ಹೊಸ ಜೀವನಕ್ಕೆ ಕಾಲಿಟ್ಟ ಯೂಟ್ಯೂಬರ್‌ ಸುದಶ೯ನ್ ಭಟ್, ಕನ್ನಡಿಗರಿಗೆ ಮಹಾ ಸಂಭ್ರಮ

 
 ಹವ್ಯಾಸಕ್ಕೆಂದು ಶುರುವಾದ ಕೆಲವು ಯೂಟ್ಯೂಬ್ ಚಾನಲ್ ಬದುಕನ್ನೇ ಬದಲಿಸಿದ ಭಟ್ ಎನ್ ಭಟ್ ಯೂಟ್ಯೂಬ್ ಚಾನೆಲ್ ಮೂಲಕ ಕರಾವಳಿಯ ಅಡುಗೆಗಳ ಬಗ್ಗೆ ತಮ್ಮ ವಿಭಿನ್ನ ನಿರೂಪಣೆ ಮಾಡುತ್ತಾ, ಅಡುಗೆ ಮಾಡುತ್ತಿದ್ದ ವಕೀಲ ಸುದರ್ಶನ್ ಭಟ್ ಬೆದ್ರಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 
ವೃತ್ತಿಯಲ್ಲಿ ವಕೀಲರಾಗಿರುವ ಸುದರ್ಶನ್ ಭಟ್ , ಪ್ರವೃತ್ತಿಯಲ್ಲಿ ಒಳ್ಳೆಯ ಅಡುಗೆ ಭಟ್ಟರು ಆಗಿದ್ರು. ಇಂದು ಸುದರ್ಶನ್ ಪುತ್ತೂರು ಹವ್ಯಾಕ ಸಭಾ ಭವನದಲ್ಲಿ ಕುಟುಂಬದವರ ಸಮ್ಮುಖದಲ್ಲಿ ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಕೃತಿ ಎನ್ನುವವರ ಜೊತೆ ಸಪ್ತಪದಿ ತುಳಿದಿದ್ದಾರೆ.  
 ಯೂಟ್ಯೂಬ್ ವಿಡಿಯೋಗಳಿಂದ ಮನಸೆಳೆದ ಸುದರ್ಶನ್ ನಿಶ್ಚಿತಾರ್ಥ ಆಗಸ್ಟ್ ತಿಂಗಳಿನಲ್ಲಿ ನಡೆದಿತ್ತು. ಇತ್ತೀಚೆಗೆ ಇವರಿಬ್ಬರ ವಿಭಿನ್ನವಾದ ಪ್ರೀ ವೆಡ್ಡಿಂಗ್ ಫೋಟೊ ಶೂಟ್ ಭಾರಿ ಸದ್ದು ಮಾಡಿತ್ತು. ಈ ಜನುಮವೇ ದೊರೆಕಿದೆ ರುಚಿ ಸವಿಯಲು ಹಾಡಿಗೆ ಇಬ್ಬರು ಕುಚ್ಚಿಲಕ್ಕಿ ಗಂಜಿ ಮಾಡಿ, ಬಾಳೆ ಹೂವಿನ ಚಟ್ನಿ ಮಾಡಿ ತಿನ್ನುವ ವಿಡಿಯೋ ಸಖತ್ ವೈರಲ್ ಆಗಿತ್ತು. 
ಅಷ್ಟೇ ಅಲ್ಲ, ಇವರ ಪತ್ನಿ ಶಿಕ್ಷಕಿಯಾಗಿರೋದರಿಂದ ಶಾಲೆಯಲ್ಲಿಯೂ ಒಂದು ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಿದ್ದು, ಆ ಮೂಲಕ ಮದುವೆ ಡೇಟ್ ರಿವೀಲ್ ಮಾಡಿದ್ದರು. ಆ ವಿಡಿಯೋ ಕೂಡ ಜನರಿಗೆ ಇಷ್ಟವಾಗಿತ್ತು. ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿಯೇ ಅಡುಗೆ ಮಾಡಿ ತೋರಿಸುವ ಸುದರ್ಶನ್ ಅವರ ಪ್ರಿ ವೆಡ್ಡಿಂಗ್ ಶೂಟ್ ಗಳು ಸಹ ಗ್ರಾಮೀಣ ಪ್ರದೇಶಗಳಲ್ಲಿ ನಡೆದಿದ್ದು, ಜನರಿಗೆ ಸಖತ್ ಇಷ್ಟವಾಗಿತ್ತು. ಹಲವಾರು ಮಂದಿ ಇವರಿಗೆ ವೈವಾಹಿಕ ಜೀವನ ಚೆನ್ನಾಗಿರಲಿ ಎಂದು ಹಾರೈಸಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.