ಸಾ ಯೋ ಸ್ಥಿತಿಯಲ್ಲಿದ್ದ ಪಿಕೆ ಬದುಕಿ ಬಂದಿದ್ದೇಗೆ, ಗಂಡನ ಮಾಡಿದ ಆ ತ್ಯಾಗ ಏನು ಗೊ ತ್ತಾ

 
 ಪ್ರೀತಿ ಶುರುವಾಗಿ, ಇನ್ನೇನು ಹೊಸ ಜೀವನ ಶುರುವಾಗಲಿದೆ ಎಂದು ಖುಷಿಯಲ್ಲಿದ್ದಾಗ, ನಿಶ್ಚಿತಾರ್ಥವೂ ಫಿಕ್ಸ್ ಆದಾಗ ಅನಾರೋಗ್ಯ ಸಮಸ್ಯೆ ಉಂಟಾದರೆ ಆ ಹುಡುಗಿ ಏನು ಮಾಡುತ್ತಾಳೆ? ಮಜಾ ಭಾರತ, ಗಿಚ್ಚಿ ಗಿಲಿಗಿಲಿ , ರಾಜಾ ರಾಣಿ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಪ್ರಿಯಾಂಕಾ ಕಾಮತ್ ಇದೇ ಸಮಸ್ಯೆಯನ್ನು ಎದುರಿಸಿದ್ದರು. ಪ್ರೀತಿಸಿದ ಹುಡುಗ ಕೈಬಿಡದೆ ಅವರ ಬೆಂಗಾವಲಾಗಿ ನಿಂತಿದ್ದರಿಂದ ಪ್ರಿಯಾಂಕಾ ಮಾನಸಿಕ, ದೈಹಿಕ ನೋವನ್ನು ಎದುರಿಸಿದರು. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಲು ಸಾಲು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
ಕಳೆದ ವರ್ಷ ನಾನು, ಅಮಿತ್ ಮದುವೆಯಾಗಬೇಕು ಅಂತ ಫಿಕ್ಸ್ ಆದೆವು, ನಮ್ಮಿಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆಯಿತು, ಆಮೇಲೆ ಒಂದಷ್ಟು ದಿನಗಳ ಬಳಿಕ ನಡೆಯಲು, ಕೂರಲು ಆಗದೆ 2 ಸರ್ಜರಿ ಆಯ್ತು. ನಾನು 50% ಮಾತ್ರ ಬದುಕುವ ಚಾನ್ಸ್ ಇತ್ತು, ನನ್ನ ದೇಹದಲ್ಲಿ Screw, Rods ಇತ್ತು. ಅಮಿತ್‌ಗೆ ನನ್ನನ್ನು ಬಿಟ್ಟು, ಬೇರೆಯವರನ್ನು ಮದುವೆಯಾಗು ಅಂತ ಹೇಳಿದ್ದೆ. ಆದರೆ ಕಷ್ಟದ ಸಮಯದಲ್ಲಿ ಅವನು ನನ್ನ ಬಿಡಲೇ ಇಲ್ಲ. ಡ್ರೆಸ್ ಹಾಕಿಕೊಳ್ಳೋದರಿಂದ ಹಿಡಿದು, ಡೈಪರ್ ಪ್ಯಾಡ್ ಬದಲಾಯಿಸಲು ಕೂಡ ಅಮಿತ್ ನನಗೆ ಸಹಾಯ ಮಾಡ್ತಿದ್ದ ಎಂದು ರಾಜಾ ರಾಣಿ ಸ್ಟೇಜ್ ಶೋ ಮೇಲೆ ಪ್ರಿಯಾಂಕಾ ಕಾಮತ್ ಹೇಳಿದ್ದಾರೆ.
