ಯಶ್ ಒಂದು ಸಿನಿಮಾಗೆ 5 ಕೋಟಿ ಸಂಭಾವನೆ, ಚಿಕ್ಕಣ್ಣನ ಸಂಭಾವನೆ ಕೇಳಿ ದರ್ಶನ್ ಕೂಡ ತ.ಬ್ಬಿಬ್ಬು
ಈವರೆಗೂ ಹಾಸ್ಯ ನಟನಾಗಿಯೇ ಗುರುತಿಸಿಕೊಂಡಿದ್ದ ನಟ ಚಿಕ್ಕಣ್ಣ (Chikkanna), ಉಪಾಧ್ಯಕ್ಷ ಸಿನಿಮಾ ಮೂಲಕ ಮೊದಲ ಸಲ ನಾಯಕನಾಗಿ ನಟಿಸಿದ್ದಾರೆ. ಕಳೆದ ಶುಕ್ರವಾರ ಈ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಿ ಎಲ್ಲ ಕಡೆಯಿಂದಲೂ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಅಷ್ಟೇ ಅಲ್ಲ ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ ಎಂದು ಚಿತ್ರತಂಡವೂ ಹೇಳಿಕೊಂಡಿದೆ. ಈ ನಡುವೆ ಚಿಕ್ಕಣ್ಣ ಸಂಭಾವನೆ ವಿಷಯ ಕೂಡ ಇದೀಗ ಅಚ್ಚರಿ ಮೂಡಿಸಿದೆ.
10 ವರ್ಷಗಳ ಹಿಂದೆ ಶರಣ್ ಮತ್ತು ಚಿಕ್ಕಣ್ಣ ಕಾಂಬಿನೇಷನ್‌ನಲ್ಲಿ ಅಧ್ಯಕ್ಷ ಸಿನಿಮಾ ಬಿಡುಗಡೆ ಆಗಿತ್ತು. ಆ ಸಿನಿಮಾದ ಯಶಸ್ಸಿನ ಬಳಿಕ 10 ವರ್ಷಗಳ ಬಳಿಕ ಆ ಚಿತ್ರದ ಮುಂದುವರಿದ ಭಾಗವಾಗಿ ಉಪಾಧ್ಯಕ್ಷ ಸಿನಿಮಾ ಬಿಡುಗಡೆ ಆಗಿದೆ. ಕಲೆಕ್ಷನ್ ವಿಚಾರದಲ್ಲೂ ಉಪಾಧ್ಯಕ್ಷ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಮೊದಲ ಮೂರು ದಿನಗಳಲ್ಲಿ ಕೋಟಿ ಲೆಕ್ಕದಲ್ಲಿ ಕಲೆಕ್ಷನ್ ಬಾಚಿಕೊಂಡಿದ್ದಾನೆ ಉಪಾಧ್ಯಕ್ಷ.
ಚಿತ್ರತಂಡ ಅಧಿಕೃತ ಮಾಹಿತಿಯ ಪ್ರಕಾರ ಉಪಾಧ್ಯಕ್ಷ ಸಿನಿಮಾ ಮೂರು ದಿನಗಳಲ್ಲಿ 5 ಕೋಟಿ 27 ಲಕ್ಷ ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ. ಅದರಂತೆ ಈ ಸಿನಿಮಾಕ್ಕೆ ಚಿಕ್ಕಣ್ಣ ಸರಿಸುಮಾರು 1 ಕೋಟಿ ಸಂಭಾವನೆ ಪಡೆದಿದ್ದಾರೆ ಎಂಬ ಗಾಳಿ ಸುದ್ದಿ ಹರಡಿದೆ. ಹಾಸ್ಯನಟರಾಗಿ ಅವರು ಈ ಮೊದಲು ಒಂದು ದಿನಕ್ಕೆ ಒಂದುವರೆ ಲಕ್ಷದಿಂದ ಎರಡು ಲಕ್ಷ ಸಂಭಾವನೆ ಪಡೆಯುತ್ತಿದ್ದರಂತೆ ಆದರೆ ಈಗ ಹೀರೋ ಆಗಿ ಕಾಣಿಸಿಕೊಂಡಿರುವ ಹಿನ್ನೆಲೆ ತಮ್ಮ ಸಂಭಾವನೆ ಏರಿಸಿ ಕೊಂಡಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಈಗಾಗಲೇ ಸ್ಯಾಂಡಲ್‌ವುಡ್‌ನ ನಟ ಶಿವರಾಜ್‌ಕುಮಾರ್, ಧ್ರುವ ಸರ್ಜಾ, ಅಭಿಷೇಕ್ ಅಂಬರೀಶ್, ವಿನೋದ್ ಪ್ರಭಾಕರ್ ಸೇರಿ ಇನ್ನೂ ಹಲವು ಸೆಲೆಬ್ರಿಟಿಗಳು ಉಪಾಧ್ಯಕ್ಷ ಸಿನಿಮಾ ಕಣ್ತುಂಬಿಕೊಂಡು, ನಗಾಡಿದ್ದಾರೆ. ಈ ನಡುವೆ ನಟ ಯಶ್ ಮತ್ತು ರಾಧಿಕಾ ಸಹ ಚಿಕ್ಕಣ್ಣನ ಸಿನಿಮಾಕ್ಕೆ ಒಳ್ಳೆಯದಾಗಲಿ ಎಂದಿದ್ದಾರೆ.
ಇತ್ತೀಚಿಗಷ್ಟೇ ಚಿಕ್ಕಣ್ಣ ಮತ್ತು ಚಿತ್ರದ ನಾಯಕಿ ಮಲೈಕಾ ಇಬ್ಬರನ್ನೂ ಮನೆಗೆ ಕರೆಸಿಕೊಂಡ ಯಶ್, ಅವರ ಜತೆ ಕೂತು ಬೆಳಗಿನ ಉಪಹಾರ ಸೇವಿಸಿದ್ದಾರೆ. ಈ ಸಂಭ್ರಮದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲೂ ಹರಿದಾಡುತ್ತಿವೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.