ಸರಿಗಮಪ ಫಿನಾಲೆ ನಿಲ್ಲೋದಕ್ಕೆ ಯಾರು ಕಾರಣ; ಅನುಶ್ರೀ‌ ಹಾಗೂ ಜಸ್ಕರ್ ಸಿಂಗ್ ಎಡವಟ್ಟು

 

ಸರಿಗಮಪ ಇದು ಜೀ ಕನ್ನಡದಲ್ಲಿ ಪ್ರಸಾರವಾಗುವ ಒಂದು ರಿಯಾಲಿಟಿ ಶೋ ಆಗಿದ್ದು. ಈ ರಿಯಾಲಿಟಿ ಶೋ ಹೆಚ್ಚು ಜನಪ್ರಿಯವಾಗಿದೆ. ಆ ಕಾರಣಕ್ಕಾಗಿ ಹೆಚ್ಚಿನ ಸಂಖ್ಯೆಯ ವೀಕ್ಷಕರು ಫಿನಾಲೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇತ್ತು. ಯಾದಗಿರಿಯಲ್ಲಿ ಫಿನಾಲೆ ನಡೆಸಲಾಗುತ್ತಾ ಇತ್ತು ಆದರೆ ಈ ಕಾರ್ಯಕ್ರಮ ರದ್ದಾಗಿದೆ. 

ಇದಕ್ಕೆ ಕಾರಣ ರಾಮೇಶ್ವರಂ ಕೆಫೆಯಲ್ಲಾದ ಘಟನೆಯೂ ಒಂದು ಎನ್ನಲಾಗಿದೆ. ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿದೆ. ಯಾದಗಿರಿಯಲ್ಲಿ 30 ಸಾವಿರ ಜನ ಸೇರುವ ನಿರೀಕ್ಷೆ ಇತ್ತು ಎನ್ನಲಾಗಿದೆ. ಅರ್ಧಗಂಟೆ ಮುಂಚೆ ಜನರಿಗೆ ಈ ವಿಷಯ ಗೊತ್ತಾಗಿದೆ. ಆ ಕಾರಣ ಅಲ್ಲಿ ನೆರದಿದ್ದ ಹಲವಾರು ಜನರಿಗೆ ನಿರಾಸೆಯಾಗಿದೆ. ಎಲ್ಲರೂ ತಾವೂ ಈ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಬಹುದು ಎಂಬ ಆಸೆ ಇಟ್ಟುಕೊಂಡಿದ್ದರು.

ಆದರೆ ಕಾರ್ಯಕ್ರಮ ರದ್ದಾಗಿದ್ದಕ್ಕಾಗಿ ಹೆಚ್ಚಿನ ಜನರು ಸುಮ್ಮನೆ ಮನೆಗೆ ಹಿಂದಿರುಗುವ ಹಾಗಾಗಿದೆ.ವಾಹಿನಿಯ ಪ್ರತಿನಿಧಿ, ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮವು ರದ್ದಾದ ಬಗ್ಗೆ ಜನರಿಗೆ ಮಾಹಿತಿ ನೀಡಿದ್ದಾರೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ಈ ಕಾರ್ಯಕ್ರಮ ಆಯೋಜನೆ ಆಗಬಾರದು ಎಂದು ಗುಪ್ತಚರ ಇಲಾಖೆ ತಿಳಿಸಿದೆ. ಆ ಕಾರಣಕ್ಕೆ ಕಾರ್ಯಕ್ರಮ ರದ್ದಾಗಿದೆ. <a href=https://youtube.com/embed/KTI8fLRAjMU?autoplay=1&mute=1><img src=https://img.youtube.com/vi/KTI8fLRAjMU/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಯಾದಗಿರಿ ಜಿಲ್ಲಾ ಮೈದಾನದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮ ಇದಾಗಿತ್ತು. ಗುಪ್ತಚರ ಇಲಾಖೆ ನೀಡಿದ ಮಾಹಿತಿಯಂತೆ ಕಾರ್ಯಕ್ರಮ ರದ್ದು ಮಾಡಲಾಗಿದೆ ಎಂದು ಹೇಳಲಾಯಿತು. ಈ ಬಗ್ಗೆ ನಿಖರ ಮಾಹಿತಿ ಲಭ್ಯವಿಲ್ಲ. ಆದರೂ ಕಾರ್ಯಕ್ರಮ ರದ್ದಾಗಿದೆ ಎಂದು ಹೇಳಲಾಗುತ್ತಿದೆ. ಗೃಹ ಸಚಿವರು ಹಾಗೂ ಪೊಲೀಸ್ ಹಿರಿಯ ಅಧಿಕಾರಿಗಳು ಸಚಿವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ.

ಬೆಂಗಳೂರಿನಲ್ಲಿ ನಡೆದ ಬಾಂಬ್ ಸ್ಫೋಟದ ಹಿನ್ನೆಲೆ ಹೆಚ್ಚಿನ ಜನರು ಸೇರುವುದು ಅಪಾಯಕಾರಿ ಎಂದು ಈ ನಿರ್ಧಾರ ಕೈಗೊಂಡಿರಬಹುದು ಎನ್ನಲಾಗುತ್ತಿದೆ. ಜಿಲ್ಲಾಡಳಿತಕ್ಕೆ ಇಂಥದ್ದೊಂದ ಸಂದೇಶ ಬಂದ ತಕ್ಷಣವೇ ಜೀ ವಾಹಿನಿಯ ಆಯೋಜಕರಿಗೆ ಮಾಹಿತಿ ನೀಡಿ ರದ್ದು ಮಾಡುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಅನಿವಾರ್ಯವಾಗಿ ಕಾರ್ಯಕ್ರಮ ರದ್ದು ಮಾಡಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.