ನಾನು 8 ತಿಂಗಳುಗಳ ಕಾಲ ಹಾಸಿಗೆಯಲ್ಲಿದ್ದೆ. ಆಮೇಲೆ ಸುಧಾರಿಸಿಕೊಳ್ಳಲು ಆರಂಭಿಸಿದೆ. ಆಮೇಲೆ ನಡೆಯಲು ಆರಂಭಿಸಿದೆ. ಅಮಿತ್ ನಾನು ಆಶಯ ಕಳೆದುಕೊಳ್ಳದಂತೆ ನೋಡಿಕೊಂಡ. ಅದಾಗಿ ಕೆಲವು ತಿಂಗಳುಗಳ ನಂತರ ನಾವಿಬ್ಬರೂ ನಿಶ್ಚಿತಾರ್ಥ ಮಾಡಿಕೊಂಡೆವು. ಈ ವರ್ಷದ ಡಿಸೆಂಬರ್‌ನಲ್ಲಿ ನಾವು ಮದುವೆಯಾಗಲಿದ್ದೇವೆ. ಅಮಿತ್ ನನಗೆ ಎಂದೂ ಐ ಲವ್ ಯು ಅಂತ ಹೇಳಲೇ ಇಲ್ಲ, ಆದರೆ ಅವನ ಕೆಲಸ ಮೂಲಕ ಹೇಳುತ್ತಿರುತ್ತಾನೆ ಎಂದಿದ್ದಾರೆ ಪ್ರಿಯಾಂಕಾ. <a href=https://youtube.com/embed/DsGVBz2LV_Y?autoplay=1&mute=1><img src=https://img.youtube.com/vi/DsGVBz2LV_Y/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ನನ್ನ ಜೀವನದಲ್ಲಿ ವೈಯಕ್ತಿಕ ಜೀವನ, ವೃತ್ತಿ ಜೀವನ ಎಲ್ಲವೂ ಚೆನ್ನಾಗಿತ್ತು, ಒಮ್ಮೆ ನನಗೆ ನಡೆಯಲು, ಕೂರಲು ಆಗುತ್ತಿರಲಿಲ್ಲ. ವೈದ್ಯರು ಸರ್ಜರಿ ಮಾಡಬೇಕು ಎಂದರು. ನನ್ನ ಕುಟುಂಬ, ಮದುವೆಯಾಗುವ ಹುಡುಗನ ಮುಂದೆ ನಾನು ತುಂಬ ಸ್ಟ್ರಾಂಗ್ ಆಗಿದ್ದೇನೆ ಎಂದು ತೋರಿಸಿಕೊಳ್ಳಬೇಕಿತ್ತು. 
ನನ್ನ ತಂದೆ ಮುಂದೆ ನಾನು ಭಾವನಾತ್ಮಕವಾಗಿ ದುಃಖ ಹೊರಹಾಕುವಂತಾಗಿದ್ದೆ, ಆ ವೇಳೆಗೆ ನನ್ನ ನಿಶ್ಚಿತಾರ್ಥ ಕೂಡ ಫಿಕ್ಸ್ ಆಗಿತ್ತು. ಸರ್ಜರಿ ಬಳಿಕ ನನ್ನ ಲೈಫ್ ಹೇಗಿರತ್ತೆ ಅಂತ ಕೂಡ ಗೊತ್ತಿರಲಿಲ್ಲ. ದೈಹಿಕ, ಮಾನಸಿಕವಾಗಿ ನಾನು ತುಂಬ ನೋವು ಅನುಭವಿಸಿದ್ದೆ. ಅದೃಷ್ಟವಶಾತ್ ನನ್ನ ಸರ್ಜರಿ ಚೆನ್ನಾಗಿಯೇ ಆಯ್ತು. ನನ್ನ ಕುಟುಂಬ, ನನ್ನ ಹುಡುಗ ಬೆನ್ನೆಲುಬಿಗೆ ನಿಂತ ಇಂದು ಪತಿಯಾಗಿ ಜೊತೆಗಿದ್ದಾನೆ ಎಂದಿದ್ದಾರೆ ಪ್ರಿಯಾಂಕಾ ಕಾಮತ್.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.