ಮದ್ವೆಯಾಗಿ 6 ವಷ೯ ಆದರೂ ಇವರು ಮಕ್ಕಳು ಮಾಡಲಿಲ್ಲ ಯಾಕೆ, ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಾ
Oct 17, 2024, 08:39 IST
ಕನ್ನಡದ ಮನಸಾರೆ ಬೆಡಗಿ ಐಂದ್ರಿತಾ ರೇ ಕಳೆದ ಕೆಲ ದಿನಗಳಿಂದ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿಲ್ಲ.ಹಾಗೆಂದು ಮದುವೆ ಆದನಂತರ ಚಿತ್ರರಂಗ ಬಿಟ್ಟಿದ್ದಾರೆ ಅಂತೇನಿಲ್ಲ.ಸ್ಯಾಂಡಲ್‌ವುಡ್ ನ ಕ್ಯೂಟ್ ದಂಪತಿ ದಿಗಂತ್ ಹಾಗೂ ಐಂದ್ರಿತಾ ರೇ ಪೋಷಕರಾಗುತ್ತಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಹರಿದಾಡುತ್ತಿದೆ. ಈ ಬಗ್ಗೆ ನಟಿ ಐಂದ್ರಿತಾ ರೇ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ನಾನು-ದಿಗಂತ್ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ ನಾನು ಮತ್ತು ದಿಗಂತ್ ಈಗಾಗಲೇ ಪೋಷಕರಾಗಿದ್ದೇವೆ' ಎಂದಿದ್ದಾರೆ ಐಂದ್ರಿತಾ ರೇ. ಹಾಗೆಂದ ಮಾತ್ರಕ್ಕೆ ಈ ದಂಪತಿ ಮಕ್ಕಳನ್ನು ಹೊಂದಿದ್ದಾರೆ ಎಂದರ್ಥವಲ್ಲ.ನಾನು ದಿಗಂತ್ ಎರಡು ನಾಯಿಗಳನ್ನು ನಮ್ಮ ಮಕ್ಕಳಂತೆಯೇ ಸಾಕುತ್ತಿದ್ದೇವೆ. ಡಾಗ್ ಪೇರೆಂಟ್ಸ್ ಇನ್ನು ಮುಂದೆಯೂ ಹೀಗೆ ಇರಬೇಕು ಎಂದುಕೊಂಡಿದ್ದೇವೆ' ಎಂದಿದ್ದಾರೆ ನಟಿ ಐಂದ್ರಿತಾ ರೇ.
<a href=https://youtube.com/embed/QLKnqrtArDI?autoplay=1&mute=1><img src=https://img.youtube.com/vi/QLKnqrtArDI/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಅಷ್ಟಕ್ಕೂ ಇತ್ತೀಚೆಗೆ ನಟ ದಿಗಂತ್ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಸಂದರ್ಶಕಿಯು ಮಗುವಿನ ನಿರೀಕ್ಷೆಯಲ್ಲಿದ್ದೀರಾ? ಎಂದು ಕೇಳಿದಾಗ, 'ಸುಮ್ಮನಿರಿ ಅದರ ಬಗ್ಗೆ ಮಾತನಾಡಬೇಡಿ' ಎಂದು ತಮಾಷೆಯಾಗಿ ಸನ್ನೆ ಮಾಡಿದ್ದರು. ಇದೇ ಕಾರಣಕ್ಕೆ ದಿಗಂತ್-ಐಂದ್ರಿತಾ ಮಗುವಿನ ನಿರೀಕ್ಷೆಯಲ್ಲಿರಬಹುದು ಎನ್ನಲಾಗಿತ್ತು.2018 ರ ಡಿಸೆಂಬರ್ ತಿಂಗಳಲ್ಲಿ ಈ ಯುವ ಜೋಡಿ ವಿವಾಹವಾಗಿದ್ದರು.
ಇಬ್ಬರೂ ಸಹ ಸಿನಿಮಾಗಳಲ್ಲಿ ನಟಿಸುವುದನ್ನು ಮುಂದುವರೆಸಿರುವುದರ ಜೊತೆಗೆ ಹಲವಾರು ಸಾಹಸಗಳನ್ನು ಒಟ್ಟಿಗೆ ಮಾಡುತ್ತಿರುತ್ತಾರೆ. ರಿವರ್ ರ್ಯಾಫ್ಟಿಂಗ್, ಸೈಕ್ಲಿಂಗ್, ವ್ಯಾಯಾಮ, ಕಸರತ್ತು, ಸರ್ಫಿಂಗ್ ಹೀಗೆ ಹಲವು ಸಾಹಸ ಕ್ರೀಡೆಗಳಲ್ಲಿ ಈ ಜೋಡಿ ತೊಡಗಿಕೊಂಡಿದ್ದಾರೆ. ಆದರೆ ಇಬ್ಬರಿಗೂ ಮಕ್ಕಳ ಬಗೆಗಿನ ಆಸೆ ಆಸಕ್ತಿ ಇಲ್ಲದಿರೋ ಕಾರಣದಿಂದಾಗಿ ಇವರಿಬ್ಬರೂ ಮಕ್ಕಳ ಬಯಸುತ್ತಿಲ್ಲ ಎನ್ನಲಾಗುತ್ತಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.