ಇಡೀ ದೇಶಕ್ಕೆ ಧರ್ಮ ನೀಡುವ ಧರ್ಮಸ್ಥಳದಲ್ಲಿ ಸೌಜನ್ಯಗೆ ಯಾಕೆ ನ್ಯಾಯ ಸಿಕ್ಕಿಲ್ಲ

 
ರಿ

2012 ರಲ್ಲಿ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಅತ್ಯಾಚಾರಕ್ಕೀಡಾಗಿ ಹತ್ಯೆಯಾದ ಸೌಜನ್ಯ ಪ್ರಕರಣದ ತನಿಖೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯವು ಆರೋಪಿ ಒಬ್ಬಾತನನ್ನು ಖುಲಾಸೆಗೊಳಿಸಿದೆ. ಈ ತೀರ್ಪು ಹಲವು ಹೊಸ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಹತ್ಯೆಯನ್ನು ಪ್ರತಿಭಟಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್, ಸಿಐಟಿಯು, ಅಲ್ಲದೇ ಇನ್ನೂ ಹಲವಾರು ನಾಗರಿಕ ಸಂಘಟನೆಗಳು ಚಳುವಳಿ ನಡೆಸಿದ್ದವು. 

ನಿಜ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ನಿರಂತರ ಹೋರಾಟದ ಒತ್ತಡ ಹೆಚ್ಚಿದ ಬಳಿಕ ಮಾನಸಿಕ ಅಸ್ವಸ್ತ ಎನ್ನಲಾಗಿದ್ದ ಸಂತೋಷ್ ರಾವ್ ಎನ್ನುವವರನ್ನು ಆರೋಪಿ ಎಂದು ಪೋಲೀಸರು ಬಂಧಿಸಿ ಜೈಲಿಗೆ ತಳ್ಳಿದ್ದರು. ಆದರೆ ಈ ವ್ಯಕ್ತಿ ಕೃತ್ಯ ಆ ಎಸಗಿದ್ದಾನೆ ಎಂಬುದನ್ನು ಹೋರಾಟ ನಡೆಸುತ್ತಿದ್ದ ಸಂಘಟನೆಗಳು, ಸೌಜನ್ಯಾಳ ಕುಟುಂಬ ಒಪ್ಪಿಯೇ ಇರಲಿಲ್ಲ.
ಈ ಕೃತ್ಯದಲ್ಲಿನ ಅತ್ಯಂತ ಪ್ರಭಾವಿ ಪ್ರಮುಖರನ್ನು ರಕ್ಷಿಸಲೆಂದೇ ಒಬ್ಬ ಅಮಾಯಕನನ್ನು ಬಲಿ ಕೊಡಲಾಗುತ್ತಿದೆ ಎಂದೇ ಪ್ರತಿಭಟಿಸಲಾಗಿತ್ತು. 

ಈಗ ಸಿಬಿಐ ವಿಶೇಷ ನ್ಯಾಯಾಲಯ ನೀಡಿದ ತೀರ್ಪು ಅದನ್ನು ಸಮರ್ಥಿಸಿದೆ. ಅಪರಾಧಿಗಳು ಬೇರೆ ಇದ್ದಾರೆ ಎನ್ನುವುದನ್ನು ಧೃಡ ಪಡಿಸಿದೆ. ಅಂದ ಹಾಗೆ ಸೌಜನ್ಯ ಅತ್ಯಾಚಾರ ಮತ್ತು ಕೊಲೆಯಾದಾಗ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದವರು ಶ್ರೀಮಾನ್ ಡಿವಿ ಸದಾನಂದ ಗೌಡರು. ಯಡಿಯೂರಪ್ಪನವರ ಕೃಪಾಕಟಾಕ್ಷದಿಂದ ಮುಖ್ಯಮಂತ್ರಿ ಆಗಿ ಕೂತಿದ್ದ ಡಿವಿ ಸದಾನಂದ ಗೌಡರು ಮತ್ತು ಅವತ್ತು ಅತ್ಯಾಚಾರವಾಗಿ ಕೊಲೆಯಾಗಿ ಹೋಗಿದ್ದ ಸೌಜನ್ಯ – ಈ ಇಬ್ಬರು ಕೂಡಾ ಘಟನೆ ನಡೆದ ಬೆಳ್ತಂಗಡಿ ತಾಲೂಕು ಮತ್ತು ಇಡೀ ದಕ್ಷಿಣ ಕನ್ನಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಒಕ್ಕಲಿಗ ಗೌಡ ಸಮುದಾಯಕ್ಕೆ ಸೇರಿದವರು. 

