ಅನುಪಮ ಗೌಡ ಕಷ್ಟದಲ್ಲಿದ್ದಾಗ ದರ್ಶನ್ ಸಹಾಯ ಮಾಡಿ ಬಯಸಿದ್ದೇನು ಗೊ ತ್ತಾ

 
ಕನ್ನಡ ಕಿರುತೆರೆಯ ಜನಪ್ರಿಯ ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ಅನುಪಮಾ ಗೌಡ ಸದ್ಯ ಬೇಡಿಕೆಯ ನಿರೂಪಕಿ. ಮಹಾ ಭಾರತ, ರಾಜಾ ರಾಣಿ ಮತ್ತು ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುತ್ತಿರುವ ಅನುಪಮಾ ಗೌಡ ಎರಡು ಎರಡು ಸಲ ಬಿಗ್ ಬಾಸ್‌ ಮನೆಯೊಳಗೆ ಎಂಟ್ರಿ ಪಡೆದುಕೊಂಡರು. 
ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಅನುಪಮಾ ಗೌಡ ಯೂಟ್ಯೂಬ್ ಚಾನೆಲ್ ಕೂಡ ಹೊಂದಿದ್ದಾರೆ. ನಿಜ ಹೇಳಬೇಕು ಅಂದ್ರೆ ಇನ್‌ಸ್ಟಾಗ್ರಾಂ ಮತ್ತು ಯೂಟ್ಯೂಬ್ ಮೂಲಕವೂ ಅನುಪಮಾ ಖಾಸಗಿ ಬ್ರ್ಯಾಂಡ್‌ಗಳಿಂದ ದುಡಿಯುತ್ತಿದ್ದಾರೆ. 
ಇನ್ನು ಅಕ್ಕ ಸೀರಿಯಲ್ ನಟಿ ಆ ಕರಾಳ ರಾತ್ರಿ ಸಿನಿಮಾದಲ್ಲಿ ನಟಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಆದರೆ ಅನೇಕರಿಗೆ ಗೊತ್ತಿಲ್ಲ ಅನುಪಮಾ ಗೌಡ ಬಾಲ ನಟಿಯಾಗಿ ನಟ ದರ್ಶನ್ ಜೊತೆ ನಟಿಸಿದ್ದರು ಎಂದು. 2003ರಲ್ಲಿ ಇಂದ್ರಜಿತ್ ಲಂಕೇಶ್ ನಿರ್ದೇಶನ ಮಾಡಿರುವ ಲಂಕೇಶ್ ಪತ್ರಿಕೆ ಸಿನಿಮಾದಲ್ಲಿ ದರ್ಶನ್, ವಸುಂದರ ದಾಸ್ ಮತ್ತು ಅದಿತಿ ನಟಿಸಿದ್ದರು. 
ಈ ಚಿತ್ರದಲ್ಲಿ ಒಂದು ಮನ ಮುಟ್ಟುವ ದೃಶ್ಯವಿದೆ.ಪುಟ್ಟ ಬಾಲಕಿಯೊಬ್ಬಳು ವೀಲ್‌ ಚೇರ್‌ ಮೇಲೆ ಕುಳಿತುಕೊಂಡು ನಡು ರಸ್ತೆಯಲ್ಲಿ ಕಾಪಾಡಿ ಕಾಪಾಡಿ ಎಂದು ಕೂಗುತ್ತಿರುತ್ತಾಳೆ. ಅದೇ ದಾರಿಯಲ್ಲಿ ಕಾರು ಓಡಿಸಿಕೊಂಡು ಬಂದ ದರ್ಶನ್ ಆ ಪುಟ್ಟ ಬಾಲಕಿಯನ್ನು ನೋಡಿ ಓಡೋಡಿ ಕಾಪಾಡುತ್ತಾರೆ. ಆ ಪುಟ್ಟ ಬಾಲಕಿನೇ ಅನುಪಮಾ ಗೌಡ. 
ಇದೊಂದು ಸಣ್ಣ ದೃಶ್ಯ ಆಗಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಸಣ್ಣ ಪಾತ್ರದ ಬಗ್ಗೆ ರ್ಯಾಪಿಡ್ ರಶ್ಮಿ ಯೂಟ್ಯೂಬ್ ಸಂದರ್ಶನದಲ್ಲಿ ಅನುಪಮಾ ಗೌಡ ರಿವೀಲ್ ಮಾಡಿದ್ದಾರೆ. ಲಂಕೇಶ್ ಪತ್ರಿಕೆಯಲ್ಲಿ ನಟಿಸಿರುವ ಅನುಪಮಾ ಗೌಡರಿಗೆ ಆಗ ಕೇವಲ 12 ವರ್ಷ ಆಗಿತ್ತು. ಇದೊಂದು ಸೂಪರ್ ಹಿಟ್ ಸಿನಿಮಾ ಆಗಿದ್ದು ಬ್ಲಾಕ್ ಬಸ್ಟರ್ ಕಲೆಕ್ಷಮ್ ಮಾಡಿತ್ತು. 
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.