ಪತ್ನಿ ಸ್ಪಂದನ ಕೋಟ್ಯಾಂತರ ರೂಪಾಯಿ ಒಡವೆಗಳನ್ನು ವಿಜಯ್ ರಾಘವೇಂದ್ರ ಏನು ಮಾ ಡಿದ್ದಾರೆ ಗೊ.ತ್ತಾ

 

ಕುಟುಂಬದಲ್ಲಿ ಯಾರೇ ಸತ್ತರೂ ಅವರಿಗೆ ಸಂಬಂಧಿಸಿದ ಯಾವುದೇ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದೆಂದು ಹಿರಿಯರು ಹೇಳುವುದನ್ನು ಕೇಳಿದ್ದೇವೆ. ಈಗಲೂ ಈ ಪದ್ಧತಿಯನ್ನು ಅನುಸರಿಸಲಾಗುತ್ತದೆ. ಇನ್ನೂ ಕೆಲವರು ನೆನಪುಗಳಿಗಾಗಿ ತಮ್ಮ ಪ್ರೀತಿ ಪಾತ್ರರ ಅನುಪಸ್ಥಿತಿಯಲ್ಲಿ ಅವರಿಗೆ ಇಷ್ಟವಾದ ವಸ್ತುಗಳನ್ನು ಜತೆಯಲ್ಲಿಯೇ ಇಟ್ಟುಕೊಳ್ಳುತ್ತಾರೆ. 

ಈ ವಿಚಾರದಲ್ಲಿ ನಟ ವಿಜಯರಾಘವೇಂದ್ರ ಅವರ ನಿಲುವು ಏನಿದೆ ಎಂಬ ಕುತೂಹಲು ಎಲ್ಲರಲ್ಲೂ ಇದ್ದೇ ಇದೆ. ಆ ಕುತೂಹಲಕ್ಕೆ ಇಲ್ಲಿದೆ ಉತ್ತರ. ಹೌದು ಆಗಸ್ಟ್​ 6ರಂದು ವಿಜಯ್​ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಹೃದಯಾಘಾತದಿಂದ ಬ್ಯಾಂಕಾಕ್​ನಲ್ಲಿರುವಾಗಲೇ ಮೃತಪಟ್ಟ ಸುದ್ದಿ ಎಲ್ಲರಿಗೂ ತಿಳಿದಿದೆ. ಇಡೀ ಚಿತ್ರರಂಗಕ್ಕೆ ಆಘಾತ ನೀಡಿದ ಸುದ್ದಿ ಇದು. 

ಚಿಕ್ಕ ವಯಸ್ಸಿನಲ್ಲೇ ಸ್ಪಂದನಾ ಬಾರದ ಲೋಕಕ್ಕೆ ಪಯಣಿಸಿದ್ದು ಬಹಳ ದುಃಖದ ಸಂಗತಿ. ಅದರಲ್ಲೂ ಪ್ರೀತಿಸಿ ವಿವಾಹವಾಗಿದ್ದ ವಿಜಯ್​ ರಾಘವೇಂದ್ರರಿಗೆ ಸ್ಪಂದನಾ ಸರ್ವಸ್ವವೂ ಆಗಿದ್ದರು. ವಿಜಯ್​ ಅವರ ಏಳುಬೀಳಿನಲ್ಲಿ ಸದಾ ಬೆಂಗಾವಲಾಗಿ ನಿಲ್ಲುತ್ತಿದ್ದ ಸ್ಪಂದನಾ ಇನ್ನಿಲ್ಲ ಎಂಬುದನ್ನು ವಿಜಯ್​ಗೆ ಈಗಲು ಅರಗಿಸಿಕೊಳ್ಳಲು ಆಗುತ್ತಿಲ್ಲ. ಆದರೂ ವಾಸ್ತವ ಮರೆಮಾಚಲು ಸಾಧ್ಯವಿಲ್ಲ. ಸ್ಪಂದನಾ ದೈಹಿಕವಾಗಿ ಇಂದು ಇಲ್ಲ. 

ಆದರೆ, ಅವರು ಸಾಕಷ್ಟು ನೆನಪುಗಳನ್ನು ಬಿಟ್ಟು ಹೋಗಿದ್ದಾರೆ. ಅವುಗಳಲ್ಲಿ ಅವರ ಉಡುಗೆ ಮತ್ತು ಆಭರಣಗಳು ಕೂಡ ಒಂದು.ಸಾಮಾನ್ಯವಾಗಿ ಸಾವಿನ ಮನೆಯಲ್ಲಿ ಮೃತಪಟ್ಟವರಿಗೆ ಸಂಬಂಧಿಸಿದ ಯಾವ ವಸ್ತುಗಳನ್ನು ಇಟ್ಟುಕೊಳ್ಳುವುದಿಲ್ಲ. ಅದರಲ್ಲೂ ಬಟ್ಟೆಗಳನ್ನಂತೂ ಇಡುವುದೇ ಇಲ್ಲ. 

ಹೀಗಿರುವಾಗ ಸ್ಪಂದನಾ ಬಟ್ಟೆಗಳು ಮತ್ತು ಒಡವೆಗಳನ್ನು ಏನು ಮಾಡಿದಿರಿ ಎಂದು ಖಾಸಗಿ ಚಾನೆಲ್​ ಒಂದರಲ್ಲಿ ಪ್ರಶ್ನೆ ಮಾಡಿದಾಗ ವಿಜಯ್​ ತುಂಬಾ ಭಾವುಕರಾಗಿಯೇ ಮಾತನಾಡಿದ್ದಾರೆ. ವಿಜಯ್​ ಆಡಿರುವ ಮಾತುಗಳನ್ನು ಕೇಳಿದರೆ ಸ್ಪಂದನಾ ಸಾವಿನ ನೋವಿನಿಂದ ವಿಜಯ್​ ಇನ್ನೂ ಹೊರಬಂದಿಲ್ಲ ಎಂಬಂತೆ ಕಾಣುತ್ತದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.