ಬಿಗ್ಬಾಸ್ ಮನೆಗೆ ಬೀಗ ಹಾಕಿದ ಪೊಲೀ ಸರು, ಕಾರಣ ಕೇಳಿ ಸ್ವತಃ ಕಿಚ್ಚ ಸುದೀಪ್ ಶಾ ಕ್

 | 
Bk
 ಕನ್ನಡಿಗರ ಮೆಚ್ಚಿನ ಶೋ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋ ಬಿಗ್‌ ಬಾಸ್‌’ ಸೆಟ್‌ ಹಾಕಿರುವ ರಾಮೋಹಳ್ಳಿ ಗ್ರಾಮ ಪಂಚಾಯಿತಿಯ ಮಾಳಿಗೊಂಡನಹಳ್ಳಿ ಸರ್ವೇ ನಂ.128/1ರ ಸ್ಥಳದ ವಾಣಿಜ್ಯ, ವ್ಯಾಪಾರ ‌ ವಸತೀಯೇತರ ವ್ಯವಹಾರದ ಲೈಸೆನ್ಸ್‌ ರದ್ದು ಮಾಡಿದ್ದು, ಶೋ ಸ್ಥಗಿತಗೊಳಿಸಿ ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರ ಜಿಪಂ ಸಿಇಒ ಲತಾ ಕುಮಾರಿ ಸೂಚನೆ ನೀಡಿದ್ದಾರೆ.
ಬೆಂಗಳೂರು ದಕ್ಷಿಣ ತಾಲೂಕಿನ ಮಾಳಿಗೊಂಡನಹಳ್ಳಿಯಲ್ಲಿ ವಾಣಿಜ್ಯ ಕಾರ್ಯಕ್ರಮ ರಿಯಾಲಿಟಿ ಶೋ “ಬಿಗ್‌ಬಾಸ್‌’ ಕಾರ್ಮಿಕ ಇಲಾಖೆ, ಸ್ಥಳೀಯ ಗ್ರಾಪಂ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯದೇ ಅಕ್ರಮ, ಕಾನೂನು ಬಾಹಿರವಾಗಿ ನಡೆಸಲಾಗುತ್ತಿದ್ದು, ಇದರ ಬಗ್ಗೆ ಜಿಲ್ಲಾಧಿಕಾರಿಗಳಿಗೆ ರಾಘವೇಂದ್ರಚಾರ್‌ ಎಂಬ ವ್ಯಕ್ತಿ ದೂರು ನೀಡಿದ್ದು, ಜಿಲ್ಲಾಧಿಕಾರಿಗಳು ಭೂಪರಿವರ್ತನೆ ಆದೇಶ ರದ್ದು ಮಾಡಿದ್ದಾರೆ.
ರಾಮೋಹಳ್ಳಿ ಗ್ರಾಪಂ ನವರು “ಬಿಗ್‌ಬಾಸ್‌’ ಶೋ ನಡೆಸಲು ಅನುಮತಿ ನೀಡಿಲ್ಲ ಎಂಬುದಾಗಿ ತಿಳಿಸಿರುವ ಕಾರಣ ಕೂಡಲೇ ಪರಿಶೀಲಿಸಿ ನಿಯಮಾನುಸಾರ ಅಗತ್ಯ ಕ್ರಮಕ್ಕೆ ಸಿಇಒ ಲತಾ ಕುಮಾರಿ ಸೂಚನೆ ನೀಡಿದ್ದು, ಅದರಂತೆ ರಾಮೋಹಳ್ಳಿ ಪಿಡಿಒ, ಜಮೀನಿನ ಮಾಲಿಕ ಪಡೆದಿದ್ದ ವಾಣಿಜ್ಯ, ವ್ಯಾಪಾರ ವಸತೀಯೇತರ ವ್ಯವಹಾರದ ಲೈಸೆನ್ಸ್‌ ರದ್ದು ಮಾಡಿದ್ದು, ಬಿಗ್‌ಬಾಸ್‌ ಶೋ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ.
ಬಿಗ್‌ಬಾಸ್‌ ನಡೆಯುತ್ತಿರುವ ಜಾಗದ ಲೈಸೆನ್ಸ್‌, ಭೂಪರಿವರ್ತನೆ ಆದೇಶ ಸಹ ರದ್ದು ಮಾಡಿದ್ದು, ಬಿಗ್‌ ಬಾಸ್‌ ಶೋ ನಿಲ್ಲಿಸಲು ಬೆಂಗಳೂರು ನಗರ ಜಿಪಂ ಸಿಇಒ ಸೂಚನೆ ನೀಡಿದ್ದಾರೆ. ಇನ್ನು ಈ ಹಿಂದೆ ಕೂಡ ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದ್ದು, ಕೂಡಲೇ ಈ ರಿಯಾಲಿಟಿ ಶೋ ಸ್ಥಗಿತ ಮಾಡುವಂತೆ ರಾಜ್ಯ ಮಹಿಳಾ ಆಯೋಗಕ್ಕೆ ರಕ್ಷಿತಾ ಸಿಂಗ್ ಎನ್ನುವವರು ದೂರು ನೀಡಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.