ಗಣಪತಿ ದೇವಾಲಯಕ್ಕೆ 1 ಲಕ್ಷ ರೂಪಾಯಿ ಕಾಣಿಕೆ ಹಾಕಿದ ಯಡಿಯೂರಪ್ಪ, ಇದರ ಹಿಂದಿನ ಉದ್ದೇಶ ಏನು ಗೊತ್ತಾ

 

ಮತ್ತೊಮ್ಮೆ ಸುದ್ಧಿಯಲ್ಲಿದ್ದಾರೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನವರು. ಹೌದು ಮುಖ್ಯಮಂತ್ರಿ ಬಿ.ಎಸ್​​.ಯಡಿಯೂರಪ್ಪ ಅವರು ದೇವಾಲಯದ ಹುಂಡಿಗೆ ಒಂದು ಲಕ್ಷ ರೂಪಾಯಿ ಹಾಕಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ. 

ಸಾಮಾನ್ಯವಾಗಿ ತಿರುಪತಿ ತಿಮ್ಮಪ್ಪನ ಹುಂಡಿಗೆ ಕಂತೆ ಕಂತೆ ಹಣ ಹಾಕೋದನ್ನು ನಾವು ನೋಡಿದ್ದೇವೆ. ಆದರೆ ಇಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ಕುರುಡುಮಲೆ ವಿನಾಯಕ ದೇವಾಲಯದ ಹುಂಡಿಗೆ ಯಡಿಯೂರಪ್ಪ 2 ಕಂತೆ ಎಂದರೆ 1 ಲಕ್ಷ ರೂ. ಹಣವನ್ನು ಹಾಕಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.

ವಿನಾಯಕನ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಆಗಮಿಸಿದ ಯಡಿಯೂರಪ್ಪ, ದೇವರ ದರ್ಶನಕ್ಕೂ ಮುನ್ನ ದೇವಾಲಯದ ಪ್ರಾಂಗಣದಲ್ಲಿದ್ದ ಹುಂಡಿಗೆ 2 ಕಂತೆ ಹಣ ಹಾಕಿದರು. ಇದು ಸಾಕಷ್ಟು ಅಚ್ಚರಿಗೆ ಕಾರಣವಾಯಿತು. ಯಡಿಯೂರಪ್ಪ ಕಾಂಗ್ರೆಸ್ ವಿರುದ್ಧ ಜನಾಂದೋಲನಾ ಮಾಡಲು ನಗರದಲ್ಲಿ ಚಾಲನೆ ನೀಡಿದರು. 

ಗೌರಿ-ಗಣೇಶ ಹಬ್ಬದ ನಂತರ ರಾಜ್ಯಾದ್ಯಂತ ಪ್ರವಾಸ ಮಾಡಲು ಈಗಾಗಲೇ ಸಿದ್ಧತೆಗಳನ್ನು ಮಾಡಲಾಗಿದೆ. ಈ ಸಂದರ್ಭದಲ್ಲಿ ಮಾಜಿ ಸಿಎಂ ಸದಾನಂದ ಗೌಡ, ಮಾಜಿ ಸಚಿವ ಅಶ್ವಥ್ ನಾರಾಯಣ, ಗೋವಿಂದ ಕಾರಜೋಳ, ಈಶ್ವರಪ್ಪ ಮತ್ತಿತರರು ಭಾಗಿಯಾಗಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.