ಹಾಗಾಗಿ ತನ್ನ ಸಮುದಾಯದ ಹುಡುಗಿಗೆ ನ್ಯಾಯ ಸಿಗಬಹುದು ಎನ್ನುವ ಆಶಾ ಭಾವನೆ ಸೌಜನ್ಯಾಳ ಪೋಷಕರಲ್ಲಿತ್ತು. ಆದರೆ ಡಿ ವಿ ಸದಾನಂದ ಗೌಡರು ಆ ಆಶಾಭಾವನೆಯನ್ನು ಹೊಸಕಿ ಹುಸಿ ಮಾಡಿದ್ದರು. ಸದಾನಂದ ಗೌಡರು ಘಟನೆ ನಡೆದ ನಂತರ ಒಂದು ಬಾರಿ ತಾಲೂಕಿಗೆ ಬಂದಿದ್ದರು ಕೂಡಾ. ಆಗ ತಮ್ಮ ಮಗಳ ಸಾವಿಗೆ ನ್ಯಾಯ ಕೊಡಿಸಬಲ್ಲರು ಎಂಬ ಆಶಾಭಾವನೆ ಅವರಲ್ಲಿ ಇತ್ತು. ಆದರೆ ಅವರ ಅಂದಿನ ಭೇಟಿ ಸೌಜನ್ಯಾಳಿಗೆ ನ್ಯಾಯ ಕೊಡಿಸಲು ಬಂದ ಉದ್ದೇಶವಾಗಿರಲಿಲ್ಲ.  <a href=https://youtube.com/embed/p_7we9mgguQ?autoplay=1&mute=1><img src=https://img.youtube.com/vi/p_7we9mgguQ/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಅದು ಯಾವುದೋ ಲಾಭಕ್ಕೆ ಮತ್ತು ಅನುಸಂಧಾನಕ್ಕೆ ವಿನಾ ಸತ್ತ ಹುಡುಗಿಗೆ ನ್ಯಾಯ ಕೊಡಿಸಲು ಅಲ್ಲ ಅನ್ನುವುದನ್ನು ಇವತ್ತಿಗೂ ಬಹುಸಂಖ್ಯಾತ ಜನರು ನಂಬಿಕೊಂಡಿದ್ದಾರೆ. ನಿನ್ನೆ ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯವರು ಹಳೆಯ ಘಟನೆಗಳನ್ನೆಲ್ಲ ಮೆಲುಕು ಹಾಕಿ ಆಕ್ರೋಶ ಹೊರಹಾಕಿದ್ದಾರೆ. ‘ ನಮಗೆ ನಮ್ಮ ಕೋರ್ಟುಗಳಿಂದ ನ್ಯಾಯ ಸಿಗಲ್ಲ. ಇವರಿಗೆ ಧರ್ಮಸ್ಥಳದ ಮಂಜುನಾಥ ಮತ್ತು ಅಣ್ಣಪ್ಪ ದೈವಗಳೇ ಶಿಕ್ಷೆ ನೀಡಬೇಕು. ಈಗಾಗಲೇ ಸದಾನಂದ ಗೌಡ ಇದರ ಬಗ್ಗೆ ಅನುಭವಿಸುತ್ತಾ ಇದ್ದಾರೆ. ಇನ್ನೂ ಹಲವು ಜನ ಇದರ ಬಗ್ಗೆ ಅನುಭವಿಸಲಿಕ್ಕಿದೆ.’ ಎಂದು ವಿಷಾದದಿಂದ ಹೇಳಿದ್ದಾರೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.