ದರ್ಶನ್ ಜೊತೆ ಪವಿತ್ರ ಗೌಡ ಯಾವ ಸಂಬಂಧ ಇಟ್ಟುಕೊಂಡಿದ್ದಾರೆ, ನೆಚ್ಚಿನ ದಾಸನಿಗೆ ಅನ್ಯಾಯ ಮಾಡಿದ್ದು ಯಾರು

 
ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಾಳಲ್ಲಿ ಮತ್ತೆ ಬಿರುಗಾಳಿ ಎದ್ದಿದೆ. ದರ್ಶನ್ ಜೊತೆಗಿನ ಆತ್ಮೀಯ ಫೋಟೋಗಳನ್ನ ಶೇರ್ ಮಾಡಿ ಸಂಚಲನ ಸೃಷ್ಟಿಸಿದ್ದ ಪವಿತ್ರಾ ಗೌಡ ವಿರುದ್ಧ ವಿಜಯಲಕ್ಷ್ಮಿ ಸಿಡಿದೆದ್ದಿದ್ದರು. ಕಾನೂನು ಕ್ರಮದ ಎಚ್ಚರಿಕೆ ಕೊಟ್ಟಿದ್ದರು. ಆದ್ರೀಗ ದರ್ಶನ್ ಪತ್ನಿಯ ವಾರ್ನಿಂಗ್​​ಗೆ ಪವಿತ್ರಾ ಗೌಡ ರಿವರ್ಸ್ ವಾರ್ನಿಂಗ್ ಕೊಟ್ಟಿದ್ದಾರೆ. ಬರೀ ವಾರ್ನ್​ ಮಾಡಿದ್ದಷ್ಟೇ ಅಲ್ಲ, ದರ್ಶನ್ ಜೊತೆಗಿನ 10 ವರ್ಷದ ಗುಟ್ಟನ್ನ ರಟ್ಟು ಮಾಡಿದ್ದಾರೆ.
ಸ್ಯಾಂಡಲ್​ವುಡ್​ ಬಾಸ್, ಬಾಕ್ಸಾಫೀಸ್​ ಸುಲ್ತಾನ, ಡಿ ಬಾಸ್ ಅಂತೆಲ್ಲಾ ಕರೆಸಿಕೊಳ್ಳುವ ನಟ ದರ್ಶನ್​ಗೆ ಅದ್ಯಾಕೋ ಟೈಮೇ ಸರಿ ಇಲ್ಲ ಅನಿಸ್ತಿದೆ. ಡಿಸೆಂಬರ್ ಅಂತ್ಯದಲ್ಲಿ ತೆರೆಗೆ ಬಂದ ಕಾಟೇರ ಸಿನಿಮಾ ದೊಡ್ಡ ಯಶಸ್ಸು ಕಂಡಿದ್ದು ಬಾಕ್ಸಾಫೀಸ್​ನಲ್ಲೂ ರೆಕಾರ್ಡ್​ ಕಲೆಕ್ಷನ್ ಮಾಡಿದೆ. ದರ್ಶನ್ ಆ್ಯಕ್ಟಿಂಗ್​, ಮೇಕಿಂಗ್, ಕಥೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ದರ್ಶನ್​ ಪಾಲಿಗೆ ಕಾಟೇರ ದೊಡ್ಡ ಬ್ರೇಕ್ ಕೊಟ್ಟಿದೆ. 
ತುಂಬಾ ವರ್ಷದ ನಂತರ ದರ್ಶನ್​ ಅವರಿಗೆ ಇಷ್ಟು ದೊಡ್ಡ ಗೆಲುವು ಸಿಕ್ಕಿದ್ದು, ಈ ಗೆಲುವನ್ನ ಸಂಭ್ರಮಿಸುಸ್ತಿದ್ದಾರೆ. ಆದರೀಗ ಕಾಟೇರ ಗೆದ್ದ ಖುಷಿಯನ್ನ ಸಂಭ್ರಮಿಸಬೇಕಾದ ದರ್ಶನ್​ ಬಾಳಲ್ಲಿ ಮತ್ತೆ ಬಿರುಗಾಳಿ ಬೀಸಿದೆ. ದರ್ಶನ್​ ತಮ್ಮ ಫ್ಯಾಮಿಲಿ ಜೊತೆ ಚೆನ್ನಾಗಿದ್ದಾರೆ ಅಂದುಕೊಂಡಿರುವಾಗಲೇ ಬಾಳಿನ ಬಂಡಿ ಮತ್ತೆ ಹಳಿ ತಪ್ಪುತ್ತಿದೆ ಎನ್ನುವ ಸೂಚನೆ ಸಿಕ್ಕಿದೆ.
ದರ್ಶನ್ ಪತ್ನಿ ಮತ್ತು ಪವಿತ್ರಾ ಗೌಡ ನಡುವಿನ ಈ ವಾಕ್ಸಾಮರ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣ್ತಿಲ್ಲ. ದರ್ಶನ್ ಇಲ್ಲದೆ ಬದುಕಲು ಸಾಧ್ಯವಿಲ್ಲಾ ಎಂದು ಪವಿತ್ರ ಗೌಡ ಹೇಳಿದ್ದಾರೆ ಮತ್ತೊಂದೆಡೆ ನಟ ದರ್ಶನ್ ಸಹ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಡುವ ಸಾಧ್ಯತೆನೂ ತೀರಾ ಕಡಿಮೆ. ಸದ್ಯಕ್ಕೆ ಪವಿತ್ರಾ ಗೌಡ ಅವರ ಈ ಪೋಸ್ಟ್​ಗೆ ವಿಜಯಲಕ್ಷ್ಮಿ ಏನ್ ರಿಯಾಕ್ಟ್​ ಮಾಡ್ತಾರೆ ಅನ್ನೋದು ಕುತೂಹಲ ಮೂಡಿಸಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.