2024ಕ್ಕೆ ಭಾರತದ ಪ್ರಧಾನಿ ಯಾರಾಗಲಿದ್ದಾರೆ ಗೊತ್ತಾ, ಖ್ಯಾತ ಜ್ಯೋತಿಷಿಯ ಖಡಕ್ ಭವಿಷ್ಯ

 

ಕರ್ನಾಟಕದಲ್ಲಿ ಬಿಎಸ್‌ವೈ, ಬಿಜೆಪಿಯ ಅಧಿಕಾರ ಇರದು ಹಾಗೂ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರ ಬರಲಿದೆ ಎನ್ನುವ ಮಹಾ ಭವಿಷ್ಯ ನುಡಿದಿದ್ದ ಶನೇಶ್ವರ ದೇವಸ್ಥಾನದ ಧರ್ಮದರ್ಶಿ ಡಾ. ಯಶವಂತ್‌ ಗುರೂಜಿ ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಸಂಚಲ ಮೂಡಿಸುವಂಥ ಕಾಲಜ್ಞಾನ ನುಡಿದಿದ್ದಾರೆ. 
ಅವರು ಹೇಳಿರುವ ಪ್ರಕಾರ ಮುಂದಿನ ಶಿವರಾತ್ರಿಯ ಒಳಗಾಗಿ ಲೋಕಸಭೆ ಚುನಾವಣೆ ನಡೆದಲ್ಲಿ ಮಾತ್ರವೇ ಪ್ರಧಾನಿ ನರೇಂದ್ರ ಮೋದಿ ಅಧಿಕಾರವನ್ನು ಉಳಿಸಿಕೊಂಡು ಮೂರನೇ ಬಾರಿಗೆ ಅಧಿಕಾರ ಹಿಡಿಯಲಿದ್ದಾರೆ.

ಹಾಗೇನಾದರೂ, ಶಿವರಾತ್ರಿ ನಂತರ ಲೋಕಸಭೆ ಚುನಾವಣೆ ನಡೆದಲ್ಲಿ ದೇಶದ ಪ್ರಧಾನಿ ಮಹಿಳೆ ಆಗಿರಲಿದ್ದಾರೆ ಎಂದು ಯಶವಂತ ಗುರೂಜಿ ಭವಿಷ್ಯ ನುಡಿಸಿದ್ದಾರೆ. ಕಾಲಜ್ಞಾನ ಪ್ರಕಾರ ಮುಂದಿನ ಪ್ರಧಾನಿ ಆಗೋ ಯೋಗ ಒಬ್ಬ ಮಹಿಳೆಗೆ ಇದೆ ಎಂದು ಕಾಲಜ್ಞಾನಿ ಡಾ. ಯಶವಂತ್‌ ಗುರೂಜಿ ಹೇಳಿದ್ದಾರೆ. ತುಮಕೂರಿನ ನೊಣವಿನಕೆರೆಯಲ್ಲಿ ಯಶವಂತ್‌ ಗುರೂಜಿ ಭವಿಷ್ಯ ನುಡಿಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಇದೇ ಸ್ವಾಮೀಜಿ ಭವಿಷ್ಯ ನುಡಿದಿದ್ದರು. ಆ ಭವಿಷ್ಯ ನಿಜವಾಗಿತ್ತು. 

ಇದೀಗ ರಾಷ್ಟ್ರ ರಾಜಕಾರಣದ ಬಗ್ಗೆ ಇವರು ಭವಿಷ್ಯ ಹೇಳಿದ್ದಾರೆ. ಈಗಿನ ಸಂವತ್ಸರದ ಫಲಾಫಲಗಳನ್ನ ನೋಡಿದಾಗ ಒಬ್ಬ ಸ್ತ್ರೀ ದೇಶ ಆಳಲಿದ್ದಾರೆ. ಮಹಾಶಿವರಾತ್ರಿ ಹಬ್ಬದ ಒಳಗೆ ಲೋಕಸಭೆ ಚುನಾವಣೆ ನಡೆದ್ರೆ ಪ್ರಧಾನಿ ಮೋದಿಗೆ ಅಧಿಕಾರ ಉಳಿಸಿಕೊಳ್ಳುವ ಅವಕಾಶವಿದೆ. ಮಾರ್ಚ್ ನಂತರ ಚುನಾವಣೆ ನಡೆದ್ರೆ ಬೇರೆ ಪಕ್ಷ ಅಧಿಕಾರಕ್ಕೆ ಬರುತ್ತದೆ. ಆ ಒಬ್ಬ ಮಹಿಳೆಯೇ ಪ್ರಧಾನಿ ಆಗೋ ಯೋಗವಿದೆ. 

ಮಹಾಸಿದ್ದರು ಬರೆದ ಕಾಲಜ್ಞಾನದ ಭವಿಷ್ಯ ವಾಣಿಯನ್ನ ನೋಡಿದರೆ, ಮಹಾಶಿವರಾತ್ರಿ ಹಬ್ಬದ ನಂತರ ಒಂದು ಶಕ್ತಿ ಅಂದರೆ ಸ್ತ್ರೀ ದೇಶ ಆಳಲಿದ್ದಾರೆ. ಶಕ್ತಿ ಎಂದರೆ ಒಂದು ಹೆಣ್ಣು. ಆ ಹೆಣ್ಣು ಈ ದೇಶವನ್ನ ಮುನ್ನಡೆಸಲಿದ್ದಾರೆ. ಇಂತಹದ್ದೇ ಪಕ್ಷ ಅಧಿಕಾರದ ಗದ್ದುಗೆ ಏರಲಿದೆ ಎಂದು ಮಕರ ಸಂಕ್ರಮಣ ಪರ್ವ ಕಾಲದಲ್ಲಿ ಹೇಳಲಾಗುತ್ತದೆ. ಇಂತಹ ಸ್ತ್ರೀನೇ ದೇಶ ಆಳ್ತಾಳೆ ಅಂತಾ ನಿಖರವಾಗಿ ಅಂದು ತಿಳಿಸಲಾಗುತ್ತದೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.