ಕನ್ನಡದ‌ ನಟನ ಜೊತೆ ಚೈತ್ರ ಕುಂದಾಪುರ ಮದುವೆ ಫಿಕ್ಸ್;

 | 
Nz
 ಅಂತಿಂಥ ಹೆಣ್ಣು ನಾನಲ್ಲ ಅನ್ನುತ್ತಾ ಬಿಗ್ಬಾಸ್ ಮನೆಗೆ ಬಂದು ಖಡಕ್ ಆಗಿ ಆಡುತ್ತಿರುವ ಹಿಂದೂ ಫೈರ್ ಬ್ರ್ಯಾಂಡ್ ಎಂದೇ ಕರೆಸಿಕೊಳ್ಳುವ ಚೈತ್ರಾ ಕುಂದಾಪುರ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರಲ್ಲಿ ಮಾತಿನಿಂದಲೇ ಪ್ರಭಾವ ಬೀರುತ್ತಿರುವ ಸ್ಪರ್ಧಿ. ಚೈತ್ರಾ ಕುಂದಾಪುರ ಫೈರ್‌ ಬ್ರ್ಯಾಂಡ್‌ ಎಂದೇ ಹೆಸರು ಪಡೆದವರು. ಮಾತಲ್ಲೇ ಎಲ್ಲರನ್ನೂ ಗೆಲ್ಲುವ ತಾಕತ್ತಿರುವ ಚೈತ್ರಾ ಕುಂದಾಪುರ ಒಂದು ಸಂಗತಿಯನ್ನು ರಿವೀಲ್‌ ಮಾಡಿದ್ದಾರೆ. 
ಹೌದು ಚೈತ್ರಾ, ಹಂಸಾ ಹಾಗೂ ಮಾನಸಾ ಮೂವರೂ ಬೆಡ್‌ ರೂಮಿನಲ್ಲಿ ಮಾತನಾಡುತ್ತ ಕುಳಿತಿರುತ್ತಾರೆ. ಈ ವೇಳೆ ಶಾಕಿಂಗ್‌ ವಿಚಾರವೊಂದನ್ನು ಚೈತ್ರಾ ಕುಂದಾಪುರ ಬಿಚ್ಚಿಟ್ಟಿದ್ದಾರೆ.ನಾನು ಸಹ ವಿಕ್ಕಿ ಜೊತೆ ಕ್ಲೋಸ್ ಇದ್ದೇನೆ. ಅನೇಕ ಬಾರಿ ಸುರೇಶ್​ ಅಣ್ಣ ಇದನ್ನು ಹೇಳ್ತಾನೆ ಇದ್ದಾರೆ. ನನ್ನ ವಿಚಾರದಲ್ಲಿ ಲವ್‌ಸ್ಟೋರಿ ಅಂತೆಲ್ಲ ಯಾರೇ ಅಂದರೂ ಮೆಟ್ಟು​ ತೆಗೆದುಕೊಂಡು ಹೊಡೆಯುತ್ತೇನೆ ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ.
ಇನ್ನು ಮಾತಾಡುತ್ತಾ ಮದುವೆ ಫಿಕ್ಸ್​ ಮಾಡಿಕೊಂಡು ಇಲ್ಲಿಗೆ ಬಂದಿದ್ದೇನೆ. ಯಾರ ಜೊತೆಯೂ ಸಂಬಂಧ ಕಟ್ಟೋದಕ್ಕೂ ನಾನು ಬಿಡಲ್ಲ ಎಂದರು ಚೈತ್ರಾ ಕುಂದಾಪುರ ಹೇಳಿದ್ದಾರೆ. ಬಿಗ್ ಬಾಸ್​ನಿಂದ ಹೊರ ಹೋದರೂ ನನಗೆ ಚಿಂತೆ ಇಲ್ಲ. ನನ್ನ ಕ್ಯಾರೆಕ್ಟರ್‌ಗೆ ಯಾರಾದರೂ ಕೈ ಹಾಕಿದರೆ ಸುಮ್ಮನೇ ಬಿಡಲ್ಲ ನಾನು. ಅದು ಅಲ್ಲದೇ ನಾನು ಮದುವೆ ಫಿಕ್ಸ್‌ ಮಾಡಿಕೊಂಡು ಬಂದಿದ್ದೇನೆ’ ಎಂದು ಹೇಳಿದ್ದಾರೆ. ಆದರೆ, ಮದುವೆ ಗಂಡು ಯಾರು ಎಂಬುದನ್ನು ಮಾತ್ರ ರಿವೀಲ್ ಮಾಡಿಲ್ಲ.
ಕಳೆದ ಕೆಲವು ತಿಂಗಳುಗಳ ಹಿಂದೆಯಷ್ಟೇ ಚೈತ್ರಾ ಕುಂದಾಪುರ ಅವರು ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸುವ ಆಮಿಷಯೊಡ್ಡಿ 5,00,00,000 ರೂಪಾಯಿ ಹಣ ಪಡೆದ ಆರೋಪವನ್ನು ಹೊತ್ತಿದ್ದು, ಪೊಲೀಸರು ಅವರನ್ನು ಬಂಧಿಸಿದ್ದರು. ಬಳಿಕ ಅವರು ಈ ಆರೋಪವನ್ನು ತಳ್ಳಿ ಹಾಕಿದ್ದು, ಪ್ರಕರಣದಲ್ಲಿ ಅವರು ಜೈಲು ಸೇರಿ ಬಂದಿದ್ದಾರೆ. ಆದರೆ ಇದೀಗ ಅವರೇ ಹೇಳುವ ಪ್ರಕಾರ, ಬಿಗ್ ಬಾಸ್ ಮನೆಯೂ ಜೈಲಿನ ಅನುಭವ ಸಿಕ್ಕಿತೇ ಎನ್ನುವ ಪ್ರಶ್ನೆಗಳು ಎದ್ದಿವೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.