ಪತಿಯಿಂದ ಸುಖ ಸಿಗುತ್ತಿಲ್ಲ ಎಂದು ದೂರು ನೀಡಿದ ಪತ್ನಿ;
ನೀವು ಕಂಡ ವಿಚಿತ್ರ ಕೇಸ್ ಗಳಲ್ಲಿ ಇದು ಕೂಡಾ ಒಂದು ಕೆಲವರು ವರದಕ್ಷಿಣೆಗಾಗಿ ಹಲ್ಲೆ, ಟಾರ್ಚರ್, ಮನೆಯಿಂದ ಹೊರಹಾಕುವುದನ್ನು ನಾವು ನೋಡಿದ್ದೇವೆ. ಕೇಳಿದ್ದೇವೆ ಕೂಡ. ಅಲ್ಲದೇ ವರದಕ್ಷಿಣೆ ಆಸೆಗಾಗಿ ಕೊಲೆಯಾದ ಪ್ರಕರಣಗಳು ನಮ್ಮ ಕಣ್ಣ ಮುಂದೆ ಇವೆ. ಆದ್ರೆ, ರಾಮನಗರದಲ್ಲೊಂದು ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ.
ವರದಕ್ಷಿಣೆಗಾಗಿಯೇ ತನ್ನೊಂದಿಗೆ ಲೈಂಗಿಕ ಆಸಕ್ತಿ ತೋರಿಸುತ್ತಿಲ್ಲ ಎಂದು ಆರೋಪಿಸಿ ಪತಿ ವಿರುದ್ಧ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಅಷ್ಟಕ್ಕೂ ಎರಡು ವರ್ಷದ ಗಂಡು ಮಗು ಇದೆ. ಮಗುವಿನ ಜನನ ಆದಾಗಿನಿಂದ ಲೈಂಗಿಕತೆಯಲ್ಲಿ ತೊಡಗಿಕೊಂಡಿಲ್ಲ. ಕಳೆದ ಎರಡು ವರ್ಷದಿಂದ ಪತಿ ತನ್ನೊಂದಿಗೆ ಸೆಕ್ಸ್ ಮಾಡುತ್ತಿಲ್ಲ.
ವರದಕ್ಷಿಣೆಗಾಗಿಯೇ ಈ ರೀತಿ ಮಾಡುತ್ತಿದ್ದಾರೆ. ದಯವಿಟ್ಟು ವರದಕ್ಷಿಣೆ ಕೇಸ್ ಹಾಕಿ ಎಂದು ಮಹಿಳೆ ದೂರು ನೀಡಿದ್ದು, ಈ ದೂರಿನ ಮೇರೆಗೆ ರಾಮನಗರ ಮಹಿಳಾ ಠಾಣೆ ಪೊಲೀಸರು, ವರದಕ್ಷಿಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆದರೂ ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳು ಭಾರತದಲ್ಲಿ ಹೆಚ್ಚಾಗಿವೆ.
ಪತಿಯು ಪತ್ನಿಯನ್ನು ಸ್ನೇಹಿತೆಯಂತೆ ಕಂಡು ಅವಳ ಕಷ್ಟ ಸುಖಗಳಿಗೆ ಸ್ಪಂದಿಸುವ ಗುಣ ಹೊಂದಿರಬೇಕು ಎನ್ನುವುದು ಹಿಂದೂ ಪುರಾಣಗಳಲ್ಲಿ ಉಲ್ಲೇಖವಿದೆ. ಆದರೆ ಈಗಿನ ಮಾರ್ಡನ್ ಯುಗದಲ್ಲಿ ಭಾವನೆಗಳಿಗೆ ಬೆಲೆ ಇಲ್ಲದಂತಾಗಿದೆ. ಜಣ ಜಣ ಕಾಂಚಾಣದ ಮುಂದೆ ಮನುಷ್ಯನ ಅದರಲ್ಲೂ ದಾಂಪತ್ಯದ ಬೆಲೆ ಇಲ್ಲದಂತಾಗಿ ಹೋಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.