ನಾನು ಬೆವರು ಸುರಿಸಿ ದುಡಿದು ಇವತ್ತು ಈ ಮಟ್ಟಕ್ಕೆ ಬೆಳೆದು ನಿಂತಿದ್ದೇನೆ, ಸೋನು ಗೌಡ
Jan 25, 2025, 21:48 IST
|

ವಿವಾದಗಳಿಂದಲೇ ಫೇಮಸ್ ಆಗಿರುವ ಬಿಗ್ ಬಾಸ್ ಸ್ಪರ್ಧಿ, ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಇತ್ತೀಚಿಗೆ ಅಪ್ಲೋಡ್ ಮಾಡುತ್ತಿರುವ ಪ್ರತಿಯೊಂದು ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಅದರಲ್ಲೂ ಗೋವಾದಲ್ಲಿ ಒಂದು ಲಕ್ಷ ಖರ್ಚು ಮಾಡಿದ್ದು, 30 ಸಾವಿರ ರೂಪಾಯಿ ಇಟ್ಕೊಂಡು ಸುತ್ತಾಡಿದ್ದು ಹಾಗೆ 60 ಸಾವಿರ ರೂಪಾಯಿಗೆ ಶಾಪಿಂಗ್ ಮಾಡಿದ್ದು ವೈರಲ್ ಆಗಿದೆ.
ಇಷ್ಟು ಹಣ ಖರ್ಚು ಮಾಡುತ್ತಿರುವ ಸೋನುಗೆ ಎಲ್ಲಿಂದ ಹಣ ಬರ್ತಿದೆ? ದುಡಿಮೆ ಏನು ಎಂದು ಕಾಮೆಂಟ್ ಮಾಡಿದ್ದವರಿಗೆ ಉತ್ತರಿಸಿದ್ದಾರೆ. ಗೋವಾಗೆ ಬಂದ ತಕ್ಷಣ ಒಂದು ವಿಡಿಯೋ ಅಪ್ಲೋಡ್ ಮಾಡಿದ್ದೆ. ತುಂಬಾ ಹಣ ವೇಸ್ಟ್ ಮಾಡುತ್ತಿದ್ದೀರಾ ಹಾಗೆ ಹೀಗೆ ಎಂದು ನೆಗೆಟಿವ್ ಕಾಮೆಂಟ್ ಮಾಡುತ್ತಿದ್ದೀರಿ. ಗುರು ಒಂದು ವಿಚಾರವನ್ನು ನಾನು ಕ್ಲಿಯರ್ ಮಾಡುತ್ತೀನಿ, ನಾನು ಕಷ್ಟ ಪಟ್ಟ ವಿಡಿಯೋ ಮಾಡುತ್ತೀನಿ ಪ್ರಮೋಷನ್ ಮಾಡುತ್ತೀನಿ ಅದರಿಂದ ಹಣವನ್ನು ದುಡಿಯುತ್ತಿದ್ದೀನಿ.
ಕಷ್ಟ ಪಟ್ಟು ದುಡಿದು ನನಗೆ ನಾನು ಮಾಡಿಕೊಳ್ಳಬೇಕು. ನನಗೆ ಮಾಡಿಕೊಳ್ಳದೆ ಬೇರೆ ಯಾರಿಗೆ ಮಾಡಬೇಕು? ಆಟೋ ಟ್ರೈವರ್‌ಗಳು ಕಷ್ಟ ಪಟ್ಟು ದುಡಿಯುತ್ತಾರೆ ಎಷ್ಟು ಖರ್ಚು ಮಾಡಬೇಕು ಎಷ್ಟು ಉಳಿಸಬೇಕು ಅಂತ ಗೊತ್ತಿದೆ. ಸಿನಿಮಾ ಸ್ಟಾರ್‌ಗಳು ಕೂಡ ದುಡಿದು ಖರ್ಚು ಮಾಡುತ್ತಾರೆ. ಹಾಗೆ ನಾನು ಕೂಡ ಸೋಷಿಯಲ್ ಮೀಡಿಯಾದಲ್ಲಿ ಮಾಡುತ್ತಿರುವೆ. ಕೆಲವೊಂದು ಆಪ್‌ಗಳ ಜೊತೆ ನಾನು ಟೈ ಅಪ್ ಮಾಡಿಕೊಂಡಿದ್ದೀನಿ ಹಲವಾರು ಪ್ರಮೋಷನ್‌ಗಳನ್ನು ಮಾಡಿ ದುಡಿಯುತ್ತಿದ್ದೀನಿ.
ನಾನು ಖರ್ಚು ಮಾಡುವುದರಿಂದ ನಿಮಗೆ ಏನು ಸಮಸ್ಯೆ? ಒಬ್ಬ ಮನುಷ್ಯ ಕಷ್ಟ ಪಟ್ಟು ದುಡಿದು ಅವನಿಗೆ ಅವನು ಖರ್ಚು ಮಾಡಿಕೊಂಡಿಲ್ಲ ಅಂದ್ರೆ ಖಂಡಿತಾ ಅವನು ವೇಸ್ಟ್...ಜೀವನದಲ್ಲಿ ಎಂಜಾಯ್ ಮಾಡಬೇಕು' ಎಂದು ಸೋನು ಗೌಡ ಮಾತನಾಡಿದ್ದಾರೆ.ಮದುವೆ ಆದ ಮೇಲೆ ಜೀವನ ಹೇಗಿರುತ್ತದೆ ಗೊತ್ತಿಲ್ಲ...ನಾನು ಹೀಗೆ ಇರುತ್ತೀನ ಅಲ್ಲ ಮನೆ ಹುಡುಗಿ ತರ ಇರ್ತೀನೋ ಗೊತ್ತಿಲ್ಲ.
ನನ್ನ ಪ್ರಕಾರ ಮದುವೆ ಆಗುವ ಮುನ್ನ ನಾನು ಜೀವನ ಎಂಜಾಯ್ ಮಾಡಬೇಕು. ಸುಮ್ಮನೆ ಕಟ್ಟ ಕಾಮೆಂಟ್ ಮಾಡುವುದು ಬಿಟ್ಟು ನಿಮ್ಮ ಕೆಲಸ ನೋಡಿಕೊಳ್ಳಿ. ನನಗೆ ದುಡ್ಡು ಎಲ್ಲಿಂದ ಬರುತ್ತ ಅಂತ ಕೇಳುವುದು ಬಿಟ್ಟು ಬಾಯಿ ಮುಚ್ಚಿಕೊಂಡು ನೀವು ಕೂಡ ವಿಡಿಯೋ ಮಾಡಿ ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿ ಆಗ ನಿಮಗೂ ಕೂಡ ಹಣ ಬರುತ್ತೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.