ಯುವತಿ ಮನೆಯವರ ದಿಡೀರ್ ಎಂಟ್ರಿ, ಕಬ್ಬಿಣದ ಟ್ರಂಕ್ ನಲ್ಲಿ ಬಾಯ್ ಫ್ರೆಂಡ್ ಪತ್ತೆ
Oct 21, 2024, 16:06 IST
|
ನಿಜವಾದ ಪ್ರೀತಿಯನ್ನು ನಿಖರವಾಗಿ ವ್ಯಾಖ್ಯಾನಿಸುವುದು ಕಷ್ಟ. ನಮ್ಮ ಜೊತೆಯಲ್ಲಿ ಇರುವವರದ್ದು ನಿಜವಾದ ಪ್ರೀತಿ ಇಲ್ಲ, ಎಂಬುದನ್ನು ಅವರ ನಡವಳಿಕೆಯಿಂದ ನಿರ್ಣಯಿಸಬಹುದು. ನಿಜವಾದ ಪ್ರೀತಿ ಶುದ್ಧವಾಗಿರುತ್ತೆ. ಅದರಲ್ಲಿ ಮುಗ್ಧ ಸಂಬಂಧ ಇರುತ್ತದೆ. ಭಾವನೆಗಳು ಮಿಶ್ರವಾಗಿರುತ್ತವೆ. ನಕಾರಾತ್ಮಕ ಆಲೋಚನೆಗಳು ಮತ್ತು ಮಾತುಗಳು ತುಂಬಾ ಕಡಿಮೆ ಇರುತ್ತವೆ.
ಅವರ ನಡುವಿನ ಬಾಂಧವ್ಯ ತುಂಬಾ ಪ್ರೀತಿಯಿಂದ ತುಂಬಿರುತ್ತದೆ. ಅವರ ಆತ್ಮ, ಮನಸ್ಸು, ದೇಹ ಹೀಗೆ ಎಲ್ಲವೂ ನಿಸ್ವಾರ್ಥವಾಗಿ ಉಳಿಯುತ್ತವೆ. ಅದು ನಿಜವಾದ ಪ್ರೀತಿ. ನಿಜವಾದ ಪ್ರೀತಿ ಎಂದರೆ ತನ್ನ ಸಂಗಾತಿಯೊಂದಿಗೆ ಕಳಂಕರಹಿತ ಮತ್ತು ಕಳಂಕರಹಿತವಾಗಿ ಬದುಕುವುದು. ಆದ್ರೆ ಈಗೆಲ್ಲ ಹಾಗಲ್ಲ ದೇಹಕ್ಕಾಗಿಯೇ ಪ್ರೀತಿ ಎನ್ನುವಂತಾಗಿದೆ.
ಅಷ್ಟಕ್ಕೂ ಎಷ್ಟೆಲ್ಲ ಹೇಳಿದ್ದು ಯಾಕೆಂದರೆ ಇಲ್ಲೊಬ್ಬ ಯುವತಿ ಮನೆಯಲ್ಲಿ ಯಾರಿಲ್ಲ ಎಂದು ಹೇಳಿ ಅವಳ ಲವ್ವರ್ ಅನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಆದ್ರೆ ಅದನ್ನು ನೋಡಿದ ಯಾರೋ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ವಾಪಸ್ಸಾದ ಮನೆಯವರಿಗೆ ಯುವತಿಯ ಹೊರತಾಗಿ ಮನೆಯಲ್ಲಿ ಮತ್ಯಾರು ಕಾಣಸಿಗಲಿಲ್ಲ.
ಆದರೆ ಮನೆಯಲ್ಲಿ ಬಟ್ಟೆಗಳು ಚೆಲ್ಲಾಪಿಲ್ಲಿ ಆಗಿ ಬಿದ್ದಿದ್ದವು ಅದನ್ನು ಕಂಡ ಮನೆಯವರ ದೃಷ್ಟಿ ಅಲ್ಲಿದ್ದ ಪುಟ್ಟ ಟ್ರಂಕ್ ಅತ್ತ ಹೊರಳಿದೆ. ಅದನ್ನು ತೆಗೆದು ತೋರಿಸಲು ಹೇಳಿದರೆ ಆ ಯುವತಿ ನಕಾರ ತೋರಿದ್ದಾಳೆ. ಅಲ್ಲಿಗೆ ಮನೆಯವರೆಲ್ಲ ಸೇರಿ ಆ ಟ್ರಂಕ್ ತೆಗೆದರೆ ಆದರಲ್ಲಿ ಯುವತಿಯ ಲವ್ವರ್ ಕೂತಿದ್ದ. ಅಲ್ಲಿಂದ ಮನೆಯವರು ಯುವತಿಯನ್ನು ಬಾಯಿಗೆ ಬಂದಂತೆ ಬೈದು ಯುವಕನನ್ನು ಮನೆಗೆ ವಾಪಸ್ಸು ಕಳಿಸಿದ್ದಾರೆ. ಪುಟ್ಟ ಟ್ರಂಕ್ ಅಲ್ಲಿ ಲವ್ವರ್ ಅಡಗಿಸಿಟ್ಟ ಯುವತಿಯ ಪ್ರಯತ್ನಕ್ಕೆ ಕೆಲವರು ಸೂಪರ್ ಅಂದ್ರೆ ಇನ್ನು ಕೆಲವರು ಮದುವೆಯ ಮೊದಲೇ ನಿಮಗ್ಯಾಕೆ ಬೇಕಿತ್ತು ಅಂದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.