'ಮಸೀದಿಯಲ್ಲಿ ಮಹಿಳೆ ನಮಾಜ್' ಇಡೀ ಕುಟುಂಬವನ್ನೇ ಗ್ರಾಮದಿಂದ ಹೊರಗೆ, ಎಲ್ಲಿದೆ ಸುಮಾನತೆ

 

ಇತ್ತೀಚಿಗೆ ದೇವರು ಕಾಣೆ ಆಗಿದ್ದಾನಾ? ಎನ್ನುವ ಪ್ರಶ್ನೆ ಮೂಡುತ್ತದೆ. ಮಸೀದಿಯಲ್ಲಿ ನಮಾಜ್ ಮಾಡಿದ್ದಕ್ಕೆ ಮಹಿಳೆಯ ಇಡೀ ಕುಟುಂಬವನ್ನು ಗ್ರಾಮದಿಂದ ಬಹಿಷ್ಕಾರ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ವಿರಾಜಪೇಟೆ ತಾಲ್ಲೂಕಿನ ಗುಂಡಿಗೆರೆಯಲ್ಲಿ ಘಟನೆ ನಡೆದಿದೆ. 25 ವರ್ಷಗಳ ಹಿಂದೆಯೇ ಜುಬೈದಾ ಎಂಬ ಮಹಿಳೆಯ ಕುಟುಂಬವನ್ನು ಬಹಿಷ್ಕಾರ ಹಾಕಿರುವುದಾಗಿ ಆರೋಪ ಮಾಡಲಾಗಿದೆ.

30 ವರ್ಷದ ಹಿಂದೆ ಅಹಮ್ಮದ್ ಎಂಬುವರನ್ನು ಜುಬೈದಾ ವಿವಾಹವಾಗಿದ್ದರು. ಜುಬೈದಾ ಅಹಮದ್​ನ ಎರಡನೇ ಪತ್ನಿ. ಕೇರಳದ ಕೋಜಿಕೋಡಿನ ನಿವಾಸಿ ಜುಬೈದಾ, ವಿವಾಹದ ಬಳಿಕ ವಿರಾಜಪೇಟೆ ಮಸೀದಿಯಲ್ಲಿ ನಮಾಜ್ ಮಾಡಿದ್ದರು.ಇದೇ ಕಾರಣಕ್ಕೆ ಜುಬೈದಾ ಮತ್ತು ಅಹಮ್ಮದ್ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ. 

ಇನ್ನು ಎರಡು ದಿನಗಳ ಹಿಂದೆ ಅನಾರೋಗ್ಯದಿಂದ ಅಹಮ್ಮದ್ ಮೃತಪಟ್ಟಿದ್ದಾರೆ. ಅಂತ್ಯಕ್ರಿಯೆಯಲ್ಲಿ ಜುಬೈದಾ ಭಾಗವಹಿಸಲು ಶಾಫಿ ಮಸೀದಿ ಜಮಾತ್ ಅವಕಾಶ‌ ನೀಡಿಲ್ಲ. ಜುಬೈದಾ ಪುತ್ರ ರಶೀದ್​ರಿಂದ ಜಿಲ್ಲಾ ವಕ್ಫ್ ಬೋರ್ಡಿಗೆ ಮತ್ತು ವಿರಾಜಪೇಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ನಮಾಜ್ ಮಾಡಿದ್ದಕ್ಕೆ ಬಹಿಷ್ಕರಿಸಲಾಗಿದೆ ಎಂಬ ಆರೋಪವನ್ನು ತಳ್ಳಿಹಾಕಿರುವ ಮಸೀದಿಯ ಮುಖಂಡರೊಬ್ಬರು, ಎಲ್ಲದಕ್ಕೂ ನಿಯಮಗಳು ಇರುತ್ತವೆ. 

ಬೇರೆ ಯಾವುದೋ ಕಾರಣಕ್ಕೆ ಹೀಗಾಗಿರಬಹುದು ಎಂದಿದ್ದಾರೆ. ಕಾರಣ ಏನೇ ಆಗಲಿ ಆದರೆ ಇದು ನಿಜಕ್ಕೂ ಖಂಡನೀಯ ಘಟನೆ ಎಂದು ಹಲವರು ನುಡಿಯುತ್ತಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.