ಮ್ಯಾಕ್ಸ್ ಸಿನಿಮಾ ನೋಡಿ ಮುಖಕ್ಕೆ ಉಗಿದಂಗೆ ಮಾತಾನಾಡಿದ ಪ್ರೇಕ್ಷಕ
| Dec 25, 2024, 16:37 IST
ಕನ್ನಡದ ಬಹುನಿರೀಕ್ಷಿತ ಮ್ಯಾಕ್ಸ್ ಸಿನಿಮಾ ಇದೀಗ ಬಿಡುಗಡೆಯಾಗಿ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಸುಮಾರು ಎರಡು ವರ್ಷಗಳ ಬಳಿಕ ಸುದೀಪ್ ಅವರ ಈ ಸಿನಿಮಾ ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿ ಬಿಡುಗಡೆಯಾಗಿದೆ. ಈ ಸಿನಿಮಾ ಕನ್ನಡ ಸಿನಿಲೋಕದಲ್ಲಿ ಹೊಸ ದಾಖಲೆ ಸೃಷ್ಟಿ ಮಾಡಲಿದೆ ಅಂತ ಈ ಮೊದಲೇ ಸಿನಿಮಾ ನಿರ್ದೇಶಕರು ಹೇಳಿಕೊಂಡಿದ್ದರು.
ಇದೀಗ ಬಿಡುಗಡೆಯಾದ ಮ್ಯಾಕ್ಸ್ ಸಿನಿಮಾ ಬಾರಿ ಸದ್ದು ಮಾಡುತ್ತಿದೆ. ಸುದೀಪ್ ಅವರ ನಟನೆಯನ್ನು ನೋಡಿದ ಅಭಿಮಾನಿಗಳು ಸಕ್ಕತ್ ಫಿದಾ ಆಗಿಬಿಟ್ಟಿದ್ದಾರೆ. ಹೌದು, ಸುದೀಪ್ ಅವರ Different ನಟನೆ ಮೂಲಕ ಕನ್ನಡಿಗರಿಗೆ ಬಾಡೂಟ ಬಡಿಸಿದಂತಾಗಿದೆ.
ಹೌದು, ಸುದೀಪ್ ಅವರ ಮ್ಯಾಕ್ಸ್ ಸಿನಿಮಾ ಇದೀಗ ಗೆದ್ದು ಬಿಟ್ಟಿದೆ. ಸುದೀಪ್ ಅವರ ಅಭಿಮಾನಿಗಳು ಹುಚ್ಚರಾಗಿದ್ದಾರೆ. ನೆಚ್ಚಿನ ನಟನ ನಟನೆಗೆ ಫಿದಾ ಆಗಿದ್ದಾರೆ. ಇಷ್ಟು ಮಾತ್ರವಲ್ಲದೇ ಮಾಧ್ಯಮಗಳ ಮುಂದೆ ಬಂದು ಕಿಚ್ಚನ ಡೈಲಾಗ್ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಒಟ್ಟಾರೆಯಾಗಿ ಕಿಚ್ಚನ ಮ್ಯಾಕ್ಸ್ ಈ ಬಾರಿ ನೂರಾರು ಕೋಟಿ ಕಲೆಕ್ಷನ್ ಮಾಡುವುದರಲ್ಲಿ ಅನುಮಾವಿಲ್ಲ