ಹಿಂದಿ ಗೊತ್ತಿಲ್ಲದ ನೀವು ಅನ್ ಎಜುಕೇಟೆಡ್, ರೈಲಿನಲ್ಲಿ ಕನ್ನಡಿಗರಿಗೆ ಬಿಸಿ ಮುಟ್ಟಿಸಿದ ಟಿಸಿ
Oct 5, 2024, 11:56 IST
ಬೇರೆ ರಾಜ್ಯಗಳಿಂದ ಕರ್ನಾಟಕ ರಾಜ್ಯಕ್ಕೆ ಬಂದು ಕನ್ನಡವನ್ನೇ ಆಡಿಕೊಳ್ಳುತ್ತಾರೆ. ಹೌದು ಕನ್ನಡ ಕಲಿಯಲು ಆಗದೇ ಕನ್ನಡಕ್ಕೆ ಬೈಯುತ್ತಾರೆ.ಕರ್ನಾಟಕದಲ್ಲಿ ಕನ್ನಡರನ್ನು, ಕನ್ನಡ ಭಾಷೆಯನ್ನು ವಿರೋಧ ಮಾಡುವುದರಲ್ಲಿ ಹಾಗೂ ಹಿಂದಿ ಹೇರಿಕೆಯಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ಯಶವಂತಪುರದ ರೈಲ್ವೆ ಇಲಾಖೆಯ ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್ ಅಂದ್ರೆ ಟಿಟಿಇ ಒಬ್ಬ ಹಿಂದಿ ಗೊತ್ತಿಲ್ಲಾಂದ್ರೆ ನೀವು ಅನಕ್ಷರಸ್ಥರು ಎಂದು ಟೀಕಿಸಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇತ್ತೀಚಿಗಷ್ಟೇ ಉತ್ತರ ಭಾರತದ ಸುಗಂಧ ಶರ್ಮಾ ನಾವಿಲ್ಲದೆ ಬೆಂಗಳೂರು ಇಲ್ಲವೆಂದು ಹೇಳಿ ಎಲ್ಲರಿಂದ ಛೀಮಾರಿ ಹಾಕಿಸಿಕೊಂಡು ತನ್ನ ಕೆಲಸ ಬಿಟ್ಟು ಬೆಂಗಳೂರಿಂದ ಊರಿಗೆ ವಾಪಸ್ಸಾದ ಬೆನ್ನಲ್ಲೇ ಈ ಘಟನೆ ಬೆಳಕಿಗೆ ಬಂದಿದೆ. ಕಳೆದೊಂದು ವರ್ಷದಿಂದ ಹಿಂದಿ ವಿರೋಧಿ ಚಟುವಟಿಕೆಗಳು ಹೆಚ್ಚಾಗಿತ್ತಿವೆ.
ಉತ್ತರ ಭಾರತದಿಂದ ಕೆಲಸವನ್ನರಸಿ ಬೆಂಗಳೂರಿಗೆ ಬಂದು ಕನ್ನಡಿಗರಿಗೆ ನೀವು ಹಿಂದಿ ಕಲಿಯಬೇಕು ಎಂದು ಹಿಂದಿ ಹೇರಿಕೆ ಮಾಡುತ್ತಿದ್ದುದನ್ನು ವಿರೋಧಿಸಿ ಪ್ರಶ್ನೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದೀಗ ಕನ್ನಡ ಭಾಷೆಯನ್ನು ವಿರೋಧ ಮಾಡುವುದರಲ್ಲಿ ಹಾಗೂ ಹಿಂದಿ ಹೇರಿಕೆಯಲ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಯಶವಂತಪುರದ ರೈಲ್ವೆ ಇಲಾಖೆಯ ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್ ಹಿಂದಿ ಗೊತ್ತಿಲ್ಲಾಂದ್ರೆ ನೀವು ಅನಕ್ಷರಸ್ಥರು ಎಂದು ಟೀಕಿಸಿದ್ದಾರೆ.
ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೊತೆಗೆ, ವಿಡಿಯೋದಲ್ಲಿ ಪೋಸ್ಟ್‌ಗೆ ಹಿಂದಿ ಗೊತ್ತಲ್ಲ ಅಂದರೆ ಎಜುಕೇಟೆಡ್ ಅಲ್ವಂತೆ ಎಂದು ಬರೆದುಕೊಂಡಿದ್ದಾರೆ.
ಅಷ್ಟಕ್ಕೂ ನೀನು ಕರ್ನಾಟಕದಲ್ಲಿ ಇದ್ದೀಯ, ಕನ್ನಡ ಮಾತಾಡು ಎಂದು ಹೇಳಿದರೆ, ಟಿಟಿ ಆಗೊಲ್ಲ ನೀನೆ ಹಿಂದಿ ಮಾತಾಡು ಎಂದಿದ್ದಾನೆ. ಹಾಗಾದರೆ ನನಗೆ ಹಿಂದಿ ಮಾತಾಡು ಎಂದು ನೀನು ಯಾರು ಹೇಳುವುದಕ್ಕೆ? ಇದು ಕರ್ನಾಟಕ, ಕನ್ನಡ ಮಾತಾಡು. ನೀನು ಹಿಂದಿ ಮಾತನಾಡಬೇಕು ಎಂದರೆ ನಿಮ್ಮ ಸ್ಟೇಟ್‌ಗೆ ಹೋಗಿ ಮಾತಾಡು' ಎಂದು ಹೇಳಿದ್ದಾರೆ.ಟಿಟಿಇ 'ಇದು ನಿಮ್ಮ ಕರ್ನಾಟಕ ಏನೂ ಅಲ್ಲ.. ಇದು ಇಂಡಿಯಾ.. ಇಂಡಿಯಾ' ನನ್ನ ಮುಂದೆ ನೀನು ಅನಕ್ಷರಸ್ಥನ ರೀತಿ ಮಾತನಾಡಬೇಡ ಎಂದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.