಜೀವನದಲ್ಲಿ ಕಷ್ಟ ಆವರಿಸಿತ್ತು. ಕೆಲವೇ ದಿನಗಳ ಹಿಂದೆ ಪತ್ನಿ ಮತ್ತು ಮಗನನ್ನು ಕೂಡ ಅವರು ಅನಾರೋಗ್ಯದಿಂದ ಕಳೆದುಕೊಂಡಿದ್ದರು. ಮೈಸೂರಿನಲ್ಲೇ ವಿ.ಆರ್​. ಭಾಸ್ಕರ್​ ಅಂತ್ಯಕ್ರಿಯೆ ನಡೆಯಲಿದೆ.ವಿ.ಆರ್​. ಭಾಸ್ಕರ್ ಅವರು ಮೂಲತಃ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನವರು. ಚಿಕ್ಕ ವಯಸ್ಸಿನಿಂದಲೂ ಸಿನಿಮಾ ಬಗ್ಗೆ ಅವರು ಆಸಕ್ತಿ ಹೊಂದಿದ್ದರು. 

ಮೈಸೂರಿಗೆ ಬಂದ ಬಳಿಕ ಸಿನಿಮಾದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲು ನಿರ್ಧರಿಸಿದರು. ಆದರೆ ಆರಂಭದ ದಿನಗಳಲ್ಲಿ ಕುಟುಂಬದಿಂದ ಭಾಸ್ಕರ್​ ಅವರಿಗೆ ಉತ್ತೇಜನ ಸಿಗಲಿಲ್ಲ. ನಂತರ ಹಠ ಹಿಡಿದು ಫಿಲ್ಮ್​ ಇನ್ಸ್​ಟಿಟ್ಯೂಟ್​ಗೆ ಸೇರಿಕೊಂಡು ಸಿನಿಮಾದ ಪಾಠಗಳನ್ನು ಕಲಿತರು.ರುದ್ರನಾಗ ಸಿನಿಮಾಗೆ ಸಹ ನಿರ್ದೇಶಕರಾಗಿ ವಿ.ಆರ್​. ಭಾಸ್ಕರ್​ ಅವರು ಕೆಲಸ ಮಾಡಿದ್ದರು. ಅವರ ಕೆಲಸವನ್ನು ಮೆಚ್ಚಿದ ವಿಷ್ಣುವರ್ಧನ್​ ಅವರು ಅನೇಕ ಅವಕಾಶಗಳನ್ನು ನೀಡಿದರು. <a href=https://youtube.com/embed/Hlb0QaVy3uE?autoplay=1&mute=1><img src=https://img.youtube.com/vi/Hlb0QaVy3uE/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ವಿಷ್ಣುವರ್ಧನ್​ ಅವರು ಸ್ವಂತ ಬ್ಯಾನರ್​ನಲ್ಲಿ ಆರಾಧನೆ ಸಿನಿಮಾ ಮಾಡಿದ್ದರು. ಆ ಚಿತ್ರದಲ್ಲಿಯೂ ಅವರಿಗೆ ಅವಕಾಶ ಸಿಕ್ಕಿತು. ರುದ್ರನಾಗದಿಂದ ಆಪ್ತರಕ್ಷಕ ತನಕ ವಿಷ್ಣುವರ್ಧನ್​ ನಟನೆಯ ಬಹುತೇಕ ಸಿನಿಮಾಗಳಲ್ಲಿ ವಿ.ಆರ್​. ಭಾಸ್ಕರ್​ ಕೆಲಸ ಮಾಡಿದ್ದರು.ವಿ.ಆರ್​. ಭಾಸ್ಕರ್ ಅವರಿಗೆ 60 ವರ್ಷಕ್ಕೂ ಹೆಚ್ಚು ವಯಸ್ಸಾಗಿತ್ತು. ಕಿಡ್ನಿ ವೈಫಲ್ಯಕ್ಕೆ ಒಳಗಾಗಿದ್ದ ಅವರಿಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. 

ಹಾಗಿದ್ದರೂ ಕೂಡ ಚಿಕಿತ್ಸೆ ಫಲಕಾರಿ ಆಗದೇ ಅವರು ಕೊನೆಯುಸಿರು ಎಳೆದಿದ್ದಾರೆ. ಅವರ ತಾಯಿಯು ಚಾಮುಂಡಿ ಬೆಟ್ಟದ ಬಳಿ ಇರುವ ಹರಿಶ್ಚಂದ್ರ ಘಾಟ್​ನಲ್ಲಿ ಅಂತ್ಯಕ್ರಿಯೆ ನಡೆಸಲಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.