ನನ್ನ ಜೀವನ ದರ್ಶನ್ ಅವರಿಗಾಗಿ, ನನ್ನ ಬೆಳವಣಿಗೆಗೆ ಮುಖ್ಯ ಕಾರಣ ದರ್ಶನ್ ಎಂದ ರಚಿತಾ ರಾಮ್
Mar 13, 2025, 15:23 IST
|

ಕೆಲವೊಂದು ಸಲ ನಟ ನಟಿಯರ ಸಿನೆಮಾ ಡೈಲಾಗ್, ಹೆಸರೇ ಸಖತ್ ವೈರಲ್ ಆಗುತ್ತದೆ ಅದೇ ರೀತಿ ಬುಲ್ ಬುಲ್ ನಟಿ ಎಂದೇ ಸ್ಯಾಂಡಲ್ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಪ್ರಸಿದ್ಧಿ ಪಡೆದಿದ್ದಾರೆ. ರಚಿತಾ ರಾಮ್ ಗೆ ಈ ಬುಲ್ ಬುಲ್ ಹೆಸರು ತುಂಬಾ ಇಷ್ಟ. ಝೀ ಕನ್ನಡ ರಿಯಾಲಿಟಿ ಶೋನಲ್ಲಿ ಈ ಬಗ್ಗೆ ರಚಿತಾ ರಾಮ್ ಮನ ಬಿಚ್ಚಿ ಮಾತನಾಡಿದ್ದಾರೆ. ನನಗೆ ಬುಲ್ ಬುಲ್ ಅಂತ ಕರೆದ್ರೆ ಖುಷಿಯಾಗುತ್ತೆ ಎಂದು ರಚಿತಾ ರಾಮ್ ಹೇಳಿದ್ದಾರೆ.
ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್ 2 ನ ಜಡ್ಜ್ ಆಗಿರುವ ರಚಿತಾ ರಾಮ್, ಬುಲ್ ಬುಲ್ ಸಿನಿಮಾ ಹಾಗೂ ಅದ್ರ ಬಗ್ಗೆ ದರ್ಶನ್ ಅಭಿಪ್ರಾಯ, ಬುಲ್ ಬುಲ್ ಹೆಸರಿನ ಮೇಲೆ ತಮಗಿರುವ ಪ್ರೀತಿಯನ್ನು ಹೇಳಿಕೊಂಡಿದ್ದಾರೆ. ಬುಲ್ ಬುಲ್ ಸಿನಿಮಾ ಮೇ. 10, 2013ರಲ್ಲಿ ತೆರೆಗೆ ಬಂದಿತ್ತು. ಇದ್ರಲ್ಲಿ ದರ್ಶನ್, ಅಂಬರೀಷ್, ರಚಿತಾ ರಾಮ್ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದರು. ರೋಮ್ಯಾಂಟಿಕ್ ಕಾಮಿಡಿ ಚಿತ್ರವನ್ನು ಎಂ.ಡಿ. ಶ್ರೀಧರ್ ನಿರ್ದೇಶಿಸಿದ್ದರು. 2013ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ್ದ ಚಿತ್ರ ಬುಲ್ ಬುಲ್.
ಅರಸಿ ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಬಂದಿದ್ದ ರಚಿತಾ ರಾಮ್ ಅವರ ಮೊದಲ ಸಿನಿಮಾ ಬುಲ್ ಬುಲ್. ಮೊದಲ ಚಿತ್ರದಲ್ಲೇ ಹೆಸರು ಮಾಡಿದ್ದ ರಚಿತಾ ರಾಮ್ ನಂತ್ರ ತಿರುಗಿ ನೋಡ್ಲಿಲ್ಲ. ಸಿನಿಮಾದಲ್ಲಿ ದರ್ಶನ್ ಜೋಡಿಯಾಗಿ ರಚಿತಾ ರಾಮ್ ಕಾಣಿಸಿಕೊಂಡಿದ್ದರು. ಭರ್ಜರಿ ಬ್ಯಾಜ್ಯುಲರ್ ಸೀಸನ್ 2ನಲ್ಲಿ ರಕ್ಷಕ್ ಬುಲೆಟ್, ದರ್ಶನ್ ಬುಲ್ ಬುಲ್ ಚಿತ್ರದ ಸ್ಟೈಲ್ ಕಾಪಿ ಮಾಡಿದ್ದಾರೆ. ರಕ್ಷಕ್ ಬುಲೆಟ್ ಗೆ ರಮೋಲಾ ಸಾಥ್ ನೀಡಿದ್ದರು. ಇದನ್ನು ನೋಡಿ ರಚಿತಾ ರಾಮ್ ಖುಷಿಯಾಗಿದ್ದಲ್ಲದೆ, ಅದ್ಭುತ ನಟನೆಗೆ ಬೆನ್ನು ತಟ್ಟಿದ್ದಾರೆ. ಸಿನಿಮಾ ನೋಡಿದಂಗೆ ಆಯ್ತು ಎನ್ನುತ್ತಲೇ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ದರ್ಶನ್ ಸೇರಿದಂತೆ ಬುಲ್ ಬುಲ್ ಸಿನಿಮಾ ತಂಡಕ್ಕೆ ಧನ್ಯವಾದ ಹೇಳಿದ ರಚಿತಾ ರಾಮ್, ದರ್ಶನ್ ಎಲ್ಲ ಸಿನಿಮಾಗಳೂ ಹೀರೋ ಬೇಸ್ ಹೆಸರುಗಳಿರುತ್ತವೆ. ಆದ್ರೆ ಫಸ್ಟ್ ಟೈಂ ಹಿರೋಯಿನ್ ಬೇಸ್ ಟೈಟಲನ್ನು ಬುಲ್ ಬುಲ್ ಗೆ ಇಡಲಾಗಿತ್ತು. ಅದನ್ನು ದರ್ಶನ್ ಕೂಡ ಹೇಳಿದ್ದರು ಎಂದು ರಚಿತಾ ರಾಮ್ ಹೇಳಿಕೊಂಡಿದ್ದಾರೆ. ಬುಲ್ ಬುಲ್ ಹೆಸರಿನಿಂದಲೇ ನಾನು ಪ್ರಸಿದ್ಧಿ ಪಡೆದಿದ್ದೇನೆ. ನನ್ನನ್ನು ಸಿನಿಮಾ ಬಂದ ಕೆಲ ವರ್ಷ ಮಾತ್ರವಲ್ಲ ಈಗ್ಲೂ ಬುಲ್ ಬುಲ್ ಅಂತಾನೆ ಜನ ಕರೆಯುತ್ತಾರೆ. ನಾನು ಇರೋವರೆಗೂ, ನನ್ನ ಉಸಿರಿರುವವರೆಗೂ ನನ್ನನ್ನು ಬುಲ್ ಬುಲ್ ಅಂತ ಕರೆದ್ರೆ ನನಗೆ ಖುಷಿ ಎಂದು ರಚಿತಾ ಇದೇ ವೇಳೆ ಹೇಳಿದ್ದಾರೆ. ದರ್ಶನ್, ದರ್ಶನ್ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ರಚಿತಾ ರಾಮ್, ನಮಸ್ಕಾರ ಮಾಡಿ ತಮ್ಮ ಧನ್ಯವಾದ ತಿಳಿಸಿದ್ದಾರೆ. ಈ ವೇಳೆ ರಚಿತಾ ಭಾವುಕರಾಗಿದ್ದನ್ನು ನೋಡ್ಬಹುದು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.