ಗಂಡನ ಮುಂದೆ 'ಕರಿಮಣಿ ಮಾಲೀಕ ನೀನಲ್ಲ ಎಂದ ಪತ್ನಿ' ತಕ್ಷಣ ನೇಣಿಗೆ ಶರಣಾದ ಪತಿರಾಯ
ಏನಿಲ್ಲಾ ಏನಿಲ್ಲಾ.. ಹಾಡು ಇದೀಗ ಭಾರೀ ಸದ್ದು ಮಾಡುತ್ತಿದೆ. ಅದೇ ಹಾಡಿನ ಕರಿಮಣಿ ಮಾಲೀಕ ನೀನಲ್ಲ.. ಎಂಬ ಸಾಲು ಕ್ರೇಜ್ ಹುಟ್ಟಿಸಿದೆ. ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರೇಮ ಅಭಿನಯದ ಉಪೇಂದ್ರ ಚಿತ್ರದ ಈ ಹಾಡು ಅರ್ಥಗರ್ಭಿತ ಸಾಹಿತ್ಯವಿದೆ. ಹಾಗಾಗಿ ಎಲ್ಲರ ಮೆಚ್ಚುಗೆ ಗಳಿಸಿದ ಹಾಡು ಇದಾಗಿದೆ.
ಸುಮಾರು ಎರಡು ದಶಕಗಳ ಹಿಂದಿನ ಸಿನಿಮಾದ ಹಾಡು ಇದಾಗಿದ್ದು ಇದೀಗ ಮತ್ತೆ ಈ ಹಾಡು ಸದ್ದೆಬ್ಬಿಸಿದೆ. ಈ ಹಾಡಿನ ತುಣುಕುಗಳನ್ನು ಬಳಸಿ ನೂರಾರು ರೀಲ್ಸ್’ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಕತ್ ಲೈಕ್ಸನ್ನೂ ಗಿಟ್ಟಿಸಿಕೊಳ್ಳುತ್ತಿದೆ. ಈ ತಿಂಗಳ ಉತ್ತರ ಕರ್ನಾಟಕದ ಹುಡುಗನೊಬ್ಬ ಮಾಡಿದ ರೀಲ್ಸ್ ಯಾವ ಪರಿ ವೈರಲ್ ಆಗಿದೆಯೆಂದರೆ, ಇತ್ತೀಚೆಗೆ ಅದರ ರಿಮಿಕ್ಸ್‌ನ ರಿಮಿಕ್ಸ್ ವರ್ಷಗಳೆಲ್ಲಾ ಬರಲು ಆರಂಭವಾಗಿದೆ.
ಇದರ ನಡುವೆ ಚಾಮರಾಜನಗರದಲ್ಲಿ ವಿವಾಹಿತ ಮಹಿಳೆಯೊಬ್ಬಳು, ಕರಿಮಣಿ ಮಾಲೀಕ ನೀನಲ್ಲ ಎನ್ನುವ ವೈರಲ್ ಹಾಡಿಗೆ ರೀಲ್ಸ್ ಮಾಡಿದ್ದಕ್ಕೆ, ಆಕೆಯ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಪತ್ನಿ ಮಾಡಿದ ರೀಲ್ಸ್‌ನಿಂದ ಮನನೊಂದಿದ್ದ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಪಿ.ಜಿ.ಪಾಳ್ಯ ಗ್ರಾಮದ 33 ವರ್ಷದ ಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಕುಮಾರ್ ಅವರ ಪರಿ ರೂಪಾ, ತನ್ನ ಸೋದರ ಮಾವ ಹಾಗೂ ಸಹೋದರಿಯ ಜೊತೆ ಕರಿಮಣಿ ಮಾಲೀಕ ನೀನಲ್ಲ ಹಾಡಿಗೆ ರೀಲ್ಸ್ ಮಾಡಿ ಪೋಸ್ಟ್ ಮಾಡಿದ್ದರು. ರೀಲ್ಸ್ ವಿಚಾರಕ್ಕೆ ದಂಪತಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದರಿಂದ ಮನನೊಂದಿದ್ದ ಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರೂಪಾ ಅವರ ರೀಲ್ಸ್‌ಅನ್ನು ನೋಡಿ ಕುಮಾರ್ ಅವರ ಗೆಳೆಯರು ಆತನನ್ನು ರೇಗಿಸಿದ್ದರು. ಅದಲ್ಲದೆ, ಅವರ ಕುಟುಂಬಸ್ಥರು ಕೂಡ ಇದೇ ವಿಚಾರವಾಗಿ ಆತನ ಕಾಲೆಳೆದಿದ್ದರು. ಇದರಿಂದ ಮನನೊಂದಿದ್ದ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.