ಸರಿಗಮಪ ಫಿನಾಲೆಯಲ್ಲಿ ಶಿವಾನಿ ಹಾಡು ಕೇಳಿ ಫಿದಾ ಆದ ಕರ್ನಾಟಕದ ಕೋಟ್ಯಾಂತರ ಜನ
Jun 12, 2025, 12:45 IST

ಕನ್ನಡದ ಟಿ.ವಿ ಇತಿಹಾಸದಲ್ಲಿ ಅತೀ ಹೆಚ್ಚು ಜನಮನ್ನಣೆಗಳಿಸಿದ ಸಿಂಗಿಂಗ್ ರಿಯಾಲಿಟಿ ಶೋ ಸ ರಿ ಗ ಮ ಪ 21ನೇ ಸೀಸನ್ಗೆ ತೆರೆಬಿದ್ದಿದೆ. ಈ ಸೀಸನ್‌ನ ವಿನ್ನರ್ ಶಿವಾನಿ ಸ್ವಾಮಿ. ಬಡ ಕುಟುಂಬದಲ್ಲಿ ಬೆಳೆದುಬಂದ ಶಿವಾನಿ ಅವರು ಕಷ್ಟದಿಂದ ಮೇಲೆ ಬಂದವರು. ದೇವರ ಪದ ಹಾಡಿಕೊಂಡಿದ್ದ ಶಿವಾನಿಯ ಪ್ರತಿಭೆಯನ್ನು ಗುರುತಿಸಿ ಝೀ ಕನ್ನಡ ಸರಿಗಮಪ ಶೋಗೆ ಅವಕಾಶ ನೀಡಿತು. ಈ ಅವಕಾಶವನ್ನು ಅವರು ಉತ್ತಮವಾಗಿ ಬಳಸಿಕೊಂಡು ವಿನ್ನರ್ ಆಗಿದ್ದಾರೆ.
ಅತೀ ಹೆಚ್ಚು ಜನಮನ್ನಣೆಗಳಿಸಿದ ಸಿಂಗಿಂಗ್ ರಿಯಾಲಿಟಿ ಶೋ ಸ ರಿ ಗ ಮ ಪ 21ನೇ ಸೀಸನ್ವಿನ್ನರ್ ಪಟ್ಟವು ಬೀದರ್‌ನ ಶಿವಾನಿ ಸ್ವಾಮಿಗೆ ಒಲಿದಿದೆ. ಮೊದಲ ದಿನದಿಂದ ಕೊನೆಯವರೆಗೂ ಶಿವಾನಿ ಅವರು ಅದ್ಭುತವಾಗಿ ಹಾಡಿದ್ದರು. ಶಿವಾನಿ ಸ್ವಾಮಿಗೆ ಹಲವು ಆಕರ್ಷಕ ಬಹುಮಾನ ಸಿಕ್ಕಿದೆ. ಶಿವಾನಿಗೆ ಬರೋಬ್ಬರಿ 15 ಲಕ್ಷ ರೂ. ಮೌಲ್ಯದ ಚಿನ್ನದ ನಾಣ್ಯ ಮತ್ತು ವೈಟ್ ಗೋಲ್ಡ್ ಕಡೆಯಿಂದ ಗಿಫ್ಟ್ ಹ್ಯಾಂಪರ್ ಕೂಡ ಸಿಕ್ಕಿದೆ.
<a href=https://youtube.com/embed/Stjxq-BpWbM?autoplay=1&mute=1><img src=https://img.youtube.com/vi/Stjxq-BpWbM/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಬೀದರ್ ಪ್ರತಿಭೆ ಶಿವಾನಿ ಶಿವದಾಸ್ ಅವರು ಹಾಡಿದ ಶಿವ ಶಿವಾ ಗಾಯನಕ್ಕೆ ಇಡೀ ರಾಜ್ಯದ ಜನತೆಯೇ ತಲೆದೂಗಿದ್ದು, ಗಿಫ್ಟ್‌ಗಳ ಜೊತೆಗೆ ಬಹಳ ಮುಖ್ಯವಾದ ಸರಿಗಮಪ ವಿನ್ನಿಂಗ್ ಟ್ರೋಫಿಯನ್ನು ಶಿವಾನಿ ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೇ ಶಿವಾನಿಯೂ ಜೊತೆಗೆ ಪರ್ಫಾಮರ್ ಆಫ್ ದಿ ಸೀಸನ್ ಪ್ರಶಸ್ತಿಯು ಸಿಕ್ಕಿದೆ. ಸರಿಗಮಪ ಜೊತೆ ಮಾರುತಿ ಸುಜುಕಿ ಸಂಸ್ಥೆ ಅಸೋಸಿಯೆಟ್ ಆಗಿದೆ. ಹೀಗಾಗಿ ಕಂಪನಿಯ ಕಾರು ಶಿವಾನಿ ಅವರಿಗೆ ಸಿಕ್ಕಿದೆ.
ಫಿನಾಲೆಯಲ್ಲಿ ಒಟ್ಟು ಆರು ಮಂದಿ ಇದ್ದರು. ಶಿವಾನಿ, ರಶ್ಮಿ, ಬಾಳು ಬೆಳಗುಂದಿ, ಆರಾಧ್ಯಾ ರಾವ್, ದ್ಯಾಮೇಶ್ ಹಾಗೂ ಅಮೋಘ ವರ್ಷ ಕಾಲಿಟ್ಟಿದ್ದರು. ಈ ಆರು ಮಂದಿಯಲ್ಲಿ ಶಿವಾನಿ ಅವರಿಗೆ ವಿನ್ನರ್ ಪಟ್ಟ ಸಿಕ್ಕಿದ್ದು, ಸರಿಗಮಪ ಸೀಸನ್ 21 ಕಾರ್ಯಕ್ರಮದಲ್ಲಿ ಟಾಪ್ 3 ಹಂತಕ್ಕೆ ಹೋದ ಮೂವರೂ ಮಹಿಳಾ ಸ್ಪರ್ಧಿಗಳೇ ಅನ್ನೋದು ವಿಶೇಷವಾಗಿದೆ.
ಅಲ್ಲದೇ ಮೊದಲ ರನ್ನರ್ ಅಪ್ ಆಗಿರುವ ಉಡುಪಿಯ ಆರಾಧ್ಯ ರಾವ್‌ಗೆ 10 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗಿದೆ. ಅಲ್ಲದೇ ಮೈಸೂರಿನ ರಶ್ಮಿ ಅವರು ಸೆಕೆಂಡ್ ರನ್ನರ್ ಅಪ್ ಆಗಿದ್ದು, ಅವರಿಗೆ 5 ಲಕ್ಷ ರೂ. ನಗದು ಬಹುಮಾನ ಸಿಕ್ಕಿದೆ. ಇನ್ನೂ ವಿಶೇಷವಾಗಿ ಬಾಳು ಬೆಳಗುಂದಿಗೆ 5 ಲಕ್ಷ ರೂ., ದ್ಯಾಮೇಶ 3 ಲಕ್ಷ ರೂ. ಮತ್ತು ಅಮೋಘ ವರ್ಷ 1 ಲಕ್ಷ ರೂ. ನಗದು ಬಹುಮಾನ ನೀಡಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.