ವರ್ತೂರು ಸಂತೋಷ್ ಬಗ್ಗೆ ಸ್ಫೋ.ಟಕ ಮಾಹಿತಿ ಬಿಚ್ಚಿಟ್ಟ ಪತ್ನಿ, ಪ್ರೇಕ್ಷಕರು ಶಾ.ಕ್

 | 
ರಪ

ವರ್ತೂರು ಸಂತೋಷ್‌ ಕಾರಣದಿಂದ ಕನ್ನಡ ಬಿಗ್‌ ಬಾಸ್‌ ಸೀಸನ್‌ 10 ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ ಹುಲಿ ಉಗುರು ಧರಿಸಿದ್ದ ಕಾರಣಕ್ಕೆ ಬಿಗ್‌ ಬಾಸ್‌ ಮನೆಯಿಂದಲೇ ಬಂಧನಕ್ಕೆ ಒಳಗಾಗಿದ್ದ ಅವರು ಬಳಿಕ ಸ್ಪರ್ಧೆ ಮುಂದುವರಿಸಿದ್ದರು. ಬಳಿಕ ಶೋ ಬಿಟ್ಟು ಮಧ್ಯದಿಂದಲೇ ಹೊರ ಹೋಗುವುದಾಗಿ ಹೇಳಿ ಸುದ್ದಿಯಾಗಿದ್ದರು. 

ಅವರಿಗೆ 2 ವರ್ಷಗಳ ಹಿಂದೆಯೇ ಮದುವೆಯಾಗಿದೆ ಎನ್ನುವ ವಿಚಾರ ಇದೀಗ ಮುನ್ನಲೆಗೆ ಬಂದಿದೆ. ಇದೀಗ ಎಲ್ಲೆಡೆ ಮದುವೆಯಾಗಿರುವ ವರ್ತೂರು ಸಂತೋಷ್ ಅವರಿಗೆ ಹೆಣ್ಣು ಮಗುವಿದೆ ಎನ್ನುವ ವಿಚಾರವೇ ಚರ್ಚೆಯಾಗುತ್ತಿದೆ. ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವರ್ತೂರು ಸಂತೋಷ್ ಅವರದ್ದು ಎನ್ನಲಾದ ಮದುವೆಯ ಫೋಟೊ, ವಿಡಿಯೊ ಹರಿದಾಡುತ್ತಿದೆ.

ಎರಡು ವರ್ಷಗಳ ಹಿಂದೆಯೇ ವರ್ತೂರು ಸಂತೋಷ್ ಅವರಿಗೆ ಮದುವೆ ಆಗಿದೆ. ಎಸ್‌.ಜಯಶ್ರೀ ಎಂಬುವರನ್ನ ವರ್ತೂರು ಸಂತೋಷ್ ವರಿಸಿದ್ದಾರೆ. ಅವರಿಗೆ ಮಗುವೂ ಇದೆ. ಬಳಿಕ ಮನಸ್ತಾಪ ಎದುರಾಗಿ ಪತಿ-ಪತ್ನಿ ದೂರವಾಗಿದ್ದಾರೆ ಎನ್ನಲಾಗುತ್ತಿದೆ. ಸಂತೋಷ್ ಸಹೋದರ ಈ ಬಗ್ಗೆ ಮಾತನಾಡಿದ್ದು, ಸಂತೋಷ್ ಅವರಿಗೆ ಮದುವೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಮದುವೆಯಾಗಿ ಸುಮಾರು ಎರಡು ವರ್ಷ ಆಗಿದೆ ಎಂದ ವರ್ತೂರು ಸಹೋದರ ಮಧು ಹೇಳಿದ್ದಾರೆ. 

ಜಯಶ್ರೀ ಗರ್ಭಿಣಿಯಾಗಿದ್ದಾಗಲೇ ತವರಿಗೆ ತೆರಳಿದ್ದಾರೆ. ತವರು ಮನೆಯವರೇ ಅವರನ್ನು ವಾಪಸ್ ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಅವರ ಪತ್ನಿ ಜಯಶ್ರೀ ಅವರ ತಂದೆ ವರ್ತೂರ್ ಸಂತೋಷ್ ಮೇಲೆ ಆರೋಪಗಳ ಹೋರಿಸಿದ್ದು ವರ್ತೂರ್ ಸಂತೋಷ್ ಈ ಕುರಿತಾಗಿ ಏನು ಹೇಳಿಕೆ ನೀಡುತ್ತಾರೆ ಕಾದು ನೋಡಬೇಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.