ಮೊದಲ ಬಾರಿ ಬೆಂಗಳೂರಿಗೆ ಬಂದಾಗ ಮಧ್ಯರಾತ್ರಿ ಪಿಜಿ ಒನರ್ ಮಾಡಿದ ಕೆಲಸಕ್ಕೆ ಕಣ್ನೀ ರು ಹಾಕಿದ್ದ ಅನುಶ್ರೀ;

 

ಮಾತಿನಲ್ಲಿಯೇ ಮನಗೆದ್ದ ನಿರೂಪಕಿ ಎಂದ ಕೂಡಲೇ ನೆನಪಾಗುವುದೇ ಅನುಶ್ರೀ ಅವರು. ಬೆಂಗಳೂರಿಗೆ ಕಾಲಿಟ್ಟೊಡನೆ ಅನುಭವಿಸಿದ ಕಷ್ಟಗಳ ಬಗ್ಗೆ ಈ ಮಂಗಳೂರು ಬೆಡಗಿ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಹೌದು ಕರಾವಳಿ ಬೆಡಗಿ ಪ್ರಸಿದ್ಧ ನಿರೂಪಕಿ ಅನುಶ್ರೀ ಅವರು ಮೊದಲ ಬಾರಿಗೆ  ತುಳುವಿನ ಪಾಡ್‌ ಕಾಸ್ಟ್ ಚಿಲ್ಲಿಂಗ್ ವಿಥ್ ಚಿಲಿಂಬಿ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ .

ಬೆಂಗಳೂರಿನಲ್ಲಿ ಕೆಲಸ ಕಳೆದುಕೊಂಡು ಪಿಜಿ ಓನರ್‌ ಮಧ್ಯರಾತ್ರಿ ಮನೆಯಿಂದ ಹೊರ ಹಾಕಿದ ಬಗ್ಗೆ ಮಾತನಾಡಿದ್ದಾರೆ. ನನಗೆ ಒಂದು ಸಮಯ ಬಂತು ಕೆಲಸವೇ ಇಲ್ಲದ ಹಾಗಾಯ್ತು. 2-3 ತಿಂಗಳಿಂದ ಹಾಸ್ಟೆಲ್‌ ಫೀಸ್‌ ಕಟ್ಟಲೇ ಇಲ್ಲ. ಮನೆಗೆ ದುಡ್ಡು ಕಳಿಸಲು ಕೂಡ ನನ್ನ ಬಳಿ ದುಡ್ಡು ಇಲ್ಲದ ಸ್ಥಿತಿ ಬಂತು. ಎಷ್ಟೋ ದಿನ ಊಟ ಮಾಡದೆ ಇದ್ದೆ. ಇದನ್ನು ಯಾರು ಈಗ ಹೇಳಿದರೆ ನಂಬುವುದಿಲ್ಲ. ಆದರೆ ಹಸಿವು ಅನ್ನುವುದು ನನಗೆ ಹೊಸದಾಗಿ ಇರಲಿಲ್ಲ.

.ಮಂಗಳೂರಿನಲ್ಲಿ ಕೂಡ ಮನೆಯಲ್ಲಿ ಈ ಪರಿಸ್ಥಿತಿಯನ್ನು ಎದುರಿಸಿದ್ದೆವು. ಕೆಲಸ ಅರಸಿ ಬಂದ ನನ್ನ ಜೀವನದಲ್ಲಿ ಕೆಲ ಇಲ್ಲದ ದಿನ ಬಂದಾಗ ಎಲ್ಲಿ ಎಡವಿದ್ದೇನೆ? ಏನಾಯ್ತು? ಯಾಕೆ ಕೆಲಸ ಇಲ್ಲ?  ಸೋತೆ ನಾನು ಅಂದು ಕೊಂಡು ಬೆಂಗಳೂರು ಬಿಟ್ಟು ಮತ್ತೆ ಮಂಗಳೂರು ಹೋಗುವ ಅನ್ನಿಸಿತು.ಮೆಜೆಸ್ಟಿಕ್‌ ಬಸ್‌ ನಿಲ್ದಾಣಕ್ಕೆ ಬಂದು ಅತ್ತುಕೊಂಡು ಅಮ್ಮನಿಗೆ ಕಾಲ್‌ ಮಾಡಿದೆ. ನನಗೆ ಆಗುತ್ತಿಲ್ಲ ಬೆಂಗಳೂರು ಬಿಟ್ಟು ಊರಿಗೆ ಬರುತ್ತೇನೆ ಎಂದೆ. ಅಮ್ಮ ಆಯ್ತು ಬಾ ಎರಡು ಅಗಳು ಅನ್ನ ತಿನ್ನುವ ಶಕ್ತಿ ನಮಗೆ ದೇವರು ಕೊಡ್ತಾರೆ. ಬಾ ಇಲ್ಲೇ ಎರಡು ತುತ್ತು ತಿಂದು ಇಲ್ಲೇ ಬದುಕೋಣ. <a href=https://youtube.com/embed/YOvSoAHGAw0?autoplay=1&mute=1><img src=https://img.youtube.com/vi/YOvSoAHGAw0/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

 ಆದ್ರೆ ನೀನು ಪ್ರಯತ್ನವೇ ಪಡದೆ ವಾಪಸ್‌ ಬರುವುದು ನನ್ನ ಮಗಳಲ್ಲ. ನೀನು ಸ್ವಲ್ಪ ಕೂಡ ಪ್ರಯತ್ನ ಪಡುತ್ತಿಲ್ಲ. ಇಷ್ಟು ಬೇಗ ನೀನು ಸೋಲು ಒಪ್ಪಿಕೊಂಡ್ಯಾ ಅಂತ ಕೇಳಿದರು. ಆಗ ನನಗೆ ರಿಯಲೈಸ್‌ ಆಯ್ತು ಸಿಕ್ಕಿದ ಕೆಲಸವನ್ನಷ್ಟೇ ಮಾಡಿದ್ದೇನೆ. ನಾನಾಗಿ ಯಾವುದು ಟ್ರೈ ಮಾಡಿಲ್ಲವಲ್ಲ ಎಂದು. ಅಲ್ಲಿಂದ ಮತ್ತೆ ನಾನು ಹಿಂತಿರುಗಿ ಹಾಸ್ಟೆಲ್‌ ಗೆ ಹೋದೆ. ಅಂದು ರಾತ್ರಿ ಯೋಚಿಸಿದೆ. "ನೀನು ಕೆಲಸವನ್ನು ಪ್ರೀತಿಸಿದರೆ, ಕೆಲಸ ನಿನ್ನನ್ನು ಪ್ರೀತಿಸುತ್ತದೆ" ಎಂದು ಅರಿತುಕೊಂಡೆ ಅದು ನನ್ನ ಇಡೀ ಬದುಕನ್ನು ಬದಲಾಯಿಸಿತು. ಯಾರು ಎಷ್ಟು ಹೊತ್ತಿಗೆ ಬೇಕಾದರೂ ರಾತ್ರಿ ಬೇಕಾದರೂ ಎಬ್ಬಿಸಿ ನನ್ನ ಮುಂದೆ ಕ್ಯಾಮರಾ ಇಟ್ಟರೆ ನಾನು ಮಾತನಾಡುತ್ತೇನೆ. ನನ್ನ ಕೆಲಸವನ್ನು ನಾನು ಅಷ್ಟು ಪ್ರೀತಿಸುತ್ತೇನೆ.

ನೀವೊಂದು ಮರವನ್ನು ಪ್ರೀತಿಸುತ್ತೀರಿ ಅಂದರೆ ಅದು ನಿಮಗೆ ಮರಳಿ ಪ್ರೀತಿ ಕೊಡುತ್ತದೆ. ನೀವು ಏನು ಮಾಡುತ್ತೀರಿ ಅದನ್ನು ಪ್ರೀತಿಯಿಂದ ಮಾಡಿ ನಿಮಗೆ ಫಲ ಸಿಗುತ್ತದೆ. ನಾನು ಯಾವಾಗ ನನ್ನ ಕೆಲಸವನ್ನು ಇಷ್ಟು ಪಟ್ಟೆ. ಆ ಕೆಲಸ ನನ್ನ ಕೈಹಿಡಿಯಿತು. ಜನ ನನ್ನನ್ನು ಇಷ್ಟಪಡಲು ಆರಂಭಿಸಿದರು. ನನ್ನ ಅಮ್ಮ ಹೇಳಿದ ಮಾತು ನನ್ನ ಜೀವನದಲ್ಲಿ ಒಂದು ಪ್ರಮುಖ ಪಾತ್ರವಾಯ್ತು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.