ಸ್ನೇಹಿತ್ ಅಣ್ಣ ನಮ್ರತಾ ಅತ್ತಿಗೆ ಯಾವಾಗ ಬತಾ೯ರೆ, ಬಿಗ್ ಬಾಸ್ ನಿಂದ ಹೊರಬಂದ ಸ್ನೇಹಿತ್ ಗೆ ಮಕ್ಕಳ ಪ್ರಶ್ನೆ
ಬಿಗ್ ಬಾಸ್ ಕನ್ನಡ ಸೀಸನ್ 10ನಿಂದ ಸ್ನೇಹಿತ್ ಗೌಡ ಅವರು ಕಳೆದ ವಾರ ಔಟ್ ಆಗಿದ್ದಾರೆ. ಅವರು ಮನೆಯಿಂದ ಹೋದ ಬಗ್ಗೆ ನಮ್ರತಾ ಗೌಡ , ವಿನಯ್ ಗೌಡಗೆ ಬೇಸರ ಇದೆ. ಈಗ ಸ್ನೇಹಿತ್ ಗೌಡ ಅವರು ಹೊರ ಪ್ರಪಂಚಕ್ಕೆ ಬಂದ ಬಳಿಕ ಮತ್ತೆ ಡಯಟ್ ಶುರು ಮಾಡಿದ್ದಾರೆ. ಜಿಮ್ಗೆ ಮರಳಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಮಾಹಿತಿ ನೀಡುತ್ತಿದ್ದಾರೆ.
ಇತ್ತೀಚೆಗೆ ಅವರು ಇನ್ಸ್ಟಾಗ್ರಾಮ್ನಲ್ಲಿ ಲೈವ್ ಬಂದಿದ್ದರು. ಈ ವೇಳೆ ಅವರು ಕೆಲವು ವಿಚಾರ ಹಂಚಿಕೊಂಡಿದ್ದಾರೆ. ನನ್ನಸಾಕಷ್ಟು ಟ್ರೋಲ್ಗಳು ಹರಿದಾಡಿವೆ. ನನಗೆ ಬೇರೆ ಬೇರೆ ನಿಕ್ನೇಮ್ ಕೂಡ ಇಡಲಾಗಿದೆ. ಈ ಎಲ್ಲಾ ವಿಚಾರಗಳು ಹೊರ ಬಂದ ಬಳಿಕ ನನಗೆ ಗೊತ್ತಾಗಿದೆ. ಹೀಗಾಗಿ ನಾನು ಯಾವುದೇ ಮಾಧ್ಯಮಗಳಿಗೆ ಸಂದರ್ಶನ ನೀಡಿಲ್ಲ ನೀಡೋದು ಇಲ್ಲ ಎಂದಿದ್ದಾರೆ.
ಸ್ನೇಹಿತ್ ಬೇರೆಯವರಿಗೋಸ್ಕರ ಆಟ ಆಡಿದ್ದಾರೆ. ಅವರು ಪ್ರಯತ್ನ ಹಾಕಿದ್ದರೆ ಇನ್ನೂ ಕೆಲವು ದಿನ ಇರಬಹುದಿತ್ತು ಎನ್ನುವ ಕಮೆಂಟ್ಗಳು ಬಂದಿವೆ. ಆದರೆ, ಇದನ್ನು ಸ್ನೇಹಿತ್ ಗೌಡ ಒಪ್ಪಿಲ್ಲ. ಬಿಗ್ ಬಾಸ್ನ ಮಿಸ್ ಮಾಡಿಕೊಳ್ಳುತ್ತಿಲ್ಲ ಎಂದೂ ಅವರು ಹೇಳಿದ್ದಾರೆ.ಬಿಗ್ಬಾಸ್ ನಂತರ ಒಂದಿಷ್ಟು ಮಕ್ಕಳನ್ನು ಮೀಟ್ ಮಾಡಿ ಅವರೊಂದಿಗೆ ಕಾಲ ಕಾಳೆದಿದ್ದಾರೆ ಸ್ನೇಹಿತ್ ಅವರು .
ಇನ್ನು ನನಗೆ ಕ್ಯಾಪ್ಟನ್ ಆಗಿ ದುಪ್ಪಟ್ಟು ಅಧಿಕಾರ ಕೊಟ್ಟಾಗ ಒಂದಷ್ಟು ತಪ್ಪುಗಳನ್ನು ಮಾಡಿದ್ದೇನೆ. ಆ ತಪ್ಪುಗಳಿಂದ ಕೆಲವರು ತೊಂದರೆಯನ್ನೂ ಅನುಭವಿಸಿದ್ದಾರೆ. ಆ ನೋವು ನನಗೆ ಕೊನೆಯತನಕ ಕಾಡುತ್ತದೆ. ಅದೊಂದನ್ನು ಬಿಟ್ಟರೆ, ನನ್ನ ಪ್ರಕಾರ ನನ್ನ ಫ್ರೆಂಡ್ಸ್ ಜತೆ ಹೇಗಿರ್ತೀನೋ ಹಾಗೇ ಇರ್ತಾಯಿದ್ದೆ. ಅವರಿಗೋಸ್ಕರ ಜೀವಕೊಡಲೂ ಸಿದ್ಧವಾಗ್ತಿದ್ದೆ. ಯಾರು ಆಗಲ್ವೋ ಅವ್ರು ಆಗಲ್ಲ ಅಷ್ಟೆ. ತೀರಾ ಗೇಮ್‌ಗೋಸ್ಕರ ರಾಜಿ ಮಾಡಿಕೊಂಡಿಲ್ಲ. ನನ್ನ ಫ್ರೆಂಡ್ಸ್‌ಗೆ ಕೊನೆ ಕ್ಷಣದ ತನಕವೂ ನಿಷ್ಠನಾಗಿದ್ದೆ. ನಂಗೆ ಯಾರು ಆಗಲ್ವೋ ಅವರನ್ನು ಅವಾಯ್ಡ್ ಮಾಡ್ತಿದ್ದೆ ಎಂದು ಹೇಳಿ ಬೇಸರ ವ್ಯಕ್ತಪಡಿಸಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.