ಮದುವೆಯಾಗಿ ವರ್ಷ ಕಳೆದರೂ ಸಂಸಾರದ ರುಚಿ ಸಿಗಲಿಲ್ಲ, ಡಿವೋರ್ಸ್ ಗೆ ಕಾರಣ ಹೇಳಿಕೊಂಡ ಯಜುವೇಂದ್ರ ಚಹಲ್
Mar 23, 2025, 21:54 IST

ಈಗ ಎಲ್ಲೆಡೆಯೂ ವಿಚ್ಛೇದನದ್ದೇ ಸುದ್ದಿ . ಹೌದು ಭಾರತದ ಕ್ರಿಕೆಟ್ ಪ್ರಿಯರಿಗೆ ಶಾಕ್ ಕೊಟ್ಟಿದ್ದ ಕ್ರಿಕೆಟಿಗ ಯುಜುವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ಜೋಡಿ ವಿಚ್ಛೇದನ ಈಗ ಅಧಿಕೃತವಾಗಿದೆ. ಈ ಜೋಡಿ ಕಾನೂನಿನ ಮೂಲಕ ವಿಚ್ಛೇದನ ಪಡೆದುಕೊಂಡು ದೂರಾಗಿದ್ದಾರೆ. 2020ರಲ್ಲಿ ವಿವಾಹವಾದ ಯುಜುವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ಜೋಡಿ 2025ರ ಫೆಬ್ರವರಿ 5ರಂದು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಜಂಟಿ ಅರ್ಜಿ ಸಲ್ಲಿಸಿದ್ದರು.
ಎರಡು ದಿನಗಳ ಹಿಂದೆ ಮುಂಬೈನ ಬಾಂದ್ರಾ ಕೌಟುಂಬಿಕ ನ್ಯಾಯಾಲಯಕ್ಕೆ ಇಬ್ಬರೂ ತಮ್ಮ ವಿಚ್ಛೇದನದ ಅಂತಿಮ ಪ್ರಕ್ರಿಯೆಗೆ ಹಾಜರಾಗಿದ್ದು, ಇಬ್ಬರೂ ಬೇರೆ ಬೇರೆ ಆಗಲು ನ್ಯಾಯಾಲಯ ಅಧೀಕೃತವಾಗಿ ಅನುಮತಿ ನೀಡಿದೆ. ಯುಜುವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ಜೋಡಿ ವಿಚ್ಛೇದನ ಅಧಿಕೃತವಾಗುತ್ತಿದ್ದಂತೆ ಈ ಜೋಡಿ ಕುರಿತು ಕೆಲವು ಶಾಕಿಂಗ್ ವಿಚಾರಗಳು ಹೊರಬಿದ್ದಿದೆ.
2020ರ ಡಿಸೆಂಬರ್ನಲ್ಲಿ ಮದುವೆಯಾಗಿದ್ದ ಈ ಜೋಡಿ 2022ರ ಜೂನ್ ಅಷ್ಟರಲ್ಲಿ ದೂರಾಗಿದ್ದಾರೆ. ಚಾಹಲ್ ಹಾಗೂ ಧನಶ್ರೀ ಮದುವೆಯಾಗಿ ಕೇವಲ 19 ತಿಂಗಳಿಗೆ ದೂರ ಆಗಿದ್ದಾರೆ ಎಂದು ವಿಚ್ಛೇದನದ ಅರ್ಜಿಯಲ್ಲಿ ಉಲ್ಲೇಖ ಮಾಡಲಾಗಿದೆ. ಇದರಿಂದ ಯುಜುವೇಂದ್ರ ಚಹಲ್ ಅಭಿಮಾನಿಗಳಿಗೆ ಶಾಕ್ ಆಗಿದ್ದು, ಈ ಜೋಡಿ ಪ್ರೀತಿ ಹಾಗೂ ಮದುವೆಯ ನಾಟಕವಾಡಿದರಾ ಎನ್ನುವ ಪ್ರಶ್ನೆ ಮೂಡಿದೆ.
ಆದರೆ ಚಹಲ್ ಮತ್ತು ಧನಶ್ರೀ ಜೋಡಿ ಆರು ತಿಂಗಳ ಕಾಯುವಿಕೆ ನಮಗೆ ಅಗತ್ಯವಿಲ್ಲ ಎಂದು ಮತ್ತೆ ಅರ್ಜಿ ಸಲ್ಲಿಸಿದ್ದರು ಎನ್ನಲಾಗಿದೆ. ಇದೀಗ ಈ ಜೋಡಿಯ ವಿಚ್ಛೇದನ ಅಧಿಕೃತವಾಗಿದ್ದು, ಇಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ದೂರಾಗಿದ್ದಾರೆ. ಇನ್ನು ಧನಶ್ರೀ ವರ್ಮಾಗೆ 4.75 ಕೋಟಿ ರೂಪಾಯಿ ಜೀವನಾಂಶ ನೀಡಲು ಯುಜುವೇಂದ್ರ ಚಹಲ್ